ನಗರಸಭಾ ಚುನಾವಣೆ: ಅಧಿಕಾರಿಗಳ ನಿಯೋಜನೆ

7

ನಗರಸಭಾ ಚುನಾವಣೆ: ಅಧಿಕಾರಿಗಳ ನಿಯೋಜನೆ

Published:
Updated:
Deccan Herald

ಗಂಗಾವತಿ: ನಗರಸಭಾ ಚುನಾವಣೆ ಹಿನ್ನೆಲೆ ನಗರದ ವಿವಿಧ ವಾರ್ಡುಗಳಿಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ನಿಯೋಜನೆ ಪ್ರಕ್ರಿಯೆ ಗುರುವಾರ ಸಂಜೆ ತಹಶೀಲ್ದಾರ್ ಚಂದ್ರಕಾಂತ್ ನೇತೃತ್ವದಲ್ಲಿ ನಡೆಯಿತು.

ಒಟ್ಟು 35 ವಾರ್ಡ್‌ಗಳಿಗೆ ಅಧಿಕಾರಿಗಳ ನೇಮಕ ಮಾಡಲಾಯಿತು. ಇದೇ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆಯ ಕಾರ್ಯಲಯವನ್ನು ಗೊತ್ತು ಮಾಡಲಾಯಿತು. ಬಿಇಒ ಸಿದ್ದಲಿಂಗ ಮೂರ್ತಿ, ತಾಲ್ಲೂಕು ಪಂಚಾಯಿತಿ ಇಒ ಮೋಹನಕುಮಾರ, ಲೋಕೋಪಯೋಗಿ ಇಲಾಖೆಯ ಎಇಇ ತಿರುಮಲ ರಾವ್ ಕುಲಕರ್ಣಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಂಬಣ್ಣ ಐಲಿ, ಎಪಿಎಂಸಿಯ ಎಇಇ ಹನುಮರೆಡ್ಡಿ ಅವರನ್ನು ಚುನಾವಣಾಧಿಕಾರಿ ಎಂದು ನಿಯೋಜಿಸಲಾಗಿದೆ.

ಕ್ಷೇತ್ರ ಶಿಕ್ಷಣ ಇಲಾಖೆಯ ವೀರಭದ್ರಪ್ಪ ಗೊಂಡಬಾಳ, ಸಹಾಯಕ ತೋಟಗಾರಿಕಾ ಅಧಿಕಾರಿ ಮಹಾಂತೇಶ ಪಟ್ಟಣ ಶೆಟ್ಟಿ, ಅಕ್ಷರ ದಾಸೋಹ ನಿರ್ದೇಶಕ ಆರ್.ಟಿ. ನಾಯಕ್, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ನಿಂಗಪ್ಪ, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ದೇವೇಂದ್ರಪ್ಪ ಸಹಾಯಕ ಚುನಾವಣಾಧಿಕಾರಿ ಎಂದು ನಿಯೋಜಿಸಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ನಗರಸಭೆಯ ಅಧ್ಯಕ್ಷರ ಕೊಠಡಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿಯನ್ನು ನಾಮಪತ್ರ ಸ್ವೀಕರಿಸುವ ಕೇಂದ್ರಗಳನ್ನಾಗಿಸಲಾಗಿದೆ.

ಆ. 10ರಿಂದ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಆ. 17ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, 18ರಂದು ಪರಿಶೀಲನೆ, 20ರಂದು ಉಮೇದುವಾರಿಕೆ ಹಿಂತೆಗೆಕ್ಕೆ ಅವಕಾಶವಿದೆ. ಆ.29ರಂದು ಮತದಾನ, ಸೆ.1ರಂದು ಮತ ಎಣಿಕೆ ನಡೆಯಲಿದೆ ಎಂದು ತಹಶೀಲ್ದಾರ್ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !