ಕೋಲಾರ: ಬಯಲುಸೀಮೆ ಜಿಲ್ಲೆಗೆ ನೀರು ತರುವುದಾಗಿ ಕಳೆದ 13 ವರ್ಷಗಳಿಂದ ಎತ್ತಿನಹೊಳೆ ಯೋಜನೆಗೆ ಹಣ ಏರುತ್ತಲೇ ಇದ್ದು, ಸುಮಾರು ₹24 ಸಾವಿರ ಕೋಟಿವರೆಗೆ ತಲುಪಿದೆ. ಅದು ನಮ್ಮ ತೆರಿಗೆ ಹಣ. ಈ ವರೆಗೆ ಎಷ್ಟು ಹಣ ಬಿಡುಗಡೆಯಾಗಿದೆ? ಯಾವ ಗುತ್ತಿಗೆದಾರನಿಗೆ ಎಷ್ಟು ಕೊಟ್ಟಿದ್ದೀರಿ? ಮಧ್ಯವರ್ತಿಗಳು ಹಾಗೂ ಇತರರಿಗೆ ಎಷ್ಟು ಹಣ ಹೋಗಿದೆ ಎಂಬುದಕ್ಕೆ ಸರ್ಕಾರ ಲೆಕ್ಕ ಕೊಡಬೇಕು ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಆಗ್ರಹಿಸಿದರು.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ವೃತ್ತದ ಬಳಿ ಶನಿವಾರ ಬಯಲುಸೀಮೆ ಜಿಲ್ಲೆಗಳಲ್ಲಿ ನೀರಾವರಿ ಯೋಜನೆಗಾಗಿ ಆಗ್ರಹಿಸಿ ಹಮ್ಮಿಕೊಂಡಿದ್ದ ಜಲಾಗ್ರಹ ಹೋರಾಟ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಎತ್ತಿನಹೊಳೆ ನೀರನ್ನು ಬಯಲುಸೀಮೆ ಜಿಲ್ಲೆಗೆಳಿಗೆ ತರಲು ಸಾಧ್ಯವಿಲ್ಲವೆಂದು ಕೆಲ ವರದಿಗಳು ಹೇಳುತ್ತಿವೆ. ಕಾರ್ಯಸಾಧುವಲ್ಲದ ಯೋಜನೆಗೆ ಏಕೆ ಅಷ್ಟೊಂದು ಖರ್ಚು ಮಾಡುತ್ತಿದ್ದೀರಿ? ನಮಗೆ ಮೋಸ ಮಾಡುತ್ತಿದ್ದೀರಾ? ಮಾಹಿತಿ ಹಕ್ಕು ಕಾಯ್ದೆಯಡಿ ಖರ್ಚು ವೆಚ್ಚದ ಮಾಹಿತಿ ಪಡೆಯುತ್ತೇವೆ ಎಂದರು.

ನೀರಾವರಿಗಾಗಿ 30 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಪ್ರತಿಫಲ ಸಿಕ್ಕಿಲ್ಲ. ಜಿಲ್ಲೆಯ ಜನರಿಗೆ ನೀರಿನ ನ್ಯಾಯ ಸಿಕ್ಕಿಲ್ಲ. ಬಯಲುಸೀಮೆ ಜನ ಶುದ್ಧ ಕುಡಿಯುವ ನೀರಿನ ಕೊರತೆಯಿಂದ ನರಳುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತರಲು ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಈಗ ನೀರಾವರಿ ಯೋಜನೆಗಾಗಿ, ಜನರ ಬದುಕು ಕಟ್ಟಿಕೊಳ್ಳಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕು ಎಂದು ಹೇಳಿದರು.

ಇದು ಸರ್ಕಾರಗಳ ಗಮನ ಸೆಳೆಯುವ ಸಮಾವೇಶ. ನಾವು ನೀರಿಗಾಗಿ ಸರ್ಕಾರಗಳ ಬಳಿ ಬೇಡಿಕೆ ಇಡುತ್ತಿಲ್ಲ; ಬದಲಾಗಿ ಒತ್ತಾಯ ಮಾಡುತ್ತಿದ್ದೇನೆ. ಅದು ನಮ್ಮ ಮಾನವೀಯ ಹಕ್ಕು. ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಿದೆ. ನೀರು ಕೊಡದ ಸರ್ಕಾರಗಳ ಮೇಲೆ ನಷ್ಟ ಮಾನನಷ್ಟ ದಾವೆ ಹಾಕಬೇಕು. ಇಷ್ಟ ಬಂದಂತೆ ಆಡಳಿತ ನಡೆಸುವ ದಿನಗಳು ಮುಗಿದಿವೆ. ಕಲಾಪಗಳನ್ನು ಸ್ಥಗಿತಗೊಳಿಸಿ ಹೋರಾಟ ನಡೆಸುತ್ತೇವೆ. ಜನಪ್ರತಿನಿಧಿಗಳನ್ನು ಗ್ರಾಮಗಳಿಗೆ ಬರಲು ಬಿಡಲ್ಲ. ಸುಪ್ರೀಂ ಕೋರ್ಟ್ವರೆಗೆ ಹೋಗಿ ಹೋರಾಟ ನಡೆಸಲು ನಮಗೂ ಗೊತ್ತು ಎಂದು ಎಚ್ಚರಿಕೆ ನೀಡಿದರು.

ಕುಗ್ರಾಮದಲ್ಲಿರುವ ಜನರಿಗೆ ಮನೆ, ನೀರು, ಶಿಕ್ಷಣ, ಆರೋಗ್ಯ ವ್ಯವಸ್ಥೆ ಕಲ್ಪಿಸುವುದು ನಿಜವಾದ ಆಡಳಿತ. ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ಟಿಕೆಟ್, ₹ 2 ಸಾವಿರ ನೀಡುವುದು ಸ್ವಾಗತಾರ್ಹ. ಆದರೆ ಅದು ಸರಿಯಾದ ಆಡಳಿತ ಅಲ್ಲ. ಗ್ಯಾರಂಟಿ ಬದಲಿಗೆ ಉದ್ಯೋಗ ನೀಡಬೇಕು ಎಂದರು.

ಮಾಜಿ ಶಾಸಕರೊಬ್ಬರು ಕೆ.ಸಿ.ವ್ಯಾಲಿ ನೀರು ಹರಿಸುವಾಗ ಕುಡಿಯುವ ರೀತಿ ನಾಟಕ ಮಾಡಿದರು. ಆದರೆ, ನೀರು ಕುಡಿಯದೆ ಚಲ್ಲಿದರು. ಸಣ್ಣ ನೀರಾವರಿ ಸಚಿವರು ಎರಡೂವರೆ ವರ್ಷಗಳಿಂದ ನೀರಾವರಿ ಹೋರಾಟದ ಸ್ಥಳಕ್ಕೆ ಏಕೆ ಬರಲಿಲ್ಲ? ಬೃಹತ್ ನೀರಾವರಿ ಸಚಿವರ ಆದ್ಯತೆ ಏನು? ಭೂ ವ್ಯವಹಾರ, ಕೈಗಾರಿಕಾ ಮಾತ್ರವೇ ಎಂದು ಪ್ರಶ್ನಿಸಿದರು.

ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ‘ಈಗಾಗಲೇ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಜೊತೆ ಮಾತನಾಡಿದ್ದೇನೆ. 20 ಟಿಎಂಸಿ ಅಡಿ ನೀರು ಕೇಳಿದ್ದೇವೆ. 15 ದಿನಗಳಲ್ಲಿ ಕರಡು ತಯಾರಿಸಿ ಪೂರಕ ದಾಖಲೆಗಳನ್ನು ಕಳಿಸಲಾಗುವುದು. ಬಜೆಟ್ ಅಧಿವೇಶನದಲ್ಲಿ ಸಂಬಂಧಪಟ್ಟ ಸಚಿವರ ಜೊತೆಯೂ ಮಾತನಾಡುತ್ತೇನೆ. ಕೆಲವೇ ತಿಂಗಳುಗಳಲ್ಲಿ ಸಕಾರಾತ್ಮಕ ಬೆಳವಣಿಗೆ ಆಗಲಿದೆ’ ಎಂದು ಭರವಸೆ ನೀಡಿದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ, ‘ಕೃಷ್ಣಾ ನದಿ ನೀರು ಪಕ್ಕದಲ್ಲೇ ಹರಿಯುತ್ತಿದ್ದರೂ ಸುಮ್ಮನಿದ್ದೇವೆ. ನಾವೇನೂ ಕೈಲಾಗದವರೇ? ಪ್ರತಿ ಮನೆಯಿಂದಲೂ ಹೋರಾಟಕ್ಕೆ ಜನ ಬರಬೇಕು. ಆಗ ಮಾತ್ರ ನೀರಾವರಿ ಯೋಜನೆ ಬರಲು ಸಾಧ್ಯ. ಮಗು ಅಳದೇ ತಾಯಿ ಹಾಲು ಕೊಡುವುದಿಲ್ಲ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ, 'ನೀರಿಗಾಗಿ ಇಷ್ಟೊಂದು ಸುದೀರ್ಘ ಹೋರಾಟ ಎಲ್ಲೂ ನಡೆದಿಲ್ಲ. ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ ಜಲಾಗ್ರಹ ಕಾರ್ಯಕರ್ತರನ್ನು ಹುಟ್ಟು ಹಾಕುತ್ತೇವೆ’ ಎಂದರು.

ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ಮೂಲಕ ತ್ಯಾಜ್ಯ ನೀರು ಹರಿಸಿ ಅಮಾನವೀಯ ಪ್ರಯೋಗ ಮಾಡಿ ಜನರನ್ನು, ಕೃಷಿಯನ್ನು ರೋಗಗ್ರಸ್ತರನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಕೃಷ್ಣಾ ನದಿ ನೀರು ತರಬೇಕಿದೆ. ರಾಜಕೀಯ ಚಳವಳಿ, ರಾಜಕೀಯ ಆಂದೋಲನ ಮಾಡದಿದ್ದರೆ ಕೃಷ್ಣಾ ನದಿ ನೀರು ಸಿಗಲ್ಲ. ಮೂರು ಜಿಲ್ಲೆಯ ಜನರು, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದರು.

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ‘ಜಿಲ್ಲೆಗೆ ನೀರಾವರಿ ತರುವಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆ. ಹೀಗಾಗಿ, ನೀರಾವರಿ ಹೋರಾಟ ನಡೆಯುತ್ತಿದ್ದರೂ ನೀರು ಸಿಕ್ಕಿಲ್ಲ. ಬದಲಾಗಿ ಕೆ.ಸಿ.ವ್ಯಾಲಿ ಯೋಜನೆಯಡಿ ಅವೈಜ್ಞಾನಿಕವಾಗಿ ಶುದ್ಧೀಕರಣ ಮಾಡಿ ವಿಷಯುಕ್ತ ನೀರು ಹರಿಸುತ್ತಿದ್ದಾರೆ. ಹೀಗಾಗಿ, ಮೂರನೇ ಹಂತದ ಶುದ್ಧೀಕರಣ ನಡೆಯಬೇಕು. ಎತ್ತಿನಹೊಳೆ ನೀರು ಬೇಗನೇ ನೀರು ತರಬೇಕು' ಎಂದು ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, 'ಕೆ.ಸಿ.ವ್ಯಾಲಿ ನೀರು ತರುವಾಗ ಶಾಸಕರು ನಾಟಕವಾಡಿ ನಮ್ಮನ್ನು ವಂಚಿಸಿದರು. ನಮಗೆ ಕೋಲಾರ ಮೊದಲ ಆದ್ಯತೆ, ನಂತರ ಪಕ್ಷ. ಈ ಹೋರಾಟ ದೊಡ್ಡ ಮಟ್ಟದಲ್ಲಿ ನಡೆಯಬೇಕು' ಎಂದರು.

ಗೋಪಾಲಗೌಡ ಪ್ರತಿಜ್ಞಾವಿಧಿ ಬೋಧಿಸಿದರು. ಜಲಾಗ್ರಹ ಸಮಾವೇಶದಲ್ಲಿ ಜಿಲ್ಲೆಯ ವಕೀಲರ ತಂಡ ನ್ಯಾಯಾಲಯ ಕಲಾಪಗಳಿಗೆ ರಜೆ ಹಾಕಿ ಪಾಲ್ಗೊಂಡಿತು.

ಮುಖಂಡರಾದ ವೈ.ಸಂಪಂಗಿ, ಹೂಡಿ ವಿಜಯಕುಮಾರ್, ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ್, ರಾಜೇಶ್, ಹೊಳಲಿ ಪ್ರಕಾಶ್, ಕಲ್ವಮಂಜಲಿ ರಾಮುಶಿವಣ್ಣ, ನಾರಾಯಣಸ್ವಾಮಿ, ಕುರುಬರಪೇಟೆ ವೆಂಕಟೇಶ್, ಮುರಳಿಗೌಡ, ಡಾ.ರಮೇಶ್, ಪ್ರವೀಣ್ ಗೌಡ, ರಾಕೇಶ್, ರಮೇಶ್ ಬಾಬು, ಬಿ.ವಿ.ಮಹೇಶ್, ಬಣಕನಹಳ್ಳಿ ನಟರಾಜ್, ಚಿಕ್ಕಬಳ್ಳಾಪುರದ ಸುಷ್ಮಾ, ಸಾಲಾವುದ್ದೀನ್ ಬಾಬು, ಇಂದಿರಾ ರೆಡ್ಡಿ, ದಲಿತ್ ನಾರಾಯಣಸ್ವಾಮಿ, ಆಲಂಗೂರು ಶ್ರೀನಿವಾಸ್, ಎಸ್.ಕೆ.ಚಂದ್ರಶೇಖರ್, ತೂಪಲ್ಲಿ ನಾರಾಯಣಸ್ವಾಮಿ, ವಸಂತಾ ಕವಿತಾ, ಚಿನ್ನಪ್ಪ ರೆಡ್ಡಿ ಇದ್ದರು.

ನೀರು ಬೇಕೆಂಬುದು ನಮ್ಮ ಒತ್ತಾಯ; ಬೇಡಿಕೆ ಅಲ್ಲ: ಗೋಪಾಲಗೌಡ ಸ್ವಾತಂತ್ರ್ಯ ಸಂಗ್ರಾಮ ರೀತಿಯಲ್ಲಿ ನೀರಾವರಿಗೆ ಹೋರಾಟ ಬಯಲುಸೀಮೆಯ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನೀರಾವರಿ

ಸಂಸದ ಮಲ್ಲೇಶ್ ಬಾಬು ಸೌಮ್ಯತನವನ್ನು ಬಿಟ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಕೇಂದ್ರದ ಜೊತೆ ಮಾತನಾಡಿ ಜಿಲ್ಲೆಗೆ ಕೃಷ್ಣಾ ನದಿ ನೀರು ತರಬೇಕು
ಕೆ.ವಿ.ಶಂಕರಪ್ಪ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ

ಸಮಯ ಬಂದಾಗ ಜೋರಾಗಿ ಮಾತನಾಡಿ ಕೆಲಸ ಮಾಡೋಣ. ಕೆಲಸ ಆಗಬೇಕಾದ ಸಂದರ್ಭದಲ್ಲಿ ಸೌಮ್ಯದಿಂದ ಆ ಕೆಲಸ ಮಾಡಿಸಿಕೊಳ್ಳೋಣ
ಎಂ.ಮಲ್ಲೇಶ್ ಬಾಬು ಸಂಸದ

ನೀರು ಹರಿಸಿರುವುದಾಗಿ ಹೇಳುವ ಆಧುನಿಕ ಭಗೀರಥರು ಜಿಲ್ಲೆಯ ಜನರಿಗೆ ಬರೀ ನೋವು ಕೊಡುತ್ತಿದ್ದಾರೆ. ಎತ್ತಿನಹೊಳೆ ನೀರು ಕೊಡುವುದಾಗಿ ದಶಕದಿಂದ ಹೇಳುತ್ತಿದ್ದು ಈವರೆಗೆ ಬಂದಿಲ್ಲ
ಆರ್.ಆಂಜನೇಯ ರೆಡ್ಡಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ

ನನಗೆ ಕಮಿಷನ್ ಯಾವುದೇ ಪದವಿ ಬೇಡ. ನನಗೆ ಬೇಕಿರುವುದು ನನ್ನ ಜನರು ಬದುಕು. ಅದಕ್ಕೆ ಉಸಿರು ಇರುವವರೆಗೆ ಹೋರಾಟ ನಡೆಸುತ್ತೇನೆ. ತಾವು ಹೆದರಬೇಡಿ ತಮ್ಮೊಂದಿಗೆ ನಾನಿರುತ್ತೇನೆ
ವಿ.ಗೋಪಾಲಗೌಡ ನಿವೃತ್ತ ನ್ಯಾಯಮೂರ್ತಿ ಸುಪ್ರೀಂ ಕೋರ್ಟ್

ವಿಧಾನಸೌಧದಲ್ಲಿ ಶೌಚ ತೊಳೆಯಲು ಬಳಕೆ ಬೆಂಗಳೂರಿನಲ್ಲಿ ತ್ಯಾಜ್ಯ ನೀರನ್ನು 3ನೇ ಹಂತದಲ್ಲಿ ಶುದ್ಧೀಕರಿಸಿ ಹರಿಸಲಾಗುತ್ತಿದೆ. ಆ ನೀರನ್ನು ವಿಧಾನಸೌಧದಲ್ಲಿ ಶೌಚಾಲಯ ತೊಳೆಯಲು ಬಳಸಲಾಗುತ್ತಿದೆ. ಹಾಗೆಯೇ ಇನ್ನೊಂದು ಸಂಸ್ಕರಣ ಘಟಕದಿಂದ 3ನೇ ಹಂತದ ಶುದ್ಧೀಕರಿಸಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಶೌಚಾಲಯ ತೊಳೆಯಲು ಪೂರೈಸಲಾಗುತ್ತಿದೆ. ಆದರೆ ಇದೇ ಸರ್ಕಾರ ನಮಗೆ ಕೇವಲ ಎರಡು ಹಂತಗಳಲ್ಲಿ ಸಂಸ್ಕರಿಸಿರುವ ತ್ಯಾಜ್ಯ ನೀರನ್ನು ನಮ್ಮ ಅಡುಗೆ ಮನೆಗೆ ಕಳಿಸುತ್ತಿರುವುದು ಅಮಾನವೀಯ ಎಂದು ಆರ್.ಆಂಜನೇಯ ರೆಡ್ಡಿ ವಾಗ್ದಾಳಿ ನಡೆಸಿದರು.

ತೋಟಗಾರಿಕೆ ಬೆಳೆ ವಿಸ್ತೀರ್ಣ ಕುಂಠಿತ ರಿಯಲ್ ಎಸ್ಟೇಟ್ದಾರರು ಬೆಂಗಳೂರಿನಿಂದ ಕೋಲಾರ ಜಿಲ್ಲೆಗೆ ಬಂದು ಜಮೀನು ಖರೀದಿಸುತ್ತಿದ್ದಾರೆ. ಇನ್ನೊಂದೆಡೆ ರೋಗರುಜಿನಗಳಿಂದ ತೋಟಗಾರಿಕೆ ಬೆಳೆ ಪ್ರಮಾಣ ಕಡಿಮೆ ಆಗುತ್ತಿದೆ. ಕೃಷಿ ಹಾಗೂ ತೋಟಗಾರಿಕೆ ಪ್ರದೇಶ ಕುಂಠಿತವಾಗುತ್ತಿದೆ. 2022ರಲ್ಲಿ 5305 ಹೆಕ್ಟೇರ್ ಇದ್ದ ಹಣ್ಣಿನ ಬೆಳೆಗಳ ಪ್ರದೇಶ 2024ರ ಅಂಕಿಅಂಶಗಳ ಪ್ರಕಾರ 40629 ಹೆಕ್ಟೇರ್ಗೆ ತಗ್ಗಿದೆ. ಕೆ.ಸಿ.ವ್ಯಾಲಿಯ ವಿಷಯುಕ್ತ ನೀರನ್ನು ಅವೈಜ್ಞಾನಿಕವಾಗಿ ಹರಿಸಲಾಗುತ್ತಿದೆ ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಹೇಳಿದರು. ನೀರಾವರಿ ಹೋರಾಟಕ್ಕೆ ಯುವಕರು ರೈತರು ಕೈಜೋಡಿಸಬೇಕು. ಜೆಡಿಎಸ್ನಿಂದಲೂ ಹೋರಾಟಕ್ಕೆ ಬೆಂಬಲ ಇರಲಿದೆ ಎಂದರು.

ಅನ್ನ ತಿನ್ನುವರು ಹೋರಾಟಕ್ಕೆ ಬರಬೇಕಿತ್ತು ಜಲಾಗ್ರಹ ಸಮಾವೇಶಕ್ಕೆ ಪಕ್ಷಾತೀತವಾಗಿ ಜನಪ್ರತಿನಿಧಿಗಳು ಬರುತ್ತಾರೆ ಎಂದು ಭಾವಿಸಿದ್ದೆ. ಆದರೆ ಕೆಲವರು ಬಂದಿಲ್ಲ. ಇದು ಬೇಸರದ ಸಂಗತಿ. ಅನ್ನ ತಿನ್ನುವವರು ಹೋರಾಟದಲ್ಲಿ ಪಾಲ್ಗೊಳ್ಳಬೇಕಿತ್ತು. ನಾವೇನೂ ಇಲ್ಲಿಗೆ ಮತ ಕೇಳಲು ಬಂದಿಲ್ಲ. ಚುನಾವಣೆ ಬಂದಾಗ ರಾಜಕೀಯ ಮಾಡೋಣ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ನಿಯೋಗದೊಂದಿಗೆ ಪ್ರಧಾನಿ ಭೇಟಿಯಾಗೋಣ ಎತ್ತಿನಹೊಳೆ ನೀರಂತೂ ಬರಲಿಲ್ಲ. ಪಕ್ಕದಲ್ಲೇ ನೆರೆ ರಾಜ್ಯದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ನೀರನ್ನಾದರೂ ಜಿಲ್ಲೆಗೆ ತರಬೇಕು. ನಿಯೋಗ ತೆರಳಿ ತಾತ್ಕಾಲಿಕ ಪರಿಹಾರ ದೊರಕಿಸೋಣ. ಪ್ರಧಾನಿಯನ್ನೂ ಭೇಟಿ ಮಾಡಿ ಹಕ್ಕು ಪಡೆಯೋಣ. ಹೋರಾಟ ಮಾಡಿ ಸರ್ಕಾರದ ಕಣ್ಣು ಕಿವಿ ತೆರೆಸೋಣ ಎಂದು ಗೋಪಾಲಗೌಡ ಕರೆ ನೀಡಿದರು.