ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಹುದ್ದೆ ಭರ್ತಿಗೆ ಆಗ್ರಹ

Last Updated 17 ಜನವರಿ 2022, 5:13 IST
ಅಕ್ಷರ ಗಾತ್ರ

ಹನುಮಸಾಗರ: ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶಗೌಡ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಅವರನ್ನು ಭೇಟಿಯಾಗಿ ಖಾಲಿ ಇರುವ ಮುಖ್ಯಶಿಕ್ಷಕರ ಹುದ್ದೆಗಳನ್ನು ಕೌನ್ಸಲಿಂಗ್‍ಗೆ ಅಳವಡಿಸುವಂತೆ ಮನವಿ ನೀಡಿದರು.

ಜಿಲ್ಲೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದಲ್ಲಿ ಸುಮಾರು 15 ವರ್ಷಗಳಿಂದ ಮುಖ್ಯ ಶಿಕ್ಷಕರ ಹುದ್ದೆ ಮಂಜೂರು ಆಗಿಲ್ಲ. 2018-19ನೇ ಸಾಲಿನ ಮತ್ತು 2019ನೇ ಸಾಲಿನಲ್ಲಿ ಹೊಸದಾಗಿ ಪ್ರಾರಂಭವಾದ ಆರ್‌ಎಂಎಸ್‌ಎ ಮತ್ತು ಕೆ.ಕೆ.ಆರ್.ಡಿ.ಬಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಮಂಜೂರಾತಿ ಮಾಡಬೇಕು ಎಂದರು.

ಈ ಎಲ್ಲ ಹುದ್ದೆಗಳನ್ನು ಪ್ರಸ್ತುತ ಮುಖ್ಯ ಶಿಕ್ಷಕರ ಬಡ್ತಿ ನೀಡುವ ಸಂದರ್ಭದಲ್ಲಿ ಈ ಹುದ್ದೆಗಳನ್ನು ಕೌನ್ಸಲಿಂಗ್‌ನಲ್ಲಿ ಅಳವಡಿಸಬೇಕೆಂದು ಹಾಗೂ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಸಚಿವರಿಗೆ ಮನವಿ ಮಾಡಿದರು.

ಸಚಿವರು ಇದಕ್ಕೆ ಪ್ರತಿಕ್ರಿಯಿಸಿ, ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಕೈಕೊಳ್ಳಲಾಗುವುದು ಎಂದು ಸಂಘದ ಪದಾಧಿಕಾರಿಗಳಿಗೆ ಭರವಸೆ ನೀಡಿದರು.

ಸಂಘದ ಪದಾಧಿಕಾರಿಗಳಾದ ಡಿ.ಎಂ.ಮುಗಳಿ, ನಿಂಗಪ್ಪ ಚಕ್ರಸಾಲಿ, ಅರವಿಂದಕುಮಾರ್ ದೇಸಾಯಿ, ಎಂ.ಡಿ.ಯೂಸೂಫ್, ಸುರೇಶ ಪಾಠಕ, ರೇವಣಪ್ಪ ಅಬ್ಬಿಗೇರಿ, ಬಸವರಾಜ ಮೇಟಿ, ಮಹಾದೇವ, ಶರಣಪ್ಪ ಅರಕೇರಿ, ರಾಮರೆಡ್ಡಿ, ಗಿರಿಗೌಡ, ಸದಾನಂದ, ಶರಣಪ್ಪ ಮೂಗನೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT