ರಸ್ತೆಯ ದೂಳು ಮುಖ ಕಣ್ಣುಗಳ ಮೇಲೆ ಆವರಿಸಿ ತೊಂದರೆ ಸೃಷ್ಟಿಸುತ್ತದೆ. ಇದರಿಂದ ಹಲವು ಸೋಂಕುಗಳೂ ಕಾಣಿಸಿಕೊಳ್ಳುತ್ತವೆ. ಕಣ್ಣಿಗೆ ಬೀಳುವ ದೂಳನ್ನು ಕಣ್ಣೀರು ಸ್ವಚ್ಛಗೊಳಿಸಬಹುದಾದರೂ ವಿಪರೀತ ದೂಳು ಆವರಿಸಿದರೆ ಅದೂ ಕಷ್ಟ. ಜನ ಎಚ್ಚರ ವಹಿಸಬೇಕು ವೈದ್ಯಾಧಿಕಾರಿ
ಡಾ.ಶರಣಯ್ಯ ಹಿರೇಮಠ
ಯುವ ಜನಾಂಗದಲ್ಲಿ ಡಸ್ಟ್ ಅಲರ್ಜಿ ಎಂಬ ಕಾಯಿಲೆ ಸಾಮಾನ್ಯವಾಗುತ್ತಿದೆ. ವಯಸ್ಸಾಗುತ್ತಿದ್ದಂತೆಯೇ ಇದು ಉಲ್ಬಣಗೊಂಡು ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿ ದಮ್ಮು ಅಸ್ತಮಾ ಆ ಬಳಿಕ ಕ್ಷಯಕ್ಕೆ (ಟಿ.ಬಿ) ತಿರುಗಿದರೆ ವರ್ಷದುದ್ದಕ್ಕೂ ಚಿಕಿತ್ಸೆ ಪಡೆಯಬೇಕಾಗುತ್ತದೆ
ಡಾ.ಮಮತಾ ಇಲಕಲ್ ವೈದ್ಯೆ
ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ರಸ್ತೆಯನ್ನು ಅಗೆದು ಬಿಡಲಾದ ಕಾಮಗಾರಿಯನ್ನು ಸಂಬಂಧಪಟ್ಟ ಇಲಾಖೆಯವರಿಗೆ ತಿಳಿಸಿ ಕೆಲವೇ ದಿನಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡುತ್ತೇವೆ