ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕಾಶ ಕಂದಕೂರರ ಛಾಯಾಗ್ರಹಣಕ್ಕೆ ಪ್ರಶಸ್ತಿ

Last Updated 21 ಅಕ್ಟೋಬರ್ 2022, 8:02 IST
ಅಕ್ಷರ ಗಾತ್ರ

ಕೊಪ್ಪಳ: ಟರ್ಕಿಯಲ್ಲಿ ನಡೆದ ನ್ಯೂ ವರ್ಲ್ಡ್-2022 ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ನಗರದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರ `ಸಪೋರ್ಟರ್ಸ್' ಶೀರ್ಷಿಕೆಯ ಚಿತ್ರ ಸಿಒಎಸ್ ಡಿಪ್ಲೋಮಾ ಪ್ರಶಸ್ತಿಗೆ ಭಾಜನವಾಗಿದೆ.

ಸ್ಪರ್ಧೆಯ ಪೀಪಲ್ ವಿಭಾಗದಲ್ಲಿ ಬಹುಮಾನ ಪಡೆದುಕೊಂಡಿರುವ ಈ ಚಿತ್ರವನ್ನು ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ ಸೆರೆಹಿಡಿಯಲಾಗಿದೆ.

ಬಹುತೇಕ ಭಕ್ತರು ಸಾಂಪ್ರದಾಯಿಕ ಚಕ್ಕಡಿಗಳಲ್ಲಿಯೇ ಸವದತ್ತಿ ಯಲ್ಲಮ್ಮನ ಜಾತ್ರೆಗೆ ಆಗಮಿಸುವುದು ವಾಡಿಕೆ. ಏಳು ಕೊಳ್ಳಗಳನ್ನು ದಾಟಿಕೊಂಡೇ ದೇವಸ್ಥಾನ ತಲುಪುವುದು ಭಕ್ತರಿಗೆ ಅನಿವಾರ್ಯ. ಬೆಟ್ಟ ಗುಡ್ಡಗಳಲ್ಲಿನ ಆ ಏರು ರಸ್ತೆಗಳಲ್ಲಿ ಚಕ್ಕಡಿಗಳನ್ನು ಎಳೆಯಲು ಎತ್ತುಗಳು ಬಲು ಪ್ರಯಾಸ ಪಡುತ್ತವೆ. ಆಗ ಚಕ್ಕಡಿಗಳಲ್ಲಿನ ಜನರು ಕೆಳಗಿಳಿದು ಚಕ್ಕಡಿಗಳನ್ನು ತಳ್ಳುವ ಮೂಲಕ ಎತ್ತುಗಳಿಗೆ ಆಸರೆಯಾಗುತ್ತಾರೆ. ಅಂತಹ ಒಂದು ಸನ್ನಿವೇಶವನ್ನೇ ಈ ಚಿತ್ರ ಒಳಗೊಂಡಿದೆ.

ಈ ಸ್ಪರ್ಧೆಯಲ್ಲಿ ಕಂದಕೂರರ ‘ಗೆಳೆತನ' ಶೀರ್ಷಿಕೆಯ ಚಿತ್ರ ಸಹ `ಆಟೋಫೋಕಸ್ ಚಿನ್ನದ ಪದಕ' ಹಾಗೂ ‘ಹಲ್ಕಿ ಮುರಾಡಿ ಕಂಚಿನ ಪದಕ’ ಪಡೆದುಕೊಂಡಿದ್ದು ವಿಶೇಷ.

ಡಿಸೆಂಬರ್‌ನಲ್ಲಿ ಟರ್ಕಿಯ ಮೆರ್ಸಿನ್ ನಗರದಲ್ಲಿ ಪ್ರಶಸ್ತಿ ವಿತರಣೆ ಹಾಗೂ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT