ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌ | ಮಳೆ ಅವಾಂತರ: ನೀರು ಹೊರಹಾಕಲು ಸಾಧನ ಖರೀದಿ

Published 9 ಮೇ 2024, 14:06 IST
Last Updated 9 ಮೇ 2024, 14:06 IST
ಅಕ್ಷರ ಗಾತ್ರ

ಕೆಜಿಎಫ್‌: ಮಳೆ ಬಂದು ತಗ್ಗು ಪ್ರದೇಶದಲ್ಲಿ ನೀರು ತುಂಬಿದಾಗ ನೀರನ್ನು ಹೊರ ಹಾಕಲು ಐದು ಪೋರ್ಟಬಲ್‌ ಮೋಟಾರ್‌ಗಳನ್ನು ನಗರಸಭೆಯಿಂದ ಖರೀದಿಸಲಾಗಿದೆ ಎಂದು ಪೌರಾಯುಕ್ತ ಪವನ್‌ಕುಮಾರ್ ತಿಳಿಸಿದರು.

ನಗರಸಭೆಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯಿಂದಾಗಿ ನಗರದ ತಗ್ಗು ಪ್ರದೇಶದಲ್ಲಿ ಉಂಟಾದ ಆತಂಕಕಾರಿ ಸನ್ನಿವೇಶವನ್ನು ಮನಗಂಡು ಜಿಲ್ಲಾಧಿಕಾರಿ ಮೋಟಾರ್‌ ಖರೀದಿಸಲು ಸೂಚನೆ ನೀಡಿದ್ದರು. ಒಂದು ನಿಮಿಷಕ್ಕೆ 1,100 ಲೀಟರ್ ನೀರನ್ನು ಹೊರ ಹಾಕುವ ಸಾಮರ್ಥ್ಯ ಮೋಟಾರ್ ಹೊಂದಿದೆ. ನಗರದ 35 ವಾರ್ಡ್‌ಗಳನ್ನು ಐದು ವಿಭಾಗಗಳನ್ನಾಗಿ ಮಾಡಲಾಗಿದ್ದು, ಒಂದು ವಿಭಾಗಕ್ಕೆ ಒಂದು ಮೋಟಾರ್‌ ಅನ್ನು ಸಂಬಂಧಿಸಿದ ಮೇಸ್ತ್ರಿಗಳ ವಶಕ್ಕೆ ಒಪ್ಪಿಸಲಾಗಿದೆ. ಅಂತಹ ವಾರ್ಡ್‌ನಲ್ಲಿ ನೀರಿನ ಅವಘಡ ಸಂಭವಿಸಿದ್ದಲ್ಲಿ ಕೂಡಲೇ ಅವರು ಸ್ಥಳಕ್ಕೆ ಹೋಗಿ ನೀರನ್ನು ತೆಗೆಯಲು ಸಹಾಯ ಮಾಡುತ್ತಾರೆ ಎಂದು ಹೇಳಿದರು.

ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕಾದ ಮೇಸ್ತ್ರಿಗಳ ಮೊಬೈಲ್ ನಂಬರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಐದು ನಿಮಿಷದಲ್ಲಿ ಒಂದು ಟ್ಯಾಂಕರ್ ನೀರನ್ನು ಹೊರ ಹಾಕುವ ಸಾಮರ್ಥ್ಯವಿರುವ ಮೋಟಾರ್‌ರನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಮಳೆ ಮತ್ತು ಬಿರುಗಾಳಿ ಸಂದರ್ಭದಲ್ಲಿ ನೆಲಕ್ಕುರುಳುವ ಮರಗಳನ್ನು ಕಡಿಯಲು ಆಧುನಿಕ ಕಟ್ಟರ್‌ಗಳನ್ನು ಕೂಡ ಖರೀದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್‌, ಆರೋಗ್ಯ ನಿರೀಕ್ಷಕಿ ಷಣ್ಮುಗ ಸುಂದರಿ, ಶಶಿಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT