ಕೊಪ್ಪಳ: ಶೀಲ ಶಂಕಿಸಿ ಪತ್ನಿ ಮತ್ತು ಪುತ್ರಿಯನ್ನು ಕೊಲೆಗೈದ ಅಪರಾಧಿ ಕೊಪ್ಪಳ ನಗರದ ಹಮಾಲರ ಕಾಲೊನಿಯ ನಿವಾಸಿ ಸುಲೇಮಾನ ಅಹ್ಮದಹುಸೇನ ಅನ್ಸಾರಿ ವಿರುದ್ಧ ಜೀವಾವಧಿ ಶಿಕ್ಷೆ ಹಾಗೂ ₹ 1,05,000 ದಂಡ ವಿಧಿಸಿ ಕೊಪ್ಪಳ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಸಿ.ಚಂದ್ರಶೇಖರ ಆದೇಶ ನೀಡಿದ್ದಾರೆ.

ಮೃತ ಅಣ್ಣನ ಮನೆಯ ಮೇಲ್ಗಡೆಯ ರೂಮಿನಲ್ಲಿ ಮಲಗಿದ್ದ ಮುನ್ನಿಬೇಗಂ ಹಾಗೂ ಎರಡು ತಿಂಗಳ ಮಗು ರಾಹಿನ್ ಪರ್ವಿನ್ ಅವರನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರ ವಿರುದ್ಧ ದೋಷಾರೋಪಗಳು ಸಾಬೀತಾಗಿದೆ. ಅಗತ್ಯ ಸಾಕ್ಷಾಧಾರಗಳನ್ನು ಪರಿಗಣಿಸಿ ನ್ಯಾಯಾಧೀಶರು ಇದೇ ಫೆ. 4ರಂದು ಶಿಕ್ಷೆ ಪ್ರಕಟಿಸಿದ್ದಾರೆ.

2016ರಲ್ಲಿ ನಡೆದಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಂಬಣ್ಣ ಟಿ. ಮತ್ತು ಸರ್ಕಾರಿ ಅಭಿಯೋಜಕಿ ಬಂಡಿ ಅಪರ್ಣಾ ಎಂ. ವಾದ ಮಂಡಿಸಿದ್ದಾರೆ. ಕೊಪ್ಪಳ ನಗರ ಪೊಲೀಸ್ ಸೂರ್ಯಕಾಂತ, ಸಂಗಮೇಶ, ಲತೀಫ್, ಗವಿಸಿದ್ದಪ್ಪ, ಮಂಜುನಾಥ ಅವರು ಸಾಕ್ಷಿದಾರರನ್ನು ಸರಿಯಾದ ಸಮಯಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು ಎಂದು ಕೊಪ್ಪಳದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಲ್ಲೆ, ದೌರ್ಜನ್ಯ ಆರೋಪ: ಶಿಕ್ಷೆ ಪ್ರಕಟ

ಕೊಪ್ಪಳ: ತಾಲ್ಲೂಕಿನ ಕುಕಟಗನಹಳ್ಳಿ ಗ್ರಾಮದ ಸೀಮಾಂತರದಲ್ಲಿರುವ ಜಮೀನಿನ ಸರ್ವೇ ಕಾರ್ಯ ನಡೆದ ಸಂದರ್ಭದಲ್ಲಿ ವಿಜಯಕುಮಾರ ಮೋತಿಲಾಲ ಜಾಂಗಡಾ ಹಾಗೂ ವಿರೂಪಾಕ್ಷಪ್ಪ ಸಿದ್ದಪ್ಪ ಇವರ ನಡುವೆ ನಡೆದ ಜಗಳಕ್ಕೆ ಸಂಬಂಧಿಸಿದಂತೆ 2016ರಲ್ಲಿ ದಾಖಲಾಗಿದ್ದ ಹಲ್ಲೆ ಮತ್ತು ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ವಿರೂಪಾಕ್ಷಪ್ಪ ವಿರುದ್ಧ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

ಜಮೀನಿನ ಮಾಲಿಕ ವಿಜಯಕುಮಾರ ಅವರನ್ನು ಅಪರಾಧಿ ಬಹದ್ದೂರುಬಂಡಿ ಗ್ರಾಮದ ವಿರೂಪಾಕ್ಷಪ್ಪ ಅವಾಚ್ಯ ಪದಗಳಿಂದ ನಿಂದನೆ, ಹಲ್ಲೆ ಹಾಗೂ ಅತಿಕ್ರಮ ಪ್ರವೇಶ ಮತ್ತು ಜೀವ ಬೆದರಿಕೆ ಆರೋಪಗಳ ಹಿನ್ನೆಲೆಯಲ್ಲಿ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಾಕ್ಷಾಧಾರಗಳನ್ನು ಪರಿಶೀಲಿಸಿದ 1ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಧೀಶರಾದ ತ್ರೀವೇಣಿ ಈರಗಾರ ಅವರು ಅಪರಾಧಿಗೆ 9 ತಿಂಗಳು ಜೈಲು, ಹಾಗೂ ₹ 1,300 ದಂಡ ವಿಧಿಸಿ ಇದೇ ಫೆ.17ರಂದು ಆದೇಶ ಪ್ರಕಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.