ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲ್ಡ್‌ಫೀಲ್ಡ್ ಸಹಕಾರ ಸಂಘಕ್ಕೆ ಲಾಭ: ಕೆ.ಬಿ.ಗೋಪಾಲಕೃಷ್

Last Updated 14 ನವೆಂಬರ್ 2020, 14:26 IST
ಅಕ್ಷರ ಗಾತ್ರ

ಕೋಲಾರ: ‘ಸಂಘವು ಆರಂಭದ ವರ್ಷದಲ್ಲೇ 3,500 ಸದಸ್ಯರನ್ನು ಹೊಂದಿ ₹ 26.29 ಲಕ್ಷ ವಹಿವಾಟು ನಡೆಸಿದ್ದು, ₹ 1.16 ಲಕ್ಷ ಲಾಭ ಗಳಿಸಿದೆ’ ಎಂದು ಗೋಲ್ಡ್‌ಫೀಲ್ಡ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ತಿಳಿಸಿದರು.

ಇಲ್ಲಿ ಶನಿವಾರ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ‘ಸಂಘದ ಆಡಳಿತ ಮಂಡಳಿಯಲ್ಲಿ ಯಾರಿಗೂ ಹಣ ಮಾಡುವ ದುರುದ್ದೇಶವಿಲ್ಲ. ಪ್ರತಿಯೊಬ್ಬರಲ್ಲೂ ಬದ್ಧತೆಯಿದೆ. ನಿರ್ದೇಶಕರು ಆರ್ಥಿಕತೆಗೆ ಧಕ್ಕೆ ಬಾರದಂತೆ ಎಚ್ಚರ ವಹಿಸಿದ್ದಾರೆ’ ಎಂದರು.

‘ಆಡಳಿತ ಮಂಡಳಿಯಲ್ಲಿ ನಿವೃತ್ತ ಪ್ರಾಂಶುಪಾಲರು, ಅಧ್ಯಾಪಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂಘದ ಹಣವನ್ನು ಉಳಿಸಿ ಬೆಳೆಸುವ ಆಲೋಚನೆ ಎಲ್ಲರದು. ಈಗ ಸಂಘದಿಂದ ₹ 2 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ. ಸಾಲ ಪಡೆದ ಸದಸ್ಯರು ಶೇ 100ರಷ್ಟು ಮರುಪಾವತಿ ಮೂಲಕ ಸಂಘದ ಆರ್ಥಿಕತೆಗೆ ಧಕ್ಕೆಯಾಗದಂತೆ ಸಹಕಾರ ನೀಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಇ-ಸ್ಟಾಂಪ್ ಮಾರಾಟಕ್ಕೆ ಅನುಮತಿಗಾಗಿ ಕೋರಲಾಗಿದೆ. ಸದ್ಯದಲ್ಲೇ ಇ-ಸ್ಟಾಂಪ್ ವಹಿವಾಟು ಆರಂಭಿಸಲಾಗುತ್ತದೆ. ಸೇವಾ ಶುಲ್ಕ, ಕಮಿಷನ್‍ ಪ್ರಮಾಣವನ್ನು ಇತರೆ ಸಂಘಗಳಿಗಿಂತ ಕಡಿಮೆ ದರದಲ್ಲಿ ವಿಧಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಪಿಗ್ಮಿ, ಕಾಯಂ ಠೇವಣಿ, ಆರ್‌ಡಿ ಖಾತೆ ಮೂಲಕ ಹಣ ಸಂಗ್ರಹಿಸಲಾಗುತ್ತಿದೆ. ಅನೇಕರು ಸೊಸೈಟಿ ಮೇಲಿನ ನಂಬಿಕೆಯಿಂದ ಹಣ ಇಡಲು ಮುಂದೆ ಬಂದಿದ್ದಾರೆ. ಸದಸ್ಯರ ಸಂಖ್ಯೆ ಹೆಚ್ಚಿಸಿ ಸಂಘವನ್ನು ಲಾಭದತ್ತ ಕೊಂಡೊಯ್ಯಲು ಎಲ್ಲರೂ ಸಹಕಾರ ನೀಡಬೇಕು’ ಎಂದು ಸಂಘದ ಉಪಾಧ್ಯಕ್ಷ ಶ್ರೀರಾಮ್ ಮನವಿ ಮಾಡಿದರು.

ಹೆಚ್ಚಿನ ಸಾಲ: ‘ಮುಂದಿನ ವರ್ಷದಲ್ಲಿ ಸಂಘದಿಂದ ಹೆಚ್ಚಿನ ಸದಸ್ಯರಿಗೆ ಸಾಲ ನೀಡಲಾಗುತ್ತದೆ. ಇ-ಸ್ಟಾಂಪ್ ಮಾರಾಟ ವ್ಯವಸ್ಥೆ ಜಾರಿ ಸೇರಿದಂತೆ ಹಲವು ಗುರಿ ಹೊಂದಿದ್ದೇವೆ’ ಎಂದು ಸಂಘದ ನಿರ್ದೇಶಕ ಕೆ.ವಿ.ಮುನಿವೆಂಕಟಪ್ಪ ಮಾಹಿತಿ ನೀಡಿದರು.

ಸಂಘದ ನಿರ್ದೇಶಕರಾದ ಸುವರ್ಣರೆಡ್ಡಿ, ಕೆ.ವಿ.ಮುನಿರಾಜು, ಎ.ಎಸ್.ನಂಜುಂಡೇಗೌಡ, ಡಿ.ನಾಗರಾಜಪ್ಪ, ಬಾಬು, ಮಹಮ್ಮದ್‌ ಶೋಯಬ್, ಎಸ್.ಭರತ್, ವಕೀಲರಾದ ಕೃಷ್ಣಾರೆಡ್ಡಿ, ಜಯರಾಮ್‌, ಅಮರೇಂದ್ರ, ಮುನೇಗೌಡ, ಪ್ರಾಧ್ಯಾಪಕ ಗೌರಿನಾಯ್ಡು, ನಿವೃತ್ತ ಪ್ರಾಂಶುಪಾಲ ವೆಂಕಟರಾಜು, ಕಾನೂನು ಸಲಹೆಗಾರ ಟಿ.ಜಿ.ಮನ್ಮಥರೆಡ್ಡಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT