ಗಂಗಾವತಿ: ಸೋಮವಾರ ಅಂಗನವಾಡಿ ಕೇಂದ್ರಗಳು ಆರಂಭವಾಗಿವೆ. ಸಂಗಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಹೂಗುಚ್ಛ ನೀಡುವ ಮೂಲಕ ಅಧಿಕಾರಿಗಳು ವಿಶೇಷವಾಗಿ ಬರಮಾಡಿಕೊಂಡರು.

ಸರ್ಕಾರದ ಆದೇಶದಂತೆ ಕೋವಿಡ್ ಮಾರ್ಗಸೂಚಿಗಳ ಅನ್ವಯ ಅಂಗನವಾಡಿ ಕೇಂದ್ರಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ, ತಳಿರು–ತೋರಣಗಳಿಂದ ಸಿಂಗಾರ ಮಾಡಲಾಗಿತ್ತು.

ಬಹಳ ದಿನಗಳ ಬಳಿಕ ಮಕ್ಕಳು ಮೊದಲ ಬಾರಿ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿದ ಕಾರಣ ಅಧಿಕಾರಿಗಳು ಮೆರವಣಿಗೆ ನಡೆಸಿ, ಮಕ್ಕಳಿಗೆ ಪೂಜೆ ಮಾಡಿ, ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು. ಈ ವೇಳೆ ಅಂಗನವಾಡಿ ಕೇಂದ್ರದಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು.

ಮಕ್ಕಳ ಪೋಷಕರಿಗೆ ಕೋವಿಡ್ ಕುರಿತು ಜಾಗೃತಿ ಮೂಡಿಸಲಾಯಿತು. ಈ ವೇಳೆ ಗರ್ಭಿಣಿಯರಿಗೆ ಸೀಮಂತ ಹಾಗೂ ಮಕ್ಕಳಿಗೆ ಅನ್ನ ಸಂತಪರ್ಣೆ ಮಾಡಲಾಯಿತು. ತಾ.ಪಂ. ಇಒ ಡಾ.ಡಿ.ಮೋಹನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಪ್ಪ ಆರೋಲಿ, ಎಸಿಡಿಪಿಒ ಪ್ರಸನ್ನ ಕಲ್ಮನಿ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶಾಂತ, ಸಂಗಾಪುರ ಗ್ರಾ.ಪಂ. ಅಧ್ಯಕ್ಷ ಹರೀಶ್ ಘಂಟ, ಪಿಡಿಒ ಪಿ.ಎಸ್.ಶೇಕ್‌ಸಾಬ್, ವಲಯ ಮೇಲ್ವಿಚಾರಕಿ ಶಿವಲಿಂಗಮ್ಮ ಹಾಗೂ ಮುಖ್ಯಶಿಕ್ಷಕ ಕೊಟ್ರೇಶ್ ಇದ್ದರು.

ವಡ್ಡರಹಟ್ಟಿ: ಇಲ್ಲಿನ ಹುಲ್ಡಗ್ಗಿ ಅಂಗನವಾಡಿ ಕೇಂದ್ರದಲ್ಲಿ ರಂಗೋಲಿ ಬಿಡಿಸಿ, ತಳಿರು ತೋರಣದಿಂದ ಸಿಂಗರಿಸಿ, ಬಲೂನ್ ಹಾಗೂ ಹೂಗಳನ್ನು ನೀಡುವ ಮೂಲಕ ಮಕ್ಕಳನ್ನು ಸ್ವಾಗತಿಸಲಾಯಿತು.

ಗ್ರಾ.ಪಂ ಸದಸ್ಯ ಎಚ್.ಶಿವಪ್ಪ, ಬಸವರಾಜ್ ಸಂಘಟಿ, ಕಲ್ಲಪ್ಪ ಗಡ್ಡಿ, ದೊಡ್ಡನಗೌಡ ಪಾಟೀಲ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಖಾಸಿಂಬಿ, ಸುಮಾ, ನಾಗರತ್ನ, ಹನುಮಮ್ಮ, ಬಸ್ಸಮ್ಮ, ಚೈತ್ರ ಹಾಗೂ ಲಲಿತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.