ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಧಾನ್ಯದ ಕಿಟ್ ವಿತರಣೆ

Last Updated 29 ಮೇ 2021, 11:46 IST
ಅಕ್ಷರ ಗಾತ್ರ

ಕನಕಗಿರಿ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೂರನೇ ವಾರ್ಡ್ ನಿವಾಸಿಗಳಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶರಣೆಗೌಡ ಪೊಲೀಸ್ ಪಾಟೀಲ ಅವರು ಶನಿವಾರ ಆಹಾರ ಧಾನ್ಯದ ಕಿಟ್ ವಿತರಿಸಿದರು.

ನಾಲ್ಕು ಕೆಜಿ ಅಕ್ಕಿ, ಒಂದು ಕೆಜಿ ಸಕ್ಕರೆ, ಅರ್ಧ ಕೆಜಿ ತೊಗರಿ ಬೇಳೆ, ಅರ್ಧ ಕೆಜಿ ಕಾರದ ಪುಡಿ, ಅರ್ಧ ಕೆಜಿ ಬೆಳ್ಳೊಳ್ಳಿ, ಅರ್ಧ ಕೆಜಿ ಒಳ್ಳೆಣ್ಣೆ, ಕಾಲೂ ಕೆಜಿ ಚಹಪುಡಿ, ಹಾಲಿನ ಪ್ಯಾಕೇಟ್‌, ಸಾಬೂನು, ಪೇಸ್ಟ್–ಬ್ರೇಶ್, ಕೊಬ್ಬರಿ ಎಣ್ಣೆ, ಜೀರಗಿ, ಸಾಸಿವೆ, ಅರಸಿನ ಪುಡಿ ಹಾಗೂ ಮಾಸ್ಕ್ ವಿತರಣೆ ಮಾಡಿದರು.

ಶರಣೆಗೌಡ ಪೊಲೀಸ್ ಪಾಟೀಲ ಮಾತನಾಡಿ,‘ವಾರ್ಡ್‌ನಲ್ಲಿ ಕೂಲಿಕಾರರು, ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಾಕ್‌ಡೌನ್‌ನಿಂದ ಕುಟುಂಬಗಳು ಸಮಸ್ಯೆಯಲ್ಲಿರುವುದನ್ನು ಪರಿಗಣಿಸಿ ಆಹಾರ ಧಾನ್ಯದ ಕಿಟ್ ನೀಡಿದ್ದು, ಇದೊಂದು ಅಳಿಲು ಸೇವೆ’ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ ಗಡಾದ, ಡಾ.ಮೌಲಾಹುಸೇನ, ರವಿ ಶಂಕರ ಪಾಟೀಲ, ಟಿಜೆ ರಾಮಚಂದ್ರ, ಮಂಗಲಿ ಹುಸೇನ, ರಾಮಣ್ಣ ಬ್ಯಾಳಿ, ಭುವನೇಶ, ನೂರುಸಾಬ ಗಡ್ಡಿಗಾಲ, ರಾಮಣ್ಣ ಆಗೋಲಿ, ಬಿ. ಕನಕಪ್ಪ ಹಾಗೂ ಹುಸೇನಸಾಬ ಗುಡಿಹಿಂದಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT