ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಕಾರ್ಯಾಚರಣೆ: 15 ಆಟೊ ಜಪ್ತಿ

Last Updated 19 ಜುಲೈ 2019, 7:04 IST
ಅಕ್ಷರ ಗಾತ್ರ

ಕೋಲಾರ: ಸಂಚಾರ ನಿಯಮ ಉಲ್ಲಂಘಿಸುವ ಆಟೊ ಚಾಲಕರ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ನಗರದ ವಿವಿಧೆಡೆ ಗುರುವಾರ ಕಾರ್ಯಾಚರಣೆ ನಡೆಸಿ ಒಂದೇ ದಿನ 15ಕ್ಕೂ ಹೆಚ್ಚು ಆಟೊಗಳನ್ನು ಜಪ್ತಿ ಮಾಡಿದರು.

ಅತಿ ವೇಗದಲ್ಲಿ ವಾಹನ ಚಾಲನೆ, ಹೆಚ್ಚಿನ ಪ್ರಯಾಣ ದರ ವಸೂಲಿ, ನಿಗದಿತ ಮಿತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವುದು ಹಾಗೂ ಶಾಲಾ ಮಕ್ಕಳನ್ನು ಕುರಿಗಳಂತೆ ಕರೆದೊಯ್ಯುವ ಸಂಬಂಧ ಸಾರ್ವಜನಿಕರಿಂದ ಪೊಲೀಸರಿಗೆ ಸಾಕಷ್ಟು ದೂರು ಸಲ್ಲಿಕೆಯಾಗಿದ್ದವು.

ಸಾರ್ವಜನಿಕರ ದೂರು ಆಧರಿಸಿ ಕಾರ್ಯಾಚರಣೆಗಿಳಿದ ಅಧಿಕಾರಿಗಳು ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೊಗಳನ್ನೇ ಗುರಿಯಾಗಿಸಿಕೊಂಡು ಪರಿಶೀಲನೆ ನಡೆಸಿದರು. ಪ್ರಮುಖ ವೃತ್ತ ಹಾಗೂ ಜಂಕ್ಷನ್‌ಗಳಲ್ಲಿ ಆಟೊಗಳನ್ನು ತಡೆದ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸದಂತೆ ಚಾಲಕರಿಗೆ ಎಚ್ಚರಿಕೆ ನೀಡಿದರು.

ಅಲ್ಲದೇ, ಸಾರಿಗೆ ಇಲಾಖೆ ನಿಗದಿಪಡಿಸಿದ ಮಿತಿಯಂತೆ ಶಾಲಾ ಮಕ್ಕಳು ಹಾಗೂ ಪ್ರಯಾಣಿಕರನ್ನು ಕರೆದೊಯ್ಯಬೇಕು. ಅತಿ ವೇಗವಾಗಿ ವಾಹನ ಚಾಲನೆ ಮಾಡಬಾರದು. ಕಾಲಕಾಲಕ್ಕೆ ಚಾಲನಾ ಪರವಾನಗಿ (ಡಿ.ಎಲ್‌) ಹಾಗೂ ವಾಹನದ ರಹದಾರಿ ಪತ್ರ (ಪರ್ಮಿಟ್‌) ನವೀಕರಿಸಿಕೊಳ್ಳಬೇಕು ಎಂದು ಸೂಚಿಸಿದರು.

ಪೊಲೀಸರ ಪರಿಶೀಲನೆ ವೇಳೆ ಸಾಕಷ್ಟು ಆಟೊ ಚಾಲಕರ ಬಳಿ ಡಿ.ಎಲ್‌ ಹಾಗೂ ಪರ್ಮಿಟ್‌ ಇಲ್ಲದಿರುವ ಸಂಗತಿ ಬೆಳಕಿಗೆ ಬಂದಿತು. ಮತ್ತೆ ಕೆಲ ಆಟೊ ಚಾಲಕರು ವಾಹನದ ವಿಮೆ ನವೀಕರಿಸದಿರುವುದು, ವಾಹನದ ಮಾಲಿನ್ಯ ಪ್ರಮಾಣ ತಪಾಸಣೆ ಮಾಡಿಸದಿರುವುದು ಕಂಡುಬಂದಿತು.

ಪೊಲೀಸರು ತಪಾಸಣೆ ಮಾಡಿದ ಆಟೊಗಳ ಪೈಕಿ 10 ವಾಹನಗಳ ಚಾಲಕರ ಬಳಿ ಸಮರ್ಪಕ ದಾಖಲೆಪತ್ರಗಳೇ ಇರಲಿಲ್ಲ. ಅಲ್ಲದೇ, ಈ ಚಾಲಕರು ಸಂಚಾರ ನಿಯಮ ಉಲ್ಲಂಘಿಸಿರುವುದು ಪೊಲೀಸ್‌ ಪರಿಶೀಲನೆಯಿಂದ ಗೊತ್ತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT