ಅಧಿಕ ಮಾವು ಇಳುವರಿಗೆ ತರಬೇತಿ

7
ಜಿಲ್ಲೆಗೆ ಇಸ್ರೇಲ್ ವಿಜ್ಞಾನಿ, ಅಧಿಕಾರಿಗಳ ತಂಡ ಭೇಟಿ

ಅಧಿಕ ಮಾವು ಇಳುವರಿಗೆ ತರಬೇತಿ

Published:
Updated:
Prajavani

 ಕೋಲಾರ: ಇಸ್ರೇಲ್ ಮಾದರಿಯಲ್ಲಿ ಮಾವು ಬೆಳೆಯುತ್ತಿರುವ ತಾಲ್ಲೂಕಿನ ಅರಹಳ್ಳಿ ಪ್ರಗತಿಪರ ರೈತ ಶೇಕ್ ಅಹಮದ್ ಮಾವಿನ ತೋಟಕ್ಕೆ ಇಸ್ರೇಲ್‌ನ ವಿಜ್ಞಾನಿಗಳ ಹಾಗೂ ಉನ್ನತ ಅಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿ ವೀಕ್ಷಿಸಿದರು.

ಇಸ್ರೇಲ್‌ನ ವಿಜ್ಞಾನಿ ಡಾನ್‌ ಕುರ್ಷ್ ಮಾವಿನ ತೋಟ ನಿರ್ವಹಣೆ ಕುರಿತು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈಡ ಹೂವು ಬಿಡುವ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ರೈತ ಶೇಕ್‌ ಅಹಮದ್‌ಗೆ ಮಾಹಿತಿ ನೀಡಿ, ತೋಟ ನಿರ್ವಹಣೆಗೆ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.

ರೈತ ಶೇಕ್ ಅಹಮದ್ ಮಾತನಾಡಿ, ‘6.5 ಎಕರೆಯಲ್ಲಿ ಒಟ್ಟು 1,800 ಮಾವಿನ ಗಿಡಗಳಿದ್ದು, ಇದನ್ನು ನಾಟಿ ಮಾಡಿ 6 ವರ್ಷಗಳಾಗಿದೆ. ಸದ್ಯಕ್ಕೆ ಎರಡು ಭಾರಿ ಔಷದಿ ಸಿಂಪಡಿಸಲಾಗಿದೆ. ವಾರಕ್ಕೆ ಎರಡು ಭಾರಿ ಹಾನಿ ನೀರಾವರಿ ಪದ್ದತಿ ಮೂಲಕ ನೀರು ಹರಿಸಲಾಗುತ್ತಿದೆ’ ಎಂದರು.

‘ಹಳೇ ಪದ್ದತಿ ಅಳವಡಿಕೆಯಿಂದ ಇಳುವರಿ ಬರುತ್ತಿಲ್ಲ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಇಸ್ರೇಲ್ ಮಾದರಿ ಬಗ್ಗೆ ತರಬೇತಿ ಕೊಡಿಸಿದ ಮೇಲೆ ಹೊಸ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಮಲ್ಲಿಕಾ, ಅಲ್ಪಾನ್ಸೋ, ದಶೇರಿ, ಬೆನಿಶಾ ತಳಿ ಸಸಿಗಳನ್ನು ನಾಟಿ ಮಾಡಿದ್ದು, ಉತ್ತಮ ಇಳುವರಿ ಬರುತ್ತಿದೆ. ಹೂವು ಅಥವಾ ಕಾಯಿ ಹಂತದಲ್ಲಿ ಮಳೆ ಬಿದ್ದರೆ ಹೆಚ್ಚು ಹಾನಿಯಾಗುತ್ತದೆ’ ಎಂದು ವಿಜ್ಞಾನಿಗಳ ಗಮನಕ್ಕೆ ತಂದರು.

‘ಪ್ರಕೃತಿ ವಿಕೋಪಕ್ಕೆ ಅಗುವ ನಷ್ಟವನ್ನು ಯಾರು ತಡೆಯಲು ಸಾಧ್ಯವಿಲ್ಲ. ಗಿಡಗಳು ಚಿಕ್ಕದಾಗಿರುವುದರಿಂದ ಬಲೆ ಅಳಡಿಸಿದರೆ ಅಲ್ಲಿಕಲ್ಲು ಬಿದ್ದರೂ ಫಸಲು ನಷ್ಟವಾಗುವುದಿಲ್ಲ. ಜತೆಗೆ ಊಜಿ ಇತರೆ ಕೀಟ ಬಾಧೆಯಿಂದಲ್ಲೂ ತಪ್ಪಿಸಬಹುದು’ ಎಂದು ವಿಜ್ಞಾನಿ ಡಾನ್‌ ಕುರ್ಷ್ ಸಲಹೆ ನೀಡಿದರು.

‘ಕೋಲಾರ ಜಿಲ್ಲೆಯ ಮಾವು ಉತ್ಪಾದನೆಯಲ್ಲಿ ವಿಶ್ವಮಟ್ಟದಲ್ಲಿ ಸ್ಥಾನಮಾನ ಪಡೆದುಕೊಂಡಿದೆ. ರೈತರು ಆರ್ಥಿಕವಾಗಿ ಸಬಲರಾಗಲು ವಾಣಿಜ್ಯ ಬೆಳೆಗಳನ್ನೇ ನಂಬುತ್ತಾರೆ. ಆಧುನಿಕ ಪದ್ದತಿ ಅಳವಡಿಸುವುದರಿಂದ ಒಂದು ಎಕರೆ ಪ್ರದೇಶದಲ್ಲಿ 10ರಿಂದ 15 ಟನ್ ಇಳುವರಿ ಪಡೆಯಬಹುದು’ ಎಂದು ಹೇಳಿದರು.

ರೋಗ ಕೀಟ ತಡೆಗಟ್ಟುವುದು, ಸವರಿಕೆ, ಕೊಯ್ಲು ಪದ್ದತಿ ಕುರಿತು ಮಾಹಿತಿ ನೀಡಿದ ತಂಡ, ಕೋಲಾರ, ಶ್ರೀನಿವಾಸಪುರದಲ್ಲಿ ಇಸ್ರೇಲ್ ಮಾದರಿ ತಂತ್ರಜ್ಞಾನ ಅಳವಡಿಸಿರುವ ತೋಟಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜ್ಞಾನಿ ಡಾನ್ ಅಲುಫ್- ಮಾಶಾವ್, ಟೆಲ್ ಅವಿವ್ ವಿಶ್ವವಿದ್ಯಾಲಯದ ಸಹಾಯಕ ಉಪನ್ಯಾಸಕ ರಾಮ್ ಫಿಶ್ಮನ್, ತೋಟಗಾರಿಕೆ ಸಹಾಯಕ ನಿರ್ದೇಶಕ ಮಂಜುನಾಥ್‌ರೆಡ್ಡಿ, ಹೋಗಳಗೆರೆ ಮಾವು ಉಸ್ಕೃಷ್ಠ ಕೇಂದ್ರದ ಯೋಜನಾಧಿಕಾರಿ ಲಾವಣ್ಯ, ಸಲಹೆಗಾರ ಹಾಲಲಿಂಗಯ್ಯ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !