ಶ್ರೀನಿವಾಸಪುರ: ಭೂ ಸಂತ್ರಸ್ತ ಹೋರಾಟ ಸಮಿತಿಯಿಂದ ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಿಂದ ವಲಯ ಅರಣ್ಯ ಅಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಪ್ರತಿಭಟನನಿರತರು ಅರಣ್ಯ ಇಲಾಖೆಯ ವಿರುದ್ಧ ಘೋಷಣೆ ಕೂಗಿ ರಸ್ತೆಯ ಮಧ್ಯೆ ಪ್ರತಿಭಟನೆ ನಡೆಸಿದರು.

ಗುರುವಾರದೊಳಗೆಸಿಮೆಂಟ್ ಪಿಲ್ಲರ್ಗಳನ್ನು ತೆರವುಗೊಳಿಸದಿದ್ದರೆ ಸ್ವಇಚ್ಛೆಯಿಂದಲೇ ರೈತರೇ ತೆರವುಗೊಳಿಸಬೇಕಾಗುತ್ತದೆ ಎಂದು ಕೆಪಿಆರ್ಎಸ್ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಎಚ್ಚರಿಸಿದರು.

ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ, ‘ಹಿಂದೆ ರೈತರ ತರಕಾರಿ, ಬೆಳೆಯನ್ನು ದೌರ್ಜನ್ಯದಿಂದ ನಾಶ ಮಾಡಿ ಅಪಾರ ನಷ್ಟ ಉಂಟು ಮಾಡಿದ್ದರು. ಇದರಿಂದ ರೈತರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಈ ರೀತಿಯ ರಾಕ್ಷಸಿ ಹಾಗೂ ಅಮಾನವೀಯ ಕ್ರಮಗಳನ್ನು ಭೂಮಿ ಸಂತ್ರಸ್ತರ ಹೋರಾಟ ಸಮಿತಿ ಖಂಡಿಸುತ್ತದೆ. ರೈತರ ತಂಟೆಗೆ ಬಂದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡುವುದು ಖಚಿತ’ ಎಂದು ಹೇಳಿದರು.

ಕೋಮುಲ್ ಅಡ್ಡಗಲ್ ಕ್ಷೇತ್ರದ ನಿರ್ದೇಶಕ ಕೆ.ಕೆ.ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ಕುಮಾರ್ ಮಾತನಾಡಿದರು.

ಎಸಿಎಫ್ ಗಿರೀಶ್ ಮಾತನಾಡಿ, ‘ಇನ್ನುಮುಂದೆ ಯಾವುದೇ ಕಾರಣಕ್ಕೂ ನಮ್ಮ ಇಲಾಖೆಯಿಂದ ರೈತರ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳುವುದಿಲ್ಲ. ನಮ್ಮ ಇಲಾಖೆಗೆ ಸಂಬಂದಿಸಿದ ಭೂದಾಖಲೆಗಳನ್ನು ಎಸ್ಐಟಿ ಸಮಿತಿಗೆ ವರದಿ ಸಲ್ಲಿಸಲಾಗುವುದು’ ಎಂದರು.

ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನನಿರತ ರೈತರನ್ನು ಸಮಾಧಾನಪಡಿಸಿದರು.

ಕೆಪಿಆರ್ಎಸ್ ಕೆಪಿಆರ್ಎಸ್ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಯಶ್ವಂತ್ , ಜಿಲ್ಲಾಧ್ಯಕ್ಷ ಟಿ.ಎಂ.ವೆಂಕಟೇಶ್, ವಿವಿಧ ಸಂಘಟನೆ ಮುಖಂಡರಾದ ಬಂದರ್ಲಹಳ್ಳಿ ಮುನಿಯಪ್ಪ, ಅಂಬೇಡ್ಕರ್ಪಾಳ್ಯ ನರಸಿಂಹಮೂರ್ತಿ, ಬದ್ರಿನರಸಿಂಹ, ಶಿವಪುರ ಗಣೇಶ್, ಶಂಕರ್, ಎಸ್.ಜಿ.ಜಗದೀಶ್ಕುಮಾರ್,ಜೆವಿ ಕಾಲೋನಿ ವೆಂಕಟೇಶ್, ಎಸ್.ಜಿ.ವಿ.ವೆಂಕಟೇಶ್, ಗುರಪ್ಪ, ವಿನೋಧ್, ಡಿಎಸ್ಆರ್, ಶ್ರೀನಾಥರೆಡ್ಡಿ ಗುರುಪ್ರಸಾಧ್, ಹೂಹಳ್ಳಿ ಕೃಷ್ಣಪ್ಪ, ನಾಗದೇನಹಳ್ಳಿ ಶ್ರೀನಿವಾಸ್, ಸಾಧಿಕ್ಅಹ್ಮದ್, ಬಿ.ಕೆ.ಶ್ರೀನಿವಾಸ್, ಕೆಪಿಆರ್ಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಎ.ಸೈಯದ್ಫಾರುಕ್ ಇದ್ದರು.