ವಿಶೇಷ ಅನುದಾನ ನೀಡಲು ಮನವಿ

6

ವಿಶೇಷ ಅನುದಾನ ನೀಡಲು ಮನವಿ

Published:
Updated:
ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುವಂತೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರನ್ನು ಶಾಸಕ ಬಸವರಾಜ ಭೇಟಿಮಾಡಿ ಮನವಿ ಸಲ್ಲಿಸಿದರು

ಗಂಗಾವತಿ: ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿನ ಕನಕಗಿರಿ ಮೀಸಲು ಕ್ಷೇತ್ರಕ್ಕೆ ಸರ್ಕಾರದಿಂದ ವಿಶೇಷ ಅನುದಾನ ಕಲ್ಪಿಸುವಂತೆ ಶಾಸಕ ಬಸವರಾಜ ದಡೇಸುಗೂರು ಅವರು ಬುಧವಾರ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರಿಗೆ ಮನವಿ ಮಾಡಿದರು.

ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿ ಉಪಮುಖ್ಯಮಂತ್ರಿಯವರನ್ನು ಭೇಟಿಯಾದ ಅವರು, ‘ಮೂರು ಅವಧಿಯಿಂದ ಕನಕಗಿರಿ ಮೀಸಲು ಕ್ಷೇತ್ರ ವಾಗಿದ್ದು, ಸರ್ಕಾರದಲ್ಲಿ ವಿಶೇಷ ಅನುದಾನ ನೀಡಬೇಕು. ಅನುದಾನ ಸದ್ಬಳಕೆ ಮಾಡಿಕೊಂಡು ಕ್ಷೇತ್ರದ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಜಿ. ಪರಮೇಶ್ವರ, ‘ಅನುದಾನಕ್ಕೆ ಒಮ್ಮೆ