ಕೋಲಾರ: ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರಿಗೆ ನೆರವಾಗಲು, ರೇಷ್ಮೆ ಬೆಳೆ ಉತ್ತೇಜಿಸಲು ಹಾಗೂ ಈ ಕ್ಷೇತ್ರವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ರೇಷ್ಮೆ ಪಾರ್ಕ್ ಸ್ಥಾಪನೆ ಬಗ್ಗೆ ಸಂಸದ, ಶಾಸಕರು ಹಾಗೂ ಮುಖಂಡರು ಪ್ರಸ್ತಾಪ ಇರಿಸಿದರು.

ಈಗಾಗಲೇ ಕೆಲವೆಡೆ ಜಾಗ ಕೂಡ ಗುರುತಿಸಿದ್ದು, ಸರ್ಕಾರಗಳಿಂದ ಒಪ್ಪಿಗೆ ಲಭಿಸಿದರೆ ಮುಂದಿನ ಹೆಜ್ಜೆ ಇಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರೇಷ್ಮೆ ಮ್ಯೂಸಿಯಂ ತೆರೆಯಬೇಕೆಂಬ ಆಗ್ರಹವೂ ವ್ಯಕ್ತವಾಯಿತು.

ಕೇಂದ್ರ ರೇಷ್ಮೆ ಮಂಡಳಿ ಕೂಡ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ನೆರವಾಗಲು ಮುಂದಾಗಿದ್ದು, ರೇಷ್ಮೆ ಉತ್ಕೃಷ್ಟ ಕೇಂದ್ರ (ಸೆಂಟರ್ ಫಾರ್ ಎಕ್ಸಲೆನ್ಸ್) ತೆರೆದು ರೇಷ್ಮೆ ಪ್ರವಾಸ ಗ್ರಾಮ (ಸಿಲ್ಕ್ ಟೂರಿಸಂ ವಿಲೇಜ್) ಮಾಡುವ ಪ್ರಸ್ತಾಪ ಇರುವುದಾಗಿ ಮಂಡಳಿ ಅಧಿಕಾರಿಗಳು ಹೇಳಿದರು.

ಕೋಲಾರ ಜಿಲ್ಲೆಯಲ್ಲಿ 23 ಸಾವಿರ ರೇಷ್ಮೆ ಬೆಳೆಗಾರರಿದ್ದು, ಇಲ್ಲಿಯೇ ಕ್ಲಸ್ಟರ್ ಮಾಡಿ ರೇಷ್ಮೆ ಸೀರೆ ತಯಾರಿಸಿ ಮಾರಾಟ ಮಾಡಬಹುದು ಎಂಬ ಸಲಹೆ ನೀಡಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಕೋಲಾರ ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ರೇಷ್ಮೆ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಅಂಶಗಳು ಪ್ರಸ್ತಾಪವಾದವು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಸದ ಎಂ.ಮಲ್ಲೇಶ್ ಬಾಬು, ‘ರೇಷ್ಮೆ ಕೃಷಿ ವೃದ್ಧಿಗೆ ಏನೇನು ಮಾಡಬಹುದು ಎಂಬುದರ ಬಗ್ಗೆ ಯೋಜನಾ ವರದಿ ಸಿದ್ಧಪಡಿಸಿ ಕೊಡಿ. ನಮ್ಮ ರಾಜ್ಯದವರೇ ಆದ ಎಂಎಸ್ಎಂಇ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಜೊತೆ ಮಾತನಾಡಿ ಯೋಜನೆ ತರುತ್ತೇನೆ. ಈ ಬಗ್ಗೆ ರೇಷ್ಮೆ ಇಲಾಖೆ ಅಧಿಕಾರಿಗಳು ಕಾಳಜಿ ವಹಿಸಿ ವರದಿ ಕೊಡಬೇಕು’ ಎಂದು ಸೂಚನೆ ನೀಡಿದರು.

ಮುಳಬಾಗಿಲು ತಾಲ್ಲೂಕಿನ ದೇವರಾಯನಸಮುದ್ರ ಸೇರಿದಂತೆ ವಿವಿಧೆಡೆ ಜಮೀನು ಇದೆ. ಈ ಬಗ್ಗೆ ಶಾಸಕರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೇಷ್ಮೆ ಬೆಳೆಗಾರರ ಜೊತೆಗೆ ಇರಲಿವೆ ಎಂದರು.

ಕೇಂದ್ರದಿಂದ ಸಬ್ಸಿಡಿ ರಾಜ್ಯ ಸರ್ಕಾರಕ್ಕೆ ಹೋಗುವ ಬದಲು ನೇರವಾಗಿ ರೈತರಿಗೆ ಹೋಗುವಂತೆ ಮಾಡಬೇಕು. ಈ ಸಂಬಂಧ ಇತರ ಸಂಸದರ ಜೊತೆ ಕೇಂದ್ರದ ಕೃಷಿ ಸಚಿವರು, ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಲಾಗುವುದು. ಈಗಾಗಲೇ ಕೃಷಿ ಸಚಿವರನ್ನು ಭೇಟಿಯಾಗಿ ಜಿಲ್ಲೆಗೆ ಮಾವು ಹಾಗೂ ಟೊಮೆಟೊ ಸಂಸ್ಕರಣ ಘಟಕ ಸ್ಥಾಪಿಸಲು ಕೋರಿದ್ದೇನೆ ಎಂದು ಹೇಳಿದರು.

ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ‘ರೇಷ್ಮೆ ಪಾರ್ಕ್ ನಿರ್ಮಿಸಲು ವೇಮಗಲ್ನಲ್ಲಿ 25 ಎಕರೆ ಜಮೀನು ಇದೆ. ಇಲ್ಲವೇ 12 ಎಕರೆ ಜಾಗ ಕಾಂತರಾಜ್ ಸರ್ಕಲ್ನಲ್ಲಿದೆ. ಈ ಸಂಬಂಧ ಸರ್ಕಾರ ಮಟ್ಟದಲ್ಲಿ ಚರ್ಚಿಸುತ್ತೇನೆ’ ಎಂದರು.

ಬಟ್ಟೆ, ಶೂಗೆ ದರ ನಿಗದಿಮಾಡುತ್ತಾರೆ. ಏಕೆ ತಾನು ಬೆಳೆದ ಬೆಳೆಗೆ ರೈತ ದರ ನಿಗದಿಪಡಿಸಬಾರದು ಎಂದು ಪ್ರಶ್ನಿಸಿದರು.

ಅಧಿಕಾರಿಗಳು ಮಲಗಿರುತ್ತಾರೆ. ಅವರನ್ನು ಬಡಿದು ಎಬ್ಬಿಸಬೇಕು. ಯೋಜನೆ ತಯಾರಿಸಿಕೊಟ್ಟರೆ ಕೋಲಾರದಲ್ಲಿ ರೇಷ್ಮೆ ಪಾರ್ಕ್ ಮಾಡಬಹುದು ಎಂದರು.

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ‘ವೈಜ್ಞಾನಿಕ ಪದ್ಧತಿಯಲ್ಲಿ ರೇಷ್ಮೆ ಬೆಳೆ ಬೆಳೆಯಬೇಕು. ಸಬ್ಸಿಡಿ ನಂಬಿ ಬೆಳೆ ಬೆಳೆದವರು ಯಾರೂ ಉದ್ಧಾರ ಆಗಲ್ಲ. ರೈತರಿಗೆ ಮಾಹಿತಿ ಕೊಡುವ ಕೆಲಸ ಮಾಡಬೇಕು’ ಎಂದು ನುಡಿದರು.

ಟೊಮೆಟೊಗೆ ವೈರಸ್ ಹೆಚ್ಚಿದೆ. ಕೋಲಾರದಲ್ಲಿ ಮಾತ್ರ ಏಕೆ ಬರುತ್ತಿದೆ? ಉಳಿದ ಕಡೆ ಏಕೆ ವೈರಸ್ ಇಲ್ಲ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ‘ರೈತರು ನಿತ್ಯ ಒಂದಿಲ್ಲೊಂದು ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಕೇಂದ್ರ ಸರ್ಕಾರವು ಬೆಳೆ ಅಧ್ಯಯನ ಮಾಡಿ ಖರ್ಚುವೆಚ್ಚ ನೋಡಿಕೊಂಡು ಪ್ರತಿ ಬೆಳೆಗೆ ಬೆಲೆ ನಿಗದಿ ಮಾಡಬೇಕು. ಬೆಲೆ ಆಯೋಗ ಮಾಡಬೇಕು’ ಎಂದು ತಿಳಿಸಿದರು.

ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ಅಧ್ಯಕ್ಷ, ರೇಷ್ಮೆ ಮಂಡಳಿ ಸದಸ್ಯ ಕೆ.ವಿ.ಸತೀಶ್ ಮಾತನಾಡಿ, 'ರೇಷ್ಮೆಯಿಂದ ಗ್ರಾಮೀಣ ಉದ್ಯೋಗ ಸಿಕ್ಕಿದ್ದು, ಮಹಿಳಾ ಸಬಲೀಕರಣ ಆಗುತ್ತಿದೆ. ಬೇಸರದ ಸಂಗತಿ ಎಂದರೆ ರೇಷ್ಮೆ ಬೆಳೆಗಾರನಿಗೆ ಸುರಕ್ಷೆ ಇಲ್ಲವಾಗಿದೆ. ಬೆಲೆ ಏರಿಳಿತವಾಗುತ್ತಿದೆ. ರೈತ ಕುಸಿದರೆ ರೇಷ್ಮೆ ಕೃಷಿ ಕುಸಿಯುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅರ್ಥಿಕ ಶಕ್ತಿ ತುಂಬಬೇಕು. ಸಬ್ಸಿಡಿ ಹೆಚ್ಚಿಸಬೇಕು' ಎಂದು ಆಗ್ರಹಿಸಿದರು.

