ಮಹಿಳೆಯರಿಗೆ ಸಾಮೂಹಿಕ ಕೃಷಿ ಪಾಠ

7
ರೈತ ಮಹಿಳೆಯರಿಗೆ ಪ್ರಗತಿಪರ ಮಹಿಳೆಯರಿಂದ ಕೃಷಿ ಪಾಠ

ಮಹಿಳೆಯರಿಗೆ ಸಾಮೂಹಿಕ ಕೃಷಿ ಪಾಠ

Published:
Updated:

ಹನುಮಸಾಗರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಇಚ್ಛಿಸುವ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದು, ಸ್ಥಳೀಯ ಕೃಷಿ ಸಾಧಕರ ಜಮೀನುಗಳಿಗೆ ಸಂಸ್ಥೆಯ ಸದಸ್ಯರನ್ನು ಕರೆದೊಯ್ದು ಕೃಷಿ ಪಾಠ ಹೇಳಿಕೊಡುತ್ತಿದೆ.

ಪ್ರತಿ ತಿಂಗಳಲ್ಲಿ ಒಂದು ದಿನ ಸಂಸ್ಥೆಯ ಮಾರ್ಗದರ್ಶಕರ ನೇತೃತ್ವದಲ್ಲಿ ಹನುಮಸಾಗರ, ಹನುಮನಾಳ, ನಿಲೋಗಲ್‌ ಭಾಗದ ಹತ್ತಾರು ಹಳ್ಳಿಗಳಲ್ಲಿ ಸಾಧಕ ಹಾಗೂ ಪ್ರಯೋಗಿ ರೈತರ ಜಮೀನಿನಲ್ಲಿ ಯಶಸ್ವಿ ರೈತ ಮಹಿಳೆಯರು ಅನುಸರಿಸುವ ಕೃಷಿ ವಿಧಾನ, ಸುಧಾರಿತ ಮಾಹಿತಿ ನೀಡಲಾಗುತ್ತದೆ. ಸ್ಥಳೀಯ ಪ್ರಗತಿಪರ ರೈತರ ತೋಟಗಳಲ್ಲಿ ಬೆಳೆ, ಹೈನುಗಾರಿಕೆ, ಜಾನುವಾರು ಸಾಕಾಣಿಕೆ ಬಗ್ಗೆ ಕ್ಷೇತ್ರೋತ್ಸವಗಳನ್ನು ಆಯೋಜಿಸಲಾಗುತ್ತಿದೆ. ಇಲ್ಲಿಗೆ ಬರುವ ರೈತ ಮಹಿಳೆಯರ ತಂಡಕ್ಕೆ ಬೆಳೆ, ಕೊಯ್ಲಿನ ವಿಧಾನ, ಮಾರುಕಟ್ಟೆ ವ್ಯವಸ್ಥೆ, ಲಾಭಗಳ ಬಗ್ಗೆ ತೋಟದಲ್ಲಿಯೇ ಸಮಗ್ರ ಮಾಹಿತಿ ನೀಡಲಾಗುತ್ತದೆ.

‘ಈಗಾಗಲೇ ಹಲವಾರು ಮಹಿಳೆಯರು ತರಕಾರಿ ಬೇಸಾಯ, ಪುಷ್ಪ ಬೇಸಾಯ, ಹಣ್ಣಿನ ಬೆಳೆಗಳನ್ನು ಹಾಕಿಕೊಂಡು ನೆಮ್ಮದಿ ಬದುಕು ಕಟ್ಟಿಕೊಂಡಿದ್ದಾರೆ. ಜಮೀನು ಇಲ್ಲದವರು ತಮ್ಮ ಮನೆಯಲ್ಲಿ ಇದ್ದುಕೊಂಡೇ ಕೋಳಿ, ಕುರಿ ಸಾಕಾಣಿಕೆ, ಸಣ್ಣ ಕೈಗಾರಿಕೆಗಳನ್ನು ಮಾಡಿಕೊಂಡು ಸ್ವಂತ ನೆಲೆ ಕಟ್ಟಿಕೊಂಡಿರುವುದು ನಮಗೆ ಮತ್ತಷ್ಟು ಸ್ಪೂರ್ತಿ ದೊರೆತಂತಾಗಿದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ ನಾಯಕ ಹೇಳುತ್ತಾರೆ.

ಬೋಳು ನೆಲ್ಲಕೆ ಬಾಳು ನೀಡಿದವರು:

ಸಾಕಷ್ಟು ಭೂಮಿ, ಯಥೆಚ್ಛ ನೀರು ಇದ್ದರೂ ಪ್ರಗತಿ ಕಾಣದ ರೈತರ ಮಧ್ಯೆ, ತರಬೇತಿ ಪಡೆದ ಈ ಭಾಗದ ಕೆಲ ಮಹಿಳೆಯರು ಕಡಿಮೆ ಭೂಮಿ, ಕಡಿಮೆ ನೀರಿನಲ್ಲಿ ಅಧಿಕ ಲಾಭ ಪಡೆದು ಸೈ ಎನಿಸಿಕೊಂಡಿದ್ದಾರೆ. ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿ ಆರ್ಥಿಕ ಲಾಭ ಗಳಿಸುವುದರಲ್ಲಿ ಮಹಿಳೆಯರು ಪುರುಷರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಸಾಮೂಹಿಕ ಕೃಷಿ, ತೋಟಗಾರಿಕೆ, ಪಶು ಸಾಕಾಣಿಕೆ, ಹೈನುಗಾರಿಕೆಯಂತಹ ಚಟುವಟಿಕೆಗಳಲ್ಲಿ ತೊಡಗಿ ಈಗ ಪುರುಷರಿಗೆ ಸ್ವಾವಲಂಬನೆಯ ಪಾಠ ಹೇಳ ಹೊರಟಿದ್ದಾರೆ. ಅಲ್ಪಸ್ವಲ್ಪ ವಿದ್ಯಾವಂತರಾದ ಮಹಿಳೆಯರು ವ್ಯರ್ಥವಾಗಿ ಬಿದ್ದಿದ್ದ ಭೂಮಿಯಲ್ಲಿ ಪುಷ್ಪಕೃಷಿ, ಹಣ್ಣಿನ ಬೇಸಾಯ ಮಾಡಿ ಬೋಳು ನೆಲಕ್ಕೆ ಹಸುರಿನ ಬಾಳು ನೀಡಿದ್ದಾರೆ. ಅಲ್ಲದೇ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.

ಆತ್ಮವಿಶ್ವಾಸ ತುಂಬುವುದಕ್ಕಾಗಿ ಕೃಷಿ ಪಾಠ:

ಮಹಿಳೆಯರು ಕೃಷಿಯ ನೇತೃತ್ವ ವಹಿಸಿಕೊಂಡು ಲಾಭದಾಯಕ ಕೃಷಿ ಮಾಡಬಹುದು ಎಂಬ ಆತ್ಮವಿಶ್ವಾಸ ಅವರಲ್ಲಿ ತುಂಬುವುದಕ್ಕಾಗಿ ಸಂಸ್ಥೆಯಿಂದ ಇಂತಹ ಕಾರ್ಯಕ್ರಮ ಆಯೋಜಿಸಿದೆ. ಇಲ್ಲಿ ರೈತ ಮಹಿಳೆಯರು ತಾವು ಪಡೆದುಕೊಂಡ ಜ್ಞಾನವನ್ನು ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಂಡು ಅಭಿವೃದ್ಧಿ ಹೊಂದುವಂತಾಗಲಿ ಎಂಬುದು ಈ ಯೋಜನೆಯ ಮುಖ್ಯ ಗುರಿಯಾಗಿದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಅಧಿಕಾರಿ ಪ್ರಕಾಶ ನಾಯಕ ಹೇಳುತ್ತಾರೆ.

 ಇಲ್ಲಿನ ಮಣ್ಣು, ನೀರು, ಹವಾಮಾನ ಹೂವಿನ ಬೇಸಾಯಕ್ಕೆ ಸೂಕ್ತವಾಗಿದ್ದು ಕಡಿಮೆ ಖರ್ಚಿನಲ್ಲಿ ಅಲ್ಪಾವಧಿ ಬೆಳೆಯಾದ ಪುಷ್ಪ ಬೇಸಾಯ ಮಾಡುವುದನ್ನು ತರಬೇತಿ ಪುಷ್ಪ ಬೇಸಾಯದ ಪ್ರಗತಿಪರ ರೈತ ಮಹಿಳೆ ಯರಗೇರಾದ ಲಕ್ಷ್ಮವ್ವ ದಂಡಿನ ಮಾಹಿತಿ ನೀಡಿದ್ದಾರೆ.

ಕೃಷಿಯಲ್ಲಿ ಸಾಧನೆ ಮಾಡಿದ ಮಹಿಳೆಯರ ಯಶೋಗಾಥೆ, ವಿವಿಧ ಬೆಳೆಗಳ ಬಗ್ಗೆ ಮಾಹಿತಿ ಕೊಡಿಸುವ ಉದ್ದೇಶದಿಂದ ರೈತ ಮಹಿಳೆಯರಿಗೆ ನೀಡಲಾಗುತ್ತಿರುವ ಕೃಷಿ ತರಬೇತಿ ಯಶಸ್ವಿಯಾಗಿದೆ.
- ವಿನಾಯಕ ನಾಯಕ, ತಾಲ್ಲೂಕು ಯೋಜನಾಧಿಕಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ.

ಬರ ಪರಿಸ್ಥಿತಿಯಲ್ಲೂ ಕೃಷಿಯಲ್ಲಿ ನೆಮ್ಮದಿ ಬದುಕು ಕಟ್ಟಿಕೊಳ್ಳುವುದಕ್ಕೆ ಪ್ರಗತಿಪರ ಕೃಷಿ ಮಹಿಳೆಯರಿಂದ ನಮಗೆ ಸಾಕಷ್ಟು ಮಾಹಿತಿ, ಕೃಷಿಕರ ಅನುಭವವೂ ದೊರಕಿದೆ.
- ಹನುಮವ್ವ ಹೂಲಗೇರಿ. ರೈತ ಮಹಿಳೆ 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !