ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

96ನೇ ಬಾರಿ ರಕ್ತದಾನ ಮಾಡಿದ ಕೊಪ್ಪಳದ ಶಿವಕುಮಾರ್

Published 2 ಫೆಬ್ರುವರಿ 2024, 16:17 IST
Last Updated 2 ಫೆಬ್ರುವರಿ 2024, 16:17 IST
ಅಕ್ಷರ ಗಾತ್ರ

ಕೊಪ್ಪಳ: ಇಲ್ಲಿನ ಪ್ರಸಿದ್ಧ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ರಕ್ತದಾನ ಶಿಬಿರದಲ್ಲಿ ದಾವಣಗೆರೆಯ ಮಹಡಿಮನೆ ಶಿವಕುಮಾರ್ ತಮ್ಮ ಬದುಕಿನಲ್ಲಿ 96ನೇ ಬಾರಿಗೆ ರಕ್ತ ನೀಡಿದರು.

55 ವರ್ಷದ ಶಿವಕುಮಾರ್‌ 25 ವರ್ಷಗಳಿಂದ ರಕ್ತದಾನ ಮಾಡುತ್ತ ಬಂದಿದ್ದಾರೆ. ಜೊತೆಗೆ ರಕ್ತದಾನ ಮಹತ್ವದ ಸಾರುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇಲ್ಲಿನ ಜಾತ್ರಾ ಆವರಣದಲ್ಲಿನ ಸಂಚಾರಿ ರಕ್ತದಾನ ಶಿಬಿರದಲ್ಲಿ ಭಾಗಿಯಾಗಿ ಮೈತುಂಬ ರಕ್ತದ ಬಣ್ಣವನ್ನು ಬಳಿದುಕೊಂಡು ರಕ್ತದಾನದ ಮಹತ್ವ ತಿಳಿಸಿದರು. ಬರವಣಿಗೆಯೊಂದಿಗೆ ಜಾತ್ರೆಗೆ ಬರುವವರಿಗೆ ರಕ್ತದಾನದ ಮಹತ್ವದ ಸಾರಿದರು.

25 ವರ್ಷಗಳ ಹಿಂದೆ ಶಿವಕುಮಾರ್‌ ಅವರ ತಂಗಿ ಬೆಂಕಿ ಅನಾಹುತಕ್ಕೀಡಾಗಿ ಆಸ್ಪತ್ರೆಯಲ್ಲಿ ರಕ್ತ ಲಭ್ಯವಿಲ್ಲದೆ ಜೀವ ಕಳೆದುಕೊಂಡರು. ಅಂದಿನಿಂದ ಅವರು ರಕ್ತದಾನದ ಮಹತ್ವವನ್ನು ಸಾರುತ್ತಿದ್ದಾರೆ. ಇದೇ 9ರ ತನಕ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ತನಕ ರಕ್ತದಾನ ಶಿಬಿರ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT