ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ ಅಳವಡಿಸಿಕೊಳ್ಳಿ: ಶರಣಪ್ಪ ಮಂಡಲಗಿರಿ

Last Updated 24 ಡಿಸೆಂಬರ್ 2019, 12:46 IST
ಅಕ್ಷರ ಗಾತ್ರ

ಕುಕನೂರು: ‘ಹವಾಮಾನ ವೈಪರೀತ್ಯ­ಗಳ ಮಧ್ಯೆ ಒಕ್ಕುಲತನ ಮಾಡಬೇಕಾದ ಪರಿಸ್ಥಿತಿ ಬಂದಿದೆ. ರೈತರು ನವೀನ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಕೃಷಿ ಮಾಡಬೇಕಾದ ಅಗತ್ಯತೆ ಇದೆ’ ಎಂದು ಮುಖಂಡ ಶರಣಪ್ಪ ಮಂಡಲಗಿರಿ ಹೇಳಿದರು.

ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಉತ್ಸವದಲ್ಲಿ ರೈತರ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ರೈತರಿಗೆ ಬೆಂಬಲ ಬೆಲೆ ನೀಡುತ್ತೇವೆ ಎಂದು ಪತ್ರಿಕೆಗಳಲ್ಲಿ ಬೊಬ್ಬೆ ಹೊಡೆಯುವ ಸರ್ಕಾರ ಯಾವ ಧಾನ್ಯಗಳಿಗೆ ಎಷ್ಟು ಬೆಂಬಲ ಬೆಲೆ ನೀಡುತ್ತಿದೆ ಎಂದು ಮಾಹಿತಿ ನೀಡಲಿ. ಶಾಸಕರಿಗೆ ವೇತನ ಹೆಚ್ಚಳ ಮಾಡುವಲ್ಲಿ ಮಾತ್ರ ತಲ್ಲೀನರಾಗಿದ್ದಾರೆ. ರೈತರ ಬಗ್ಗೆ ಕೇವಲ ಮೊಸಳೆ ಕಣ್ಣೀರು ಸುರಿಸು­ತ್ತಿದ್ದಾರೆ’ ಎಂದು ಒತ್ತಾಯಿಸಿದರು.

ಸಾಹಿತಿ ಮಹಿಪಾಲರಡ್ಡಿ ಮೂನ್ನೂರು ಮಾತನಾಡಿದರು. ಸಂಚಾಲಕ ಮಹೇಶಬಾಬು ಸುರ್ವೆ, ಸಮ್ಮೇಳದನ ಅಧ್ಯಕ್ಷ ಎಂ. ಬಿ ಅಳವುಂಡಿ, ಬಸಪ್ಪ ಕಾಮನೂರು, ಬಸವನಗೌಡ ಮುದ್ದಾಬಳ್ಳಿ, ಬೀಮಪ್ಪ ಹಳ್ಳಪ್ಪನವರ, ಬಸವರಾಜ ಮೈಲಾರಪ್ಪ, ಮಂಜುನಾಥ ಅಂಗಡಿ, ರುದ್ರಪ್ಪ ಬಂಡಾರಿ, ಹನುಮಪ್ಪ ನರುಗುಂದ, ದೇವೇಂದ್ರಪ್ಪ ಕಂಚಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT