ಶುಕ್ರವಾರ, ಜನವರಿ 22, 2021
21 °C

ಶಾಖಾಪುರ: ಮಾರುತೇಶ್ವರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ತಾಲ್ಲೂಕಿನ ಶಾಖಾಪುರ ಗ್ರಾಮದ ಮಾರುತೇಶ್ವರ ಕಾರ್ತಿಕೋತ್ಸವದ ಪ್ರಯುಕ್ತ ರಥೋತ್ಸವ ಬುಧವಾರ ಸಡಗರ, ಸಂಭ್ರಮದಿಂದ ನೆರವೇರಿತು.

ಕೋವಿಡ್‌ ಭೀತಿ ನಡುವೆಯೂ ಯಾವ ಅಡ್ಡಿ ಆತಂಕ ಇಲ್ಲದೆ ಗ್ರಾಮಸ್ಥರು ರಥೋತ್ಸವವನ್ನು ಅದ್ಧೂರಿಯಾಗಿ ನಡೆಸಿದರು. ಸುತ್ತಲಿನ ಹಾಗೂ ಶಾಖಾಪುರ ಗ್ರಾಮದ ನೂರಾರು ಜನರು, ಮಹಿಳೆಯರು, ಮಕ್ಕಳು ಭಾಗಿಯಾಗಿ ಸಂಭ್ರಮಿಸಿದರು.

ಬೆಳಿಗ್ಗೆ ಮಾರುತೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ರಥಕ್ಕೆ ವಿಶೇಷ ಪೂಜೆ, ಹಿರೇಅರಳಿಹಳ್ಳಿ ಮತ್ತಿತರೆ ಗ್ರಾಮಗಳ ದೈವದವರು ಮೆರವಣಿಗೆ ಮೂಲಕ ತಂದ ಬೃಹತ್‌ ಗಾತ್ರದ ವಿವಿಧ ಪುಷ್ಪಗಳಿಂದ ಅಲಂಕರಿಸಿದ ಹಾರಗಳನ್ನು ರಥಕ್ಕೆ ಸಮರ್ಪಿಸಲಾಯಿತು. ಮಹಿಳೆಯರು ಪೂರ್ಣಕುಂಭ ಸೇವೆ ಸಲ್ಲಿಸಿದರು. ಮಾರುತೇಶ್ವರ ಉತ್ಸವ ಮೂತಿಯನ್ನು ಪಲ್ಲಕ್ಕಿಯಲ್ಲಿ ಕರೆತರಲಾಯಿತು.

ನಂತರ ಡೊಳ್ಳು, ಭಜಂತ್ರಿ ಕಲಾ ತಂಡದವರ ವಾದ್ಯಮೇಳದೊಂದಿಗೆ ರಥೋತ್ಸವ ನಡೆಯಿತು. ಅಧಿಕಾರಿಗಳ ಸೂಚನೆ ಅನ್ವಯ ರಥೋತ್ಸವ ಸಂಪ್ರದಾಯವನ್ನು ಕೆಲವೇ ಅಂತರದಲ್ಲಿ ಎಳೆಯಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹೇಶ ಸೇರಿದಂತೆ ಅನೇಕ ಪ್ರಮುಖರು, ಚುನಾಯಿತ ಪ್ರತಿನಿಧಿಗಳು, ಗ್ರಾಮದ ಹಿರಿಯರು
ಇದ್ದರು.

ರಾತ್ರಿ ಗ್ರಾಮದ ಕಲಾವಿದರು ಸಾಮಾಜಿಕ ನಾಟಕ ಅಭಿನಯಿಸಿದರು.

ಅಂತರ ಲೆಕ್ಕಕ್ಕಿಲ್ಲ: ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಜನರು ಪಾಲಿಸದಿರುವುದು ಕಂಡುಬಂದಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.