ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕರ ಕೊರತೆ ನಿವಾರಿಸಿ

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳ ಆಗ್ರಹ
Last Updated 14 ಸೆಪ್ಟೆಂಬರ್ 2020, 8:02 IST
ಅಕ್ಷರ ಗಾತ್ರ

ಕಾರಟಗಿ: ಸಮೀಪದ ನಾಗನಕಲ್ ಗ್ರಾಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಇದೆ. ಜೊತೆಗೆ ಕಾಲೇಜಿಗೆ ತೆರಳಲು ಸಾರಿಗೆ ಸಮಸ್ಯೆಯೂ ಇದೆ ಎಂದು ಕಾಲೇಜನ ವಿದ್ಯಾರ್ಥಿಗಳು ದೂರಿದರು.

ಜಿಲ್ಲೆಯಲ್ಲಿ ಕುಷ್ಟಗಿ, ಕೊಪ್ಪಳ ಬಿಟ್ಟರೆ ಕಾರಟಗಿಯಲ್ಲಿ ಮಾತ್ರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿವೆ. ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಇ ಅಂಡ್ ಸಿ, ಸಿವಿಲ್, ಸೈನ್ಸ್ ವಿಭಾಗಗಳಲ್ಲಿ ನೂರಾರು ವಿದ್ಯಾರ್ಥಿಗಳು ಹಿಂದಿನಿಂದ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.

ಇಲ್ಲಿಯ ಕಾಲೇಜಿನಲ್ಲಿ ಮಾತ್ರಸಿವಿಲ್ ವಿಭಾಗವಿದೆ. ಕುಷ್ಟಗಿ ಹಾಗೂ ಕೊಪ್ಪಳ ಭಾಗದ ವಿದ್ಯಾರ್ಥಿಗಳು ಸಿವಿಲ್ ಆಯ್ಕೆ ಮಾಡಿಕೊಂಡರೆ ಈ ಕಾಲೇಜಿನಲ್ಲಿ ಸೇರಬೇಕು. ಆದರೆ, ಈ ಕಾಲೇಜಿನಲ್ಲಿ ಅಗತ್ಯ ಉಪನ್ಯಾಸಕರಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನೆಡೆಯಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಸಿವಿಲ್ ವಿಭಾಗದ ಉಪನ್ಯಾಸಕರಲ್ಲಿ ನಾಲ್ವರು ನಿಯೋಜನೆಯ ಮೇಲೆ ಬೇರೆ ಕಾಲೇಜಿಗೆ ತೆರಳಿದ್ದಾರೆ. ಇವರ ಸ್ಥಾನಕ್ಕೆ ಅತಿಥಿ ಉಪನ್ಯಾಸಕರನ್ನು ತಗೆದುಕೊಳ್ಳಲಾಗಿದೆ.

ಕಾಯಂ ಉಪನ್ಯಾಸಕರಿದ್ದರೆ ಪರಿಣಾಮಕಾರಿ ಬೋಧನೆ ನಡೆಯು ತ್ತದೆ. ಉಪನ್ಯಾಸಕರ ಕೊರತೆಯಿಂದಾಗಿ ಹೆಚ್ಚು ಅಂಕಗಳಿಸುವುದು ಅಸಾಧ್ಯ ಎಂದು ಕೆಲ ವಿದ್ಯಾರ್ಥಿಗಳು ದೂರಿದರು.

ಕಾಲೇಜಿಗೆ ತೆರಳಲು ಸಾರಿಗೆ ವ್ಯವಸ್ಥೆಯೂ ಇಲ್ಲ. ಕೆಲ ಬಸ್‌ಗಳು ಕಾಲೇಜಿನ ಬಳಿ ನಿಲುಗಡೆ ಮಾಡುವುದಿಲ್ಲ. ಇದು ನಿತ್ಯದ ಸಮಸ್ಯೆ ಯಾಗಿದ್ದು, ಹೊಸಬರು ಕಾಲೇಜಿಗೆ ಸೇರಲು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಈ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಹಲವು ಬಾರಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರೂ ಪರಿಹಾರ ದೊರೆತಿಲ್ಲ. ಈ ಬಗ್ಗೆ ಕಾಲೇಜಿನವರು ಕೂಡ ಗಮನಹರಿಸುತ್ತಿಲ್ಲ ಎಂದು ವಿದ್ಯಾರ್ಥಿಗಳುದೂರಿದರು.

ವಿದ್ಯಾರ್ಥಿಗಳಿಂದ ಅಧಿಕ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಿದವರಿಗೆ ಆಂತರಿಕ ಅಂಕ ಕಡಿತ ಮಾಡಲಾಗುತ್ತಿದೆ ಎಂದು ನಾಗನಕಲ್‌ ಗ್ರಾಮದ ಮುಖಂಡರೊಬ್ಬರು ಆರೋಪಿಸಿದರು.

ಪ್ರಾಚಾರ್ಯ ರಾಘವೇಂದ್ರ ಪ್ರತಿಕ್ರಿಯಿಸಿ, ಸಿವಿಲ್ ವಿಭಾಗದಲ್ಲಿ ಉಪನ್ಯಾಸಕರ ಸಮಸ್ಯೆಯಿಲ್ಲ. ಖಾಲಿ ಇರುವ ಸ್ಥಾನಕ್ಕೆ ಅತಿಥಿ ಉಪನ್ಯಾಸಕರು ನೇಮಕ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT