ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ನಾಲ್ವರು ಪಿಡಿಒಗಳ ಅಮಾನತು

₹ 1.51 ಕೋಟಿ ಹಣ ದುರ್ಬಳಕೆ ಆರೋಪ
Last Updated 5 ಜೂನ್ 2020, 16:23 IST
ಅಕ್ಷರ ಗಾತ್ರ

ಕುಷ್ಟಗಿ: ಬಹುಕಮಾನು ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿ ಹಗರಣಕ್ಕೆ ಸಂಬಂಧಿಸಿದಂತೆ ₹ 1.51 ಕೋಟಿ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ನಾಲ್ವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಈ ಕುರಿತು ಶುಕ್ರವಾರ ಸಂಜೆ ಆದೇಶ ಹೊರಡಿಸಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುನಂದನ ಮೂರ್ತಿ, ಸಂಬಂಧಿಸಿದ ಪಿಡಿಒಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಿದ್ದಾರೆ.

ಹಿರೇಗೊಣ್ಣಾಗರ ಪಂಚಾಯಿತಿಯ ಯಮನಪ್ಪ ರಾಮತನಾಳ, ಮುದೇನೂರು ಪಂಚಾಯಿತಿ ವೆಂಕಟೇಶ್, ಹಾಬಲಕಟ್ಟಿಯ ಪಂಚಾಯಿತಿಯ ಚಂದಪ್ಪ ಕವಡಿಕಾಯಿ ಹಾಗೂ ತಳುವಗೇರಾ ಪಂಚಾಯಿತಿಯ ಶಿವಪುತ್ರಪ್ಪ ಬರಿದೆಲಿ ಅಮಾನತುಗೊಂಡ ಅಭಿವೃದ್ಧಿ ಅಧಿಕಾರಿಗಳು. ಹಗರಣ ತನಿಖಾ ಹಂತದಲ್ಲಿದ್ದರೂ ಈ ಪಿಡಿಒಗಳು ಗುತ್ತಿಗೆದಾರರಿಗೆ ಸಾಮಗ್ರಿ ವೆಚ್ಚ (ಬಿಒಸಿ) ಪಾವತಿಸಿದ್ದಾರೆ ಎಂದು ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT