ಕೊಪ್ಪಳ: ಜಿಲ್ಲಾ ಕೇಂದ್ರದ ಸುತ್ತಲಿನ ಜನ ಬೆಳೆಯುವ ತರಕಾರಿಗಳ ಸಗಟು ಮಾರಾಟಕ್ಕೆ ವೇದಿಕೆಯಾಗಿರುವ ಇಲ್ಲಿಗೆ ಸಮೀಪದ ಬೆಳವಿನಾಳ ಬಳಿ ಇರುವ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಶುಕ್ರವಾರ ‘ಇಲ್ಲ’ಗಳದ್ದೇ ಸದ್ದು ಹೆಚ್ಚಾಗಿತ್ತು. ರೈತರು ಹಾಗೂ ಮಾರಾಟಗಾರರು ಮೂಲಸೌಕರ್ಯ ಕೊರತೆಯನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಂತೆ ಅವರು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.

ಇರಕಲ್ಲಗಡದಿಂದ ಬಂದ ರೈತ ನಾಗರಾಜ ಹಾಗೂ ಇತರರು ಬೆಳವಿನಾಳ ಮಾರುಕಟ್ಟೆಗೆ ಬರುವ ರೈತರಿಗೆ ಯಾವುದೇ ಅನುಕೂಲಗಳಿಲ್ಲ. ರಸ್ತೆ ಇಲ್ಲ, ನೀರು ಇಲ್ಲ, ನಮ್ಮ ಸಮಸ್ಯೆಗಳನ್ನು ಕೇಳಲು ಯಾವ ಅಧಿಕಾರಿಗಳು ಇಲ್ಲಿಗೆ ಬರುವುದಿಲ್ಲ. ಹೈಮಾಸ್ಟ್ ದೀಪದ ವ್ಯವಸ್ಥೆಯಿಲ್ಲ. ನೀವು ಬರುವುದು ಗೊತ್ತಾಗಿ ಬೆಳಿಗ್ಗೆ ಶೌಚಾಲಯದ ಕೀಲಿ ತೆಗೆದಿದ್ದಾರೆ. ಮಳೆ ಬಂದರೆ ನಮ್ಮ ಫಜೀತಿ ಹೇಳತೀರದು ಎಂದು ಸಮಸ್ಯೆ ತೋಡಿಕೊಂಡರು.

ಬೆಳವಿನಾಳ ಮಾರುಕಟ್ಟೆ ಆರಂಭವಾಗಿ ಐದು ವರ್ಷಗಳಾಗಿವೆ. ಶೌಚಾಲಯ ಕಟ್ಟಿ ಎರಡು ತಿಂಗಳಾಗಿದ್ದರೂ ರೈತರಿಗೆ ಮುಕ್ತವಾಗಿರಿಸಿಲ್ಲ. ಶೌಚಾಲಯದ ಹೊರಗಡೆ ವಿದ್ಯುತ್ ಬಲ್ಬ್ ಹಾಕಿಲ್ಲ. ಬಲ್ಬ್ ತರಲು ನಾನೇ ಜೇಬಿನಿಂದ ಹಣ ಕೊಡಬೇಕಾ?, ರಾತ್ರಿ 2, 3 ಗಂಟೆಗೆ ಹರಾಜು ಮಾಡಿದರೆ ಆಗ ರೈತರು ಬರಬೇಕೇ? ರೈತರ ಪಾಲಿಗೆ ಅಧಿಕಾರಿಗಳು ವೈರಿಗಳಾಗಿದ್ದೀರಿ ಎಂದು ಕಟು ಪದಗಳಲ್ಲಿ ನ್ಯಾಯಮೂರ್ತಿಗಳು ಚಾಟಿ ಬೀಸಿದರು.

ಎಪಿಎಂಸಿ ಸಹಾಯಕ ನಿರ್ದೇಶಕ ವಿ.ಜಿ.ಹಿರೇಮಠ ಮತ್ತು ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡು ‘ಮನುಷ್ಯತ್ವದ ಯಾವ ಗುಣಗಳು ಕೂಡ ನಿಮ್ಮಲ್ಲಿ ಇಲ್ಲ. ತ್ವರಿತವಾಗಿ ಸೌಲಭ್ಯಗಳನ್ನು ಕಲ್ಪಿಸಿ ವರದಿ ನೀಡಬೇಕು. ಇಲ್ಲವಾದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ಹಾಲವರ್ತಿ ಸಮೀಪದಲ್ಲಿ ನಡೆಸಲಾಗುತ್ತಿರುವ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ತೆರಳಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಅಲ್ಲಿಯೇ ಅರಣ್ಯ ಇಲಾಖೆ ವ್ಯಾಪ್ತಿಯ ಜಾಗ ಇರುವುದನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು,‘ಅರಣ್ಯ ವ್ಯಾಪ್ತಿಯಲ್ಲಿ ಜಾಗವಿದ್ದರೂ ಎಲ್ಲಿಯೂ ಮರಗಳೇ ಬೆಳೆದಿಲ್ಲ. ಎಲ್ಲೆಡೆಯೂ ಕಲ್ಲುಗಳನ್ನು ಕೊರೆದಿದ್ದು ಕಂಡುಬರುತ್ತಿದೆ. ಇದನ್ನು ಸ್ಟೋನ್ ಫಾರೆಸ್ಟ್ ಎನ್ನಬೇಕೆ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಮಾರುಕಟ್ಟೆಯಲ್ಲಿ ಹರಡಿದ ಘಾಟು

ಉಪ ಲೋಕಾಯುಕ್ತರು ಹಾಗೂ ಅಧಿಕಾರಿಗಳು ಬೆಳವಿನಾಳಕ್ಕೆ ಬರುತ್ತಿದ್ದಂತೆಯೇ ಹಸಿ ಮೆಣಸಿನಕಾಯಿ ಘಾಟು ಮೂಗಿಗೆ ಎರಚಿದಂತಾಯಿತು. ಅಲ್ಲಿದ್ದ ಬಹುತೇಕರು ಮೂಗಿಗೆ ಬಟ್ಟೆ ಮಾಸ್ಕ್ ಕಟ್ಟಿಕೊಂಡು ಕೆಮ್ಮುತ್ತಲೇ ಅಧಿಕಾರಿಗಳು ಮತ್ತು ರೈತರು ಮಾಹಿತಿ ನೀಡಿದರು. ಬೆಳಿಗ್ಗೆ ಚಾಟಿ ಬೀಸಿದ್ದರಿಂದ ಎಚ್ಚೆತ್ತುಕೊಂಡಿದ್ದ ಎಪಿಎಂಸಿ ಅಧಿಕಾರಿಗಳು ಸಂಜೆ ವೇಳೆಗೆ ಹೈಮಾಸ್ಟ್ ದೀಪ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದ ಫೋಟೊಗಳನ್ನು ತಂದು ಸಂಜೆ ಜಿಲ್ಲಾಧಿಕಾರಿಗೆ ತೋರಿಸಿದರು.

ಭೂ ವಿಜ್ಞಾನಿ ವಿರುದ್ಧ ಗರಂ

ಉಪಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ಭೇಟಿ ನೀಡಿದ ಕಲ್ಲುಕ್ವಾರಿಯ ಸ್ಥಳಕ್ಕೆ ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪುಷ್ಪಲತಾ ಕವಲೂರು ಬಾರದ ಕಾರಣಕ್ಕೆ ಅವರು ಗರಂ ಆದರು. ‘ಯಾರದ್ದೊ ಶಿಫಾರಸು ಇದೆ ಎನ್ನುವ ಧಿಮಾಕು ಆಧಿಕಾರಿಗೆ ಇದೆಯೇ? ನನ್ನ ಜೊತೆ ಜಿಲ್ಲಾಧಿಕಾರಿ ಎಸ್.ಪಿ ಸಿಇಒ ಅವರೇ ಬಂದಿದ್ದಾರೆ. ಕೆಳ ಹಂತದ ಸಿಬ್ಬಂದಿಯನ್ನು ಕಳುಹಿಸಿ ಉತ್ತರ ಕೊಡುವ ಜವಾಬ್ದಾರಿಯಿಂದ ತಪ್ಪಿಕೊಳ್ಳಬಹುದು ಎಂದುಕೊಂಡಿದ್ದಾರೆ. ಅನಾರೋಗ್ಯವಾಗಿದ್ದರೆ ವೈದ್ಯಕೀಯ ಪ್ರಮಾಣ ಪತ್ರ ಪಡೆಯಿರಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.