ಕಾಂತರಾಜ್ ಸರ್ಕಲ್ನಲ್ಲಿ ಸಿಲ್ಕ್ ಮ್ಯೂಸಿಯಂ ಸ್ಥಾಪಿಸಬೇಕು. ಮಿಶ್ರ ತಳಿ ಬದಲು ದ್ವಿತಳಿ ಬೆಳೆಯಬೇಕು. ಏಳೆಂಟು ತಿಂಗಳಿಂದ ಬಾಕಿ ಉಳಿದಿರುವ ಹಣ ಕೊಡಿಸಬೇಕು. ಸಿಬ್ಬಂದಿ ಕೊರತೆ ಇದ್ದು, ಭರ್ತಿ ಮಾಡಬೇಕು. ನಾವು ಭಿಕ್ಷೆ ಕೇಳುತ್ತಿಲ್ಲ; ಹಕ್ಕು ಮಂಡಿಸುತ್ತಿದ್ದೇವೆ. ಮನವಿ ಅಲ್ಲ; ರೈತ ಸಮುದಾಯದ ಆಗ್ರಹ ಎಂದರು.

ಕೃಷಿಕ ಸಮಾಜ ಅದ್ಯಕ್ಷ ಡಿ.ಎಲ್.ನಾಗರಾಜ್, ರೇಷ್ಮೆ ಕ್ಷೇತ್ರ ಉದ್ಯಮ ಆಗಬೇಕು. ಇಲ್ಲದಿದ್ದರೆ ರೇಷ್ಮೆ ಕೃಷಿ ಉಳಿಯಲ್ಲ. ಪಾರ್ಕ್ ಮಾಡಿ ಎಂದು ಒತ್ತಾಯಿಸಿದರು.

ಕೇಂದ್ರ ರೇಷ್ಮೆ ಮಂಡಳಿ ಜಂಟಿ ಕಾರ್ಯದರ್ಶಿ ನರೇಶ್ ಬಾಬು, ರೇಷ್ಮೆ ಇಲಾಖೆ ಉಪನಿರ್ದೇಶಕ ಆಂಜನೇಯರೆಡ್ಡಿ, ಗೂಡು ಮಾರುಕಟ್ಟೆ ಉಪನಿರ್ದೇಶಕ ಎಸ್.ಎನ್.ಶ್ರೀನಿವಾಸ್, ಸಂಘದ ಪ್ರಧಾನ ಕಾರ್ಯದರ್ಶಿ ಶಂಕರೇಗೌಡ, ಉಪಾಧ್ಯಕ್ಷ ಎಚ್.ವಿ.ರಮೇಶ್, ಕೆ.ಎನ್.ಮಹೇಶ್, ರೇಷ್ಮೆ ಮಂಡಳಿ ಮಾಜಿ ವಿಜ್ಞಾನಿ ಇಟಗಿ, ರೇಷ್ಮೆ ಬೆಳೆಗಾರರು ಇದ್ದರು.

ರೇಷ್ಮೆ ಇಲಾಖೆ ಡಿಡಿಗೆ

ವೇದಿಕೆಯಲ್ಲೇ ಎಚ್ಚರಿಕೆ ಆಂಜನೇಯರೆಡ್ಡಿ ಜಿಲ್ಲೆಗೆ ರೇಷ್ಮೆ ಇಲಾಖೆ ಉಪನಿರ್ದೇಶಕರಾಗಿ ಬಂದ ಮೇಲೆ ಜನಪ್ರತಿನಿಧಿಗಳನ್ನು ಭೇಟಿಯಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ವೇದಿಕೆಯಲ್ಲಿಯೇ ತರಾಟೆಗೆ ತೆಗೆದುಕೊಂಡರು. ‘ಈವರೆಗೆ ಕ್ಷೇತ್ರದ ಶಾಸಕರನ್ನೇ ಭೇಟಿ ಮಾಡದ ತಾವು ಇನ್ನು ರೈತರನ್ನು ಹೇಗೆ ಭೇಟಿ ಆಗುತ್ತೀರಿ? ಶಾಸಕರು ಸಂಸದರು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಆಗಿ ಯೋಜನೆಗಳ ಬಗ್ಗೆ ಚರ್ಚಿಸಬೇಡವೇ? ಇದನ್ನು ಎಚ್ಚರಿಕೆಯಾಗಿ ಪರಿಗಣಿಸಿ ಕೆಲಸ ಮಾಡಬೇಕು’ ಎಂದು ಸೂಚನೆ ನೀಡಿದರು. ಆಗ ವೇದಿಕೆಯಲ್ಲಿ ರೇಷ್ಮೆ ಬೆಳೆಗಾರರು ಚಪ್ಪಾಳೆ ತಟ್ಟಿ ‘ಸರಿಯಾಗಿ ಹೇಳಿದ್ದೀರಿ’ ಎಂದು ಸಮರ್ಥಿಸಿದರು.

ರೈತರು ಸಿಡಿದೆದ್ದರೆ ಸುನಾಮಿ!

ಪ್ರಾಕೃತಿಕವಾಗಿ ಸೃಷ್ಟಿಯಾಗುವ ಸುನಾಮಿ ತಡೆಯಬಹುದು ಆದರೆ ರೈತರು ಸಿಡಿದೆದ್ದರೆ ಸೃಷ್ಟಿಯಾಗುವ ಸುನಾಮಿ ತಡೆಯುವುದು ಕಷ್ಟ ಎಂದು ಕೊತ್ತೂರು ಮಂಜುನಾಥ್ ಹೇಳಿದರು. ಕೃಷಿ ಬಿಟ್ಟು ಬೇರೆ ಕೆಲಸಗಳತ್ತ ಸಾಗುತ್ತಿರುವ ಈಗಿನ ಪರಿಸ್ಥಿತಿ ಗಮನಿಸಿದರೆ ಮುಂದೆ ರೈತರು ಸಿಗುವುದು ಕಷ್ಟ. ರೈತರನ್ನು ಕಳೆದುಕೊಳ್ಳುವುದೂ ಕಾಲು ಕೈ ಕಳೆದುಕೊಳ್ಳುವುದೂ ಒಂದೇ. ಮುಂದೆ ಮೂರನೇ ಮಹಾಯುದ್ಧವೇನೂ ನಡೆದರೆ ಅದು ಆಹಾರಕ್ಕಾಗಿ ಮಾತ್ರ ಎಂದರು.

ರೇಷ್ಮೆ ಸೀರೆ ಇಲ್ಲೇ ತಯಾರಾಗಿ ಮಾರಾಟ ನಡೆಯಲಿ

ಬೆಳೆಗಾರರು ರೇಷ್ಮೆ ಉತ್ಪಾದನೆಗೆ ಜತೆಗೆ ರೀಲರ್ಗಳಾಗಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಉದ್ಯಮಿಗಳಾಗಲು ಮುಂದಾಗಬೇಕು. 200 ರೀಲರ್ಗಳು ನಮ್ಮ ರೈತರೇ ಆಗಿರಬೇಕು. ಬೆಳೆಗಾರರು ಮುಂದೆ ಬಂದು ಕ್ಲಸ್ಟರ್ ಮಾಡಿದರೆ ಎಂಎಸ್ಎಂಇಯಿಂದ ಸಬ್ಸಿಡಿ ದೊರೆಯುತ್ತದೆ. ಸ್ಪಿನ್ನಿಂಗ್ ಕಡೆಗೂ ಗಮನ ಹರಿಸಬೇಕು. ಈ ಸಂಬಂಧ ರೇಷ್ಮೆ ಇಲಾಖೆಯ ಉಪನಿರ್ದೇಶಕ ಆಂಜನೇಯರೆಡ್ಡಿ ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ಮಲ್ಲೇಶ್ ಬಾಬು ತಿಳಿಸಿದರು. ಬರೀ ಗೂಡು ತಯಾರು ಅಷ್ಟೇ ಅಲ್ಲ; ಮುಂದಿನ ಪ್ರಕ್ರಿಯೆಗೆ ರೈತರು ತಮ್ಮನ್ನು ಒಡ್ಡಿಕೊಳ್ಳಬೇಕು. ರೇಷ್ಮೆ ಸೀರೆ ಖರೀದಿಗಾಗಿ ಜಿಲ್ಲೆಯಿಂದ ಕಂಚಿಗೆ ಹೋಗುತ್ತಾರೆ. ರೇಷ್ಮೆ ಸೀರೆ ಇಲ್ಲೇ ತಯಾರಾಗುವ ಮಾರಾಟ ಮಾಡುವ ಮಟ್ಟಕ್ಕೆ ಹೋಗಬೇಕು ಎಂದು ಸಲಹೆ ನೀಡಿದರು.