ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಜಯ ಖಚಿತ: ಬಸವರಾಜ ಉಳ್ಳಾಗಡ್ಡಿ

Published 24 ಮೇ 2024, 14:04 IST
Last Updated 24 ಮೇ 2024, 14:04 IST
ಅಕ್ಷರ ಗಾತ್ರ

ಯಲಬುರ್ಗಾ: ‘ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳು ಹಾಗೂ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಇಲ್ಲಿನ ಜನಪ್ರತಿನಿಧಿಗಳು ಕೊಡುಗೆಯಿಂದ ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ ಅವರ ಗೆಲುವು ಖಚಿತ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಪಕ್ಷದ ಕಚೇರಿಯಲ್ಲಿ ರಾಜ್ಯ ವಿಧಾನ ಪರಿಷತ್‌ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿರುವ ಪಾಟೀಲ ಅವರನ್ನು ಮತ್ತೊಮ್ಮೆ ಪದವೀಧರರು ಆಯ್ಕೆ ಮಾಡುವುದು ನಿಶ್ಚಿತವಾಗಿದೆ. ಈಶಾನ್ಯ ಭಾಗದ ನೌಕರರ ಹಿತ ಕಾಪಾಡುವಲ್ಲಿ, 371(ಜೆ) ಪರಿಣಾಮಕಾರಿ ಅನುಷ್ಠಾನಕ್ಕೆ ವಿಶೇಷ ಕಾಳಜಿ, ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಶ್ರಮಿಸುತ್ತಿರುವುದು ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ನಿರೀಕ್ಷೆ ಮೀರಿ ಅನುಷ್ಠಾನಕ್ಕೆ ತಂದಿದ್ದಾರೆ ಎಂದರು.

ಮುಖಂಡ ಬಿ.ಎಂ. ಶಿರೂರ ಮಾತನಾಡಿ, ತಾಲ್ಲೂಕಿನಲ್ಲಿ ಯಲಬುರ್ಗಾ, ಹಿರೇವಂಕಲಕುಂಟಾ, ಮಂಗಳೂರು ಹಾಗೂ ಕುಕನೂರಿನಲ್ಲಿ ಒಟ್ಟು ನಾಲ್ಕು ಮತಗಟ್ಟೆಗಳಿದ್ದು, ಸುಮಾರು 2400 ಮತದಾರರು ನೋಂದಾಯಿಸಿಕೊಂಡಿದ್ದಾರೆ. ಪ್ರಾಶಸ್ತ್ಯ ಮತದಾನ ಪದ್ಧತಿ ಇರುವುದರಿಂದ ಚುನಾವಣಾ ಆಯೋಗದ ಸೂಚನೆಯಂತೆ ಗುರುತು ಹಾಕಬೇಕಾಗುತ್ತದೆ ಎಂದರು.

ಯುವ ಮುಖಂಡ ಪಂಚಯ್ಯ ಹಿರೇಮಠ ಮಾತನಾಡಿ, ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರು ಕ್ಷೇತ್ರದಲ್ಲಿ ಮಾಡಿದ ಅಪಾರ ಅಭಿವೃದ್ಧಿ ಸಾಧನೆಯನ್ನು ನೋಡಿಯೇ ಚಂದ್ರಶೇಖರ ಪಾಟೀಲ ಅವರಿಗೆ ಮತ ಹಾಕುತ್ತಾರೆ. ಎರಡನೇ ಅವಧಿಗೆ ಆಯ್ಕೆ ಬಯಸಿರುವ ಚಂದ್ರಶೇಖರ ಅವರನ್ನು ಈ ಭಾಗದ ಮತದಾರರು ಅಧಿಕ ಮತಗಳಿಂದ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾಂತೇಶ ಗಾಣಿಗೇರ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಜಯಶ್ರೀ ಗೊಲ್ಲರ ಸೇರಿ ಅನೇಕರು ಮಾತನಾಡಿದರು.  ಮುಖಂಡರಾದ ವೀರನಗೌಡ ಪೊಲೀಸ್‍ ಪಾಟೀಲ, ಕೆರಿಬಸಪ್ಪ ನಿಡಗುಂದಿ, ಸುಧೀರ ಕೊರ್ಲಳ್ಳಿ, ಮಲ್ಲು ಜಕ್ಕಲಿ, ಶಿವನಗೌಡ ದಾನರಡ್ಡಿ, ಶರಣಮ್ಮ ಪೂಜಾರ, ಗಿರಿಜಾ ಸಂಗಟಿ, ಜಯಶ್ರೀ ಕಂದಕೂರ, ರಹಿಮಾನಸಾಬ ನಾಯಕ, ಮಲ್ಲನಗೌಡ ಪಾಟೀಲ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT