ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮ ಮಾಲಾಧಾರಿಗಳಿಗೆ ಜಿಲ್ಲಾಡಳಿತದಿಂದಲೇ ಊಟದ ವ್ಯವಸ್ಥೆ

Published 24 ಡಿಸೆಂಬರ್ 2023, 5:17 IST
Last Updated 24 ಡಿಸೆಂಬರ್ 2023, 5:17 IST
ಅಕ್ಷರ ಗಾತ್ರ

ಅಂಜನಾದ್ರಿ (ಕೊಪ್ಪಳ ಜಿಲ್ಲೆ): ಹನುಮಮಾಲೆ ವಿಸರ್ಜನೆ ಮಾಡಲು ಬೇರೆ ಬೇರೆ ಕಡೆಯಿಂದ ಬಂದಿರುವ ಭಕ್ತರಿಗೆ ಎರಡು ದಿನಗಳಿಂದ ಜಿಲ್ಲಾಡಳಿತವೇ ಊಟದ ವ್ಯವಸ್ಥೆ ಮಾಡಿದೆ.

ಶನಿವಾರ ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಅಂಜನಾದ್ರಿಗೆ ಬಂದಿದ್ದಾರೆ. ಅವರಿಗೆ ಶನಿವಾರ ರಾತ್ರಿಯಿಂದಲೇ ಊಟದ ವ್ಯವಸ್ಥೆಯಿತ್ತು. ಮಾಲೆ ವಿಸರ್ಜನೆ ಮಾಡಿ ಹೋಗುವವರಿಗೆ ಅನ್ನ, ಸಾರು, ಸಿರಾ, ಬೇಳೆ ಹುಗ್ಗಿ, ಟೊಮೆಟೊ ಉಪ್ಪಿನಕಾಯಿ ನೀಡಲಾಯಿತು. ಸುಮಾರು ಒಂದು ಲಕ್ಷ ಭಕ್ತರು ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಹೊಂದಿದೆ.

50 ಸಾವಿರ ಮಾಲಾಧಾರಿಗಳಿಗೆ ವಿತರಿಸಲು ಎರಡು ಲಡ್ಡು, ಒಂದು ತೀರ್ಥದ ಬಾಟಲಿ, ಹನುಮ ದೇವರ ಫೋಟೊ ಇರುವ ಕಿಟ್‌ ತಯಾರಿಸಲಾಗಿದೆ. ಈ ಕಿಟ್‌ ಭಕ್ತರು ಹಣ ನೀಡಿ ಖರೀದಿಸಬೇಕಾಗಿದೆ.

ಬೆಳಗಿನ ನಾಲ್ಕು ಗಂಟೆಯಿಂದಲೇ ಊಟದ ವ್ಯವಸ್ಥೆ ಆರಂಭಿಸಲಾಗಿದೆ.

ಮಾರ್ಗದುದ್ದಕ್ಕೂ ಊಟ: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ಅಂಜನಾದ್ರಿ ದೇವಸ್ಥಾನದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿದೆ.

ಅಂಜನಾದ್ರಿಯ ಸುತ್ತಮುತ್ತಲಿನ ಗ್ರಾಮಗಳ‌ ಜನ ಹಾಗೂ ಗ್ರಾಮ ಪಂಚಾಯಿತಿಗಳು ಕೂಡ ಸ್ವಯಂ ಪ್ರೇರಣೆಯಿಂದ ಊಟದ ವ್ಯವಸ್ಥೆ ಮಾಡಿದವು. ಕೊಪ್ಪಳದಿಂದ ಬರುವಾಗ ಹಿಟ್ನಾಳ ಟೋಲ್ ನಿಂದ ಅಗಳಕೇರಾ, ಹುಲಿಗಿ, ಶಿವಪುರ, ಹೊಸ ಬಂಡಿ ಹರ್ಲಾಪುರ, ಬಸಾಪುರ, ತಿರುಮಲಾಪುರ, ಸಾಣಾಪುರ, ಗಂಗಾವತಿಯಿಂದ ಬರುವಾಗ ಆನೆಗೊಂದಿಯಲ್ಲಿ ಮಾಲಾಧಾರಿಗಳಿಗೆ ನೀರು, ಚಹಾ ಹಾಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT