ಕೊಪ್ಪಳ: ಬಹುತೇಕ ಮೊದಲ ಬಾರಿಗೆ ರಂಗಪ್ರವೇಶ ಮಾಡಿದ ಯುವ ಕಲಾವಿದರ ಮನೋಜ್ಞ ಅಭಿನಯ, ನಾಟಕದ ಕೊನೆಯವರೆಗೂ ಪ್ರೇಕ್ಷಕರು ಕಣ್ಣು ದಿಟ್ಟಿಸಿಕೊಂಡು ನೋಡಿದ ಸನ್ನಿವೇಶಗಳು, ಯಶಸ್ವಿಯಾಗಿ 29ನೇ ಪ್ರದರ್ಶನ ಪೂರ್ಣಗೊಂಡ ಬಳಿಕ ನೂರಾರು ಸಂಖ್ಯೆಯ ಪ್ರೇಕ್ಷಕರಿಂದ ಕೇಳಿಬಂದ ಕರತಾಡನ.

ಇದು ಇಲ್ಲಿನ ಸಾಹಿತ್ಯ ಭವನದಲ್ಲಿ ಬುಧವಾರ ರಾತ್ರಿ ಕಂಡುಬಂದ ಚಿತ್ರಣ. ರಾಷ್ಟ್ರೀಯ ಚಿಂತನಾ ವೇದಿಕೆ ಸಹಯೋಗದಲ್ಲಿ ಪ್ರದರ್ಶನವಾದ ನಿಜಮಹಾತ್ಮ ಬಾಬಾಸಾಹೇಬ್ ಎಂಬ ನಾಟಕ ಪ್ರದರ್ಶನ ಪ್ರೇಕ್ಷಕರನ್ನು ಸೆಳೆಯಿತು. ನಾಟಕದ ಕೊನೆಯ ತನಕವೂ ಸಾಹಿತ್ಯ ಭವನ ಭರ್ತಿಯಾಗಿತ್ತು. ಕೂಡಲು ಸೀಟು ಸಿಗದ ಕಾರಣಕ್ಕೆ ಅನೇಕರು ನಿಂತುಕೊಂಡು ನಾಟಕ ವೀಕ್ಷಿಸಿದ್ದು ವಿಶೇಷವಾಗಿತ್ತು. ಡಾ.ಬಿ.ಆರ್. ಅಂಬೇಡ್ಕರ್ ಪಾತ್ರದಾರಿಯ ಪ್ರತಿ ಮಾತುಗಳಿಗೂ ಜನರಿಂದ ಚಪ್ಪಾಳೆ ಬಂದವು.

ನಾಟಕ ಪೂರ್ಣಗೊಂಡ ಬಳಿಕ ಮಾತನಾಡಿದ ರಂಗಭೂಮಿ ಟ್ರಸ್ಟ್ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ‘ನಮ್ಮ ತಂಡದ ಅತ್ಯುತ್ತಮ ಪ್ರದರ್ಶನಗಳಲ್ಲಿ ಇದೂ ಒಂದು. ಕೊಪ್ಪಳ ನಿಜವಾಗಿಯೂ ಕೊಪ್ಪಳವಾಗಿ ಉಳಿದುಕೊಂಡಿದೆ. ಇಲ್ಲಿನ ಜನರ ಶಿಸ್ತು, ಸಂಯಮ ನೋಡಿ ಖುಷಿಯಾಗಿದೆ. ಸತತ ಮೂರು ತಿಂಗಳು ಕಲಾವಿದರು ತಾಲೀಮು ನಡೆಸಿ ಅದನ್ನು ಜನರ ಮುಂದಿಟ್ಟಿದ್ದೇವೆ’ ಎಂದರು.

‘ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ನಾಟಕ ಪ್ರದರ್ಶನ ಮಾಡುವುದು ಸುಲಭದ ಮಾತಲ್ಲ. ಆದರೆ ಜನರ ಮುಂದೆ ಸತ್ಯ ಇರಿಸಿದ್ದೇವೆ’ ಎಂದ ಅವರು ‘ಕಾಂಗ್ರೆಸ್ ಪಕ್ಷ ಮತಬ್ಯಾಂಕ್ ರಾಜಕಾರಣಕ್ಕಾಗಿ ಅನೇಕ ಮಹನೀಯರನ್ನು ಕೊಲೆ ಮಾಡಿದೆ. ಮತಕ್ಕಾಗಿ ಅಂಬೇಡ್ಕರ್ ಅವರ ಭಾವಚಿತ್ರ ಬಳಸಿಕೊಂಡಿದೆ. ಕೊಪ್ಪಳದಲ್ಲಿ ಹಿಂದೂ ಧರ್ಮ ಎದ್ದು ಬರಬೇಕು. ಆ ಹಿಂದೂ ದೇಶಭಕ್ತನಾಗಿರಬೇಕು. ಟೋಪಿ ಹಾಕುವವರನ್ನು, ಗಡ್ಡ ಬಿಟ್ಟವರನ್ನು ಬೆಂಬಲಿಸುವುದು ಬಿಡಬೇಕು’ ಎಂದು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.