ಶ್ರೀನಿವಾಸಪುರ: ಪಟ್ಟಣದ ಹೈದರ್ ಅಲಿ ಮೊಹಲ್ಲಾದಲ್ಲಿ ಜೆಡಿಎಸ್ ಪಕ್ಷದ ಕೆಲ ಮುಖಂಡರು ಹಾಗೂ ಕಾರ್ಯಕರ್ತರು ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಜೆಡಿಎಸ್ ಪಕ್ಷದಿಂದ ಮಾಜಿ ಪುರಸಭೆ ಸದಸ್ಯ ಶಬ್ಬೀರ್ ಖಾನ್, ಮಾಜಿ ಪುರಸಭೆ ಅಧ್ಯಕ್ಷ ಮಹಬೂಬ್ ಶರೀಫ್, ಏಜಾಜ್ ಅಹ್ಮದ್ ಖಾನ್, ಎಲ್.ಆರ್. ಸರ್ದಾರ್, ಅಮಾನುಲ್ಲಾ ಖಾನ್, ಜಮೀರ್ ಅಹ್ಮದ್ ಖಾನ್ ಹಾಗೂ ಮುಕ್ತಿಯಾರ್ ಅಹ್ಮದ್ ಖಾನ್ ಅವರನ್ನು ಪಕ್ಷಕ್ಕೆ ರಮೇಶ್ ಕುಮಾರ್ ಬರಮಾಡಿಕೊಂಡರು.

‘ಪಕ್ಷ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಅಭಿವೃದ್ಧಿ ಪರ ರಾಜಕೀಯಕ್ಕೆ ಆದ್ಯತೆ ನೀಡುವ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಶಕ್ತಿಶಾಲಿಯಾಗಿಸಲು ಹೊಸ ಸದಸ್ಯರ ಸೇರ್ಪಡೆ ಸಹಕಾರಿಯಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ಕೆ.ಅನೀಸ್ ಅಹ್ಮದ್, ಮುಬೀನ್, ರಹೀಮ್ ಖಾನ್, ನಿಸಾರ್ ಅಹ್ಮದ್ ಖಾನ್, ಅತೀಕುಲ್ಲಾ, ಟಿಎಂಬಿ ಮುಕ್ತಿಯಾರ್, ಕಬೀರ್ ಅಹ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ಅಕ್ಬರ್ ಷರೀಫ್, ಜಾಹಿದ್ ಅನ್ಸಾರಿ, ಮುಸ್ತಫಾ ಷರೀಫ್, ಸೈಯದ್ ಖಾದರ್, ಮ್ಯಾಕಲ ನಾರಾಯಣಸ್ವಾಮಿ, ಎನ್.ಬಿ. ಬ್ಯಾಟಪ್ಪ, ದಿಂಬಾಳ್ ಅಶೋಕ್, ಬಿ.ಎಲ್. ಸೂರಣ್ಣ, ಬಿ.ಎಂ. ಪ್ರಕಾಶ್, ಶಂಕರ್, ಸಂಜಯ್ ಸಿಂಗ್, ಮುನಿರಾಜ್, ಸೀತಾರಾಮರೆಡ್ಡಿ, ವೇಣು, ಹರೀಶ್ ಯಾದವ್, ನರಸಿಂಹಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.