ಕುಷ್ಟಗಿ: ‘ಮಕ್ಕಳಲ್ಲಿ ಕೀಳರಿಮೆ ಭಾವನೆ ಹೋಗಲಾಡಿಸಿ ವಿಶಾಲ ಭಾವನೆ ಹೆಚ್ಚಿಸಿದರೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಶಿಕ್ಷಕರು ಮಕ್ಕಳ ಮನೋಭಾವ ಅರಿತು ಸಕಾರಾತ್ಮಕ ಗುಣ ಬೆಳೆಯಲು ಪ್ರೇರಣೆ ನೀಡಬೇಕು’ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ಹೊರವಲದಲ್ಲಿ ಶಾಲಾ ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಾಲ್ಲೂಕುಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.

‘ಯಾವ ಯಾವ ಮಕ್ಕಳಲ್ಲಿ ಎಂಥಹ ಪ್ರತಿಭೆ ಇರುತ್ತದೆಯೊ ಬಾಹ್ಯವಾಗಿ ಗೊತ್ತಾಗುವುದಿಲ್ಲ. ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳು ಆಸಕ್ತಿ ತಳೆದರೆ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ’ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಂಪಾಪತಿ ಹಿರೇಮಠ ಮಾತನಾಡಿ,‘ಮಕ್ಕಳಿಗೆ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆತರೆ ಭವಿಷ್ಯದಲ್ಲಿ ಅವರು ಸತ್ಪ್ರಜೆಗಳಾಗಿ ದೇಶಕ್ಕೆ ಉತ್ತಮ ಕೊಡುಗೆ ನೀಡಬಲ್ಲವರಾಗುತ್ತಾರೆ. ಅಂತಹ ಮಹತ್ಕಾರ್ಯಕ್ಕೆ ಶಿಕ್ಷಕರು ಮನಸ್ಸು ಮಾಡಬೇಕು’ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಹಾಗೂ ಇತರರು ಮಾತನಾಡಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಫಾರುಕ್ ಡಲಾಯತ್, ಬಸವರಾಜ ಹಳ್ಳೂರು, ಡಯಟ್ ಉಪನ್ಯಾಸಕರಾದ ರಾಜೇಂದ್ರ ಬೆಳ್ಳಿ, ವೆಂಕಟೇಶಗೌಡ ಗೌಡ್ರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಹಾಂತೇಶ ಸೊಪ್ಪಿಮಠ, ದೈಹಿಕ ಶಿಕ್ಷಣ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರ, ಶಿಕ್ಷಕರಾದ ಎಂ.ಎಂ.ಗೊಣ್ಣಾಗರ, ನಿಂಗಪ್ಪ ಗುನ್ನಾಳ, ಗುರಪ್ಪ ಕುರಿ, ಯಮನಪ್ಪ ಚೂರಿ, ನೀಲನಗೌಡ, ಎಸ್.ಜಿ.ಕಡೇಮನಿ, ಮಹಾಂತೇಶ, ಶಾಕೀರಬಾಬಾ, ಸೋಮಲಿಂಗಪ್ಪ ಗುರಿಕಾರ, ಶಿವಾನಂದ, ಅಯ್ಯಪ್ಪ, ಗ್ಯಾನಪ್ಪ ರಾಂಪುರ, ಶರಣಪ್ಪ ತೆಮ್ಮಿನಾಳ, ಶಿವಣ್ಣ ತಳ್ಳಿ ಇತರೆ ಶಿಕ್ಷಕರು ಉಪಸ್ಥಿತರಿದ್ದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಜಗದೀಶಪ್ಪ ಸ್ವಾಗತಿಸಿದರು. ತಾಲ್ಲೂಕಿನ ವಿವಿಧ ಪ್ರಾಥಮಿಕ, ಪ್ರೌಢಶಾಲೆಗಳ ನೂರಾರು ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಮಾತು ಪ್ರತಿಧ್ವನಿ

ಶಾಸಕ ಬೇಸರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಭಾಷಣ ಮಾಡುವಾಗ ಧ್ವನಿ ಪ್ರತಿಧ್ವನಿಸುತ್ತಿದ್ದುದರಿಂದ ಗೊಂದಲ ಉಂಟಾಗಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ. ಮಕ್ಕಳೂ ಗದ್ದಲದಲ್ಲಿ ಮುಳುಗಿದ್ದರು. ಇದಕ್ಕೆ ಬೇಸರಗೊಂಡ ಶಾಸಕ ದೊಡ್ಡನಗೌಡ ಪಾಟೀಲ ತಮ್ಮ ಭಾಷಣದಲ್ಲೇ ಅಸಮಾಧಾನ ಹೊರಹಾಕಿದರು. ಮಕ್ಕಳಿಗೆ ಏನಾದರೂ ನಾಲ್ಕು ಹಿತವಾದ ಮಾತು ಹೇಳಬೇಕೆಂದರೆ ಮಾತನಾಡಿದ್ದು ಸರಿಯಾಗಿ ಕೇಳಿಸುತ್ತಿಲ್ಲ. ಇಲ್ಲಿ ಇಲಾಖೆಯ ಯಾವುದೇ ಕಾರ್ಯಕ್ರಮ ನಡೆಸಬೇಡಿ ಹಣ ಹೆಚ್ಚು ಖರ್ಚಾದರೂ ಸರಿ ಮುಂದಿನ ವರ್ಷ ಬೇರೆ ಸ್ಥಳದಲ್ಲಿ ಆಯೋಜಿಸಲು ಕ್ರಮಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.