ಕುಷ್ಟಗಿ: ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿ ಮತ್ತು ಪರಿಸರ ಸ್ವಚ್ಛತೆ ಸೇರಿದಂತೆ ಸಮಾಜದ ಅಭಿವೃದ್ಧಿಯನ್ನು ಗಮನದಲ್ಲಿ ಇರಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಪಟ್ಟಣದಲ್ಲಿ ‘ಫೈಟ್ ಫಾರ್ ರೈಟ್ಸ್’ ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ.

ಇಲ್ಲಿಯ ಈಶಾನ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಉದ್ಯಾನಕ್ಕೆ ಮೀಸಲಿರಿಸಿರುವ ಜಾಗವನ್ನು ಸಂಸ್ಥೆಯ ಕಾರ್ಯಕರ್ತರು ಭಾನುವಾರ ಸ್ವಚ್ಛಗೊಳಿಸಿದರು.
ಸಂಸ್ಥೆ ಕುರಿತು ಮಾಹಿತಿ ನೀಡಿದ ಸಂಸ್ಥಾಪಕ ಅಧ್ಯಕ್ಷ ಕಲ್ಲೇಶ ತಾಳದ, ನಮ್ಮ ಸಮಾಜ ನಮ್ಮ ಅಭಿವೃದ್ಧಿ ನಮ್ಮ ಹಕ್ಕು ಸಂಸ್ಥೆಯ ಧ್ಯೇಯ ವಾಕ್ಯ. ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಪಟ್ಟಣ ಹಾಗೂ ವಿವಿಧ ಹಳ್ಳಿಗಳ ಯುವಕರು ಸ್ವಯಂ ಪ್ರೇರಣೆಯಿಂದ ಸಂಘಟನೆಯಲ್ಲಿ ಕಾರ್ಯಕರ್ತರಾಗಿ ಸೇರ್ಪಡೆಗೊಂಡಿದ್ದಾರೆ ಎಂದರು.

ಸರ್ಕಾರ ಮತ್ತು ಸಮಾಜದ ಕೊಂಡಿಯಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ಎರಡು ತಿಂಗಳಿಗೆ ಒಮ್ಮೆ ಕಾರ್ಯಕರ್ತರು ಗ್ರಾಮದಲ್ಲಿ ವಾಸ್ತವ್ಯ ಹೂಡಿ ಪರಿಸರ ನೈರ್ಮಲ್ಯ ಸಂರಕ್ಷಿಸುವುದು, ಐತಿಹಾಸಿಕ, ಧಾರ್ಮಿಕ ಸ್ಮಾರಕಗಳು, ಕೆರೆ ಬಾವಿಗಳನ್ನು ಪುನಶ್ಚೇತನಗೊಳಿಸುವ ಕೆಲಸ ಮಾಡಲಿದ್ದಾರೆ. ಕಲೆ, ಸಾಹಿತ್ಯ, ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮತ್ತು ಉದಯೋನ್ಮುಖ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಕಲ್ಲೇಶ ವಿವರಿಸಿದರು.

ಕಾಸೀಮಸಾಬ ಉಳ್ಳಾಗಡ್ಡಿ, ಗಿರೀಶ್ ದಿವಾನಜಿ, ಹುಲಗಪ್ಪ ಚೂರಿ, ಅಜಯ್ ಹಿರೇಮಠ, ಪ್ರಮೋದಕುಮಾರ ಬಡಿಗೇರ, ಯಮನೂರ ಸಂಗಟಿ, ಶಿವಕುಮಾರ ಪೂಜಾರ, ಆರ್.ಟಿ.ಸುಬಾನಿ ಇದ್ದರು.

ಯುವಕರ ಶ್ರಮದಾನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕ (ಪ್ರಭಾರ) ಶಿವರಾಜ ಪಾಟೀಲ, ಸಾರ್ವಜನಿಕರು ಈ ಸ್ಥಳದಲ್ಲಿ ಮಲ, ಮೂತ್ರ ವಿಸರ್ಜಿಸದಂತೆ ಹಗಲು ರಾತ್ರಿ ನಿಗಾಹಿಸುತ್ತೇವೆ ಎಂದರು.

ಉದ್ಯಾನ ಜಾಗದಲ್ಲಿ ಗಿಡಗಳಿವೆ. ಹಕ್ಕಿಗಳು ಬರುತ್ತವೆ. ತ್ಯಾಜ್ಯ ಎಸೆಯುವ ಸ್ಥಳವಾಗಿರುವ ಉದ್ಯಾನ ಸಾರ್ವಜನಿಕರ ಬಳಕೆಗೆ ಸಾಧ್ಯವಾಗಬೇಕಾದರೆ ನೀರಿನ ಅನುಕೂಲ ಕಲ್ಪಿಸಿ, ಗಿಡಗಳನ್ನು ಬೆಳೆಸಬೇಕು ಎಂದು ಪಟ್ಟಣದ ನಾಗರಿಕರಾದ ಪ್ರವೀಣಕುಮಾರ ಪಾಟೀಲ, ಕೆ.ವೆಂಕಟೇಶ್ ಹೇಳಿದರು.

ಯುವಕರ ಈ ಪ್ರಯತ್ನ ಮಾದರಿಯಾಗಿದೆ, ಅದೇ ರೀತಿ ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಮುಂದಾಗಬೇಕು
ಶಿವರಾಜ ಪಾಟೀಲ,ಸಾರಿಗೆ ಘಟಕ ವ್ಯವಸ್ಥಾಪಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.