ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಸುತ್ತ ಓಡಾಡಿದ್ದು ಬಹಿರಂಗಪಡಿಸಲೇನು: ಜನಾರ್ದನ ರೆಡ್ಡಿಗೆ ತಂಗಡಗಿ ತಿರುಗೇಟು

Published 5 ಮೇ 2024, 6:10 IST
Last Updated 5 ಮೇ 2024, 6:10 IST
ಅಕ್ಷರ ಗಾತ್ರ

ಕಾರಟಗಿ: ‘ಜನಾರ್ದನ ರೆಡ್ಡಿ ನನಗೂ ನಾಲಿಗೆ ಇದೆ. ನಾನು ಸಂಸ್ಕಾರವುಳ್ಳ ಕುಟುಂಬದಿಂದ ಬಂದಿದ್ದರಿಂದ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಇನ್ನೊಮ್ಮೆ ನಾಲಿಗೆ ಹರಿಬಿಟ್ಟರೆ ಎರಡು ಹೆಜ್ಜೆ ಮುಂದೆ ಹೋಗಿ ನಿನ್ನ ಬಗ್ಗೆ ಮಾತನಾಡಬೇಕಾದಿತ್ತು ಹುಷಾರ್‌’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ ತಂಗಡಗಿ ‘ನಾವು ಐದು ಜನ ಬೆಂಬಲ ಕೊಟ್ಟ ಕಾರಣದಿಂದಲೇ ನಿಮ್ಮ ಪಕ್ಷಕ್ಕೆ ಅಧಿಕಾರ ಲಭಿಸಿತ್ತು. ನೀನೂ ಸಚಿವನಾದೆ. ನಾನು ಪಕ್ಷೇತರ‌ ಶಾಸಕನಾಗಿ ಗೆದ್ದ ಕೂಡಲೇ ನಿಮ್ಮ ಕಾವಲುಗಾರರು ನನ್ನ ಮನೆ ಮುಂದೆ ಬಂದು ನಿಂತಿದ್ದರು. ನಾನು ನಿನ್ನ ಮನೆ ಬಾಗಿಲಿಗೆ ಬಂದಿರಲಿಲ್ಲ. ನನ್ನನ್ನು ಕರೆದುಕೊಂಡ ಹೋದ ಮೇಲೆ‌ ನೀನು ಮಂತ್ರಿಯಾದೆ. ರೆಡ್ಡಿ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದೀಯಾ’ ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದರು.

‘ರೆಡ್ಡಿ ನಿನ್ನ ಹಣೆಬರಹ ಚೆನ್ನಾಗಿ ಗೊತ್ತು. ಅಂದು ನಿನ್ನಿಂದ ಮಂತ್ರಿಯಾಗಿರಲಿಲ್ಲ. ಕನಕಗಿರಿ ಕ್ಷೇತ್ರದ ಜನರ ಆಶೀರ್ವಾದದಿಂದ ಸಚಿವನಾಗಿದ್ದೆ. ನಾನು‌ ನೀನು ಹೇಳಿದ ಪದ ಬಳಸಬಲ್ಲೇ, ಆ ತಾಕತ್ತು ನನಗೂ ಇದೆ; ನಿನ್ನ ಸಂಸ್ಕಾರ ನನ್ನದ್ದಲ್ಲ. ನಾನು ನಿನ್ನ ರೀತಿ ಅಲ್ಲ. ನಿನ್ನಂತಹ ಅದೆಷ್ಟೋ ಜನರನ್ನು ನೋಡಿದ್ದೇನೆ. ರಾಜ್ಯಸಭಾ ಚುನಾವಣಾ ವೇಳೆ ನನ್ನ ಮನೆ‌ ಸುತ್ತಲೂ ಓಡಾಡಿದೆ. ಅದನ್ನು ಬಹಿರಂಗಪಡಿಸಬೇಕಾ? ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ ಗಿರಾಕಿ ನೀನು, ಬಿಜೆಪಿಗೆ ಸೇರಿ ನನ್ನ ಬಗ್ಗೆ ಮಾತನಾಡುತ್ತೀಯಾ’ ಎಂದರು.

ಇಷ್ಟು ವರ್ಷಗಳ ಕಾಲ ಬಿಜೆಪಿಯವರು ಸುಳ್ಳು ಹೇಳಿಕೊಂಡು ಅಧಿಕಾರ ನಡೆಸಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಮಾತ್ರ ಜನರ ಬಳಿ‌ ಬರುತ್ತಾರೆ. ಇನ್ನು ಮುಂದೆ ಇಂತಹ ಸುಳ್ಳಿಗೆ ಜನತೆ ಆಸ್ಪದ ನೀಡಬಾರದು ಎಂದು ಮನವಿ ಮಾಡಿದರು. ಪಕ್ಷದ ಮುಖಂಡರು ಹಾಗೂ ಸ್ಥಳೀಯ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜನಾರ್ಧನ್ ರೆಡ್ಡಿ, ಎರಡು ಹೆಜ್ಜೆ ಮುಂದೆ ಹೋಗಿ ಮಾತನಾಡಬೇಕಾದಿತು ಹುಷಾರ್!; ಸಚಿವ‌ ಶಿವರಾಜ್ ತಂಗಡಗಿ ಎಚ್ಚರಿಕೆ
ರಾಜ್ಯಸಭಾ ಚುನಾವಣೆಗೆ ಮುನ್ನ ನನ್ನ ಮನೆ ಸುತ್ತಾ ಓಡಾಡಿದ್ದನ್ನು‌ ಬಹಿರಂಗಪಡಿಸಲಾ? ಸಂಸ್ಕಾರವುಳ್ಳ ಕುಟುಂಬದಿಂದ ಬಂದಿದ್ದಕ್ಕೆ ನಿನ್ನ ಸುಮ್ಮನೆ ಬಿಟ್ಟಿದ್ದೀನಿ ಟಗರು ಬೆಂಗಳೂರಿಂದ ಬಳ್ಳಾರಿಗೆ ಬಂದು ಗುದ್ದಿದ್ದು ನೆನಪಿದ್ಯಾ ನನ್ನನ್ನು ಸೇರಿ ಐವರು ಶಾಸಕರ‌ ಬೆಂಬಲದಿಂದ ನೀನು, ನಿನ್ನ ಸರ್ಕಾರ‌ ಅಂದು ಅಧಿಕಾರಕ್ಕೆ ಬಂದಿದ್ದು ನಾನು ಪಕ್ಷೇತರನಾಗಿ ಗೆದ್ದ ಕೂಡಲೇ ನಿನ್ನ ಕಾವಲುಗಾರರು ನನ್ನ ಮನೆ ಮುಂದೆ ನಿಂತು ನನಗಾಗಿ ಕಾವಲು ಕಾಯುತ್ತಿದ್ದದ್ದು ಮರೆತು ಹೋಯಿತೇ? ನಿನ್ನ ಹಣೆ ಬರಹ ನನಗೆ ಚೆನ್ನಾಗಿ ಗೊತ್ತು. ನಿನ್ನಿಂದ ತಂಗಡಗಿ ಮಂತ್ರಿಯಾಗಿರಲಿಲ್ಲ, ಕನಕಗಿರಿ ಕ್ಷೇತ್ರದ ಜನರ ಆಶೀರ್ವಾದದಿಂದ ಮಂತ್ರಿಯಾಗಿದ್ದೆ ನೀನು ಹೇಳಿದ ಪದ ನಾನು ಬಳಸಬಲ್ಲೇ. ಆ ತಾಕತ್ತು ನನಗೂ ಇದೆ; ಆದ್ರೆ ನಿನ್ನ ಸಂಸ್ಕಾರ ನನ್ನದ್ದಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT