ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಭಿಮಾನ ರಾಜಕೀಯ ಅಗತ್ಯ

Last Updated 19 ಅಕ್ಟೋಬರ್ 2012, 7:35 IST
ಅಕ್ಷರ ಗಾತ್ರ

ಮಾಲೂರು: ರಾಜ್ಯದಲ್ಲಿ ಸ್ವಾಭಿಮಾನ ರಾಜಕೀಯ ಸಂಸ್ಕೃತಿ ಆರಂಭವಾಗಬೇಕಿದೆ ಎಂದು ಬಿಎಸ್‌ಆರ್ ಪಕ್ಷದ ಸ್ಥಾಪಕ ಅಧ್ಯಕ್ಷ ಬಿ.ಶ್ರೀರಾಮುಲು ಇಲ್ಲಿ ತಿಳಿಸಿದರು.ಗುರುವಾರ ಪಟ್ಟಣದಲ್ಲಿ ಬಿಎಸ್‌ಆರ್ ಪಕ್ಷದ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಯುಪಿಎ ಸರ್ಕಾರ ಸ್ವಾರ್ಥ ರಾಜಕಾರಣ ನಡೆಸುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ನೀಯಂತ್ರಣವಿಲ್ಲದೆ ಏರಿಸುವುದರಿಂದ ಜನಸಾಮಾನ್ಯರು ಮುಕ್ತವಾಗಿ ಎಂದು ಟೀಕಿಸಿದರು.

ರಾಜ್ಯ ಬಿಜೆಪಿ ಸರ್ಕಾರ ಸಹ ಚುನಾವಣೆ ಸಮಯದಲ್ಲಿ ಜನತೆಗೆ ನೀಡಿದ ಯಾವುದೇ ಭರವಸೆ ಈಡೇರಿಸಿಲ್ಲ. ಇಂತಹ ಸರ್ಕಾರಗಳಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ನಾಲ್ಕು ವರ್ಷ ಆಡಳಿತಾವಧಿಯಲ್ಲಿ ಮೂರು ಮುಖ್ಯ ಮಂತ್ರಿಗಳನ್ನು ಕಂಡ ಬಿಜೆಪಿ ಸರ್ಕಾರ ಭ್ರಷ್ಟ ಆಡಳಿತಕ್ಕೆ ಉದಾಹರಣೆ ಎಂದು ಕಿಡಿಕಾರಿದರು.

ಪಕ್ಷ ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಪದವಿಧರರಿಗೆ 5000 ಸಾವಿರ ರೂಪಾಯಿ ಮಾಸಾಶನ, ಮನೆಗೊಂದು ಲ್ಯಾಪ್‌ಟಾಪ್, ಬಡವರಿಗಾಗಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಮುಖಂಡರಾದ ಡಾ.ಸಿ.ಎಸ್.ದ್ವಾರಕಾನಾಥ್, ರವಿಕುಮಾರ್, ಶಿವಪ್ಪ, ಜಗದೀಶ್, ಬೆಳ್ಳೂರ್ ಆಂಜಿನಪ್ಪ,  ರವಿರೆಡ್ಡಿ, ಟಿ.ಮುನಿಯಪ್ಪ, ವೆಂಕಟರಾಮ್, ಸಂಚಿಕೆ ನಾರಾಯಣಪ್ಪ, ಟೇಕಲ್ ಶ್ರೀರಾಮುಲು, ಬಿವನಹಳ್ಳಿ ಚನ್ನಪ್ಪ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT