ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರನಾಗನಹಳ್ಳಿಯಲ್ಲಿ ನೀರಿಗೆ ಬರ

Last Updated 6 ಏಪ್ರಿಲ್ 2020, 17:01 IST
ಅಕ್ಷರ ಗಾತ್ರ

ಕೆಜಿಎಫ್‌: ನಗರದ ಹೊರವಲಯದ ಯರನಾಗನಹಳ್ಳಿಯಲ್ಲಿ ಕುಡಿಯುವ ನೀರಿಗೆ ತೀವ್ರ ಬರ ಉಂಟಾಗಿದ್ದು, ಕೆಲವು ದಿನಗಳಿಂದ ಗ್ರಾಮಸ್ಥರು ನೀರಿಗಾಗಿ ಪರದಾಡುತ್ತಿದ್ದಾರೆ.

ಕಮ್ಮಸಂದ್ರ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಸೇರುವ ಗ್ರಾಮದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗ್ರಾಮದಲ್ಲಿದ್ದ ಕೊಳವೆಬಾವಿ ಬತ್ತಿಹೋಗಿದೆ. ಹೊಸ ಕೊಳವೆಬಾವಿ ಕೊರೆಯಿಸಿ ಎಂದು ಗ್ರಾಮಸ್ಥರು ಹಲವಾರು ಬಾರಿ ಕಮ್ಮಸಂದ್ರ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಶುದ್ಧ ನೀರಿನ ಘಟಕದಿಂದ ಮೂರು ದಿನಕ್ಕೆ ಮೂರು ಬಿಂದಿಗೆ ನೀರು ಸಿಗುತ್ತಿಲ್ಲ. ಆ ನೀರಿಗಾಗಿ ಮೂರು ಹಳ್ಳಿಗಳ ಗ್ರಾಮಸ್ಥರು ಬರುತ್ತಾರೆ. ಮನುಷ್ಯರಿಗೇ ನೀರಿಲ್ಲ. ಇನ್ನು ಜಾನುವಾರುಗಳ ಗತಿ ಏನು ಎಂಬ ಭೀತಿಯಲ್ಲಿ ಜನರಿದ್ದಾರೆ.

ಗ್ರಾಮದ ಎಲ್ಲಾ ನಿವಾಸಿಗಳಿಗೆ ಟ್ಯಾಂಕರ್ ಮೂಲಕ ನೀರು ಖರೀದಿ ಮಾಡುವ ಆರ್ಥಿಕ ಶಕ್ತಿ ಇಲ್ಲ. ನೀರೇ ಇಲ್ಲದಿದ್ದರೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಹೇಗೆ ಎಂದು ಗ್ರಾಮದ ಮಹಿಳೆಯರು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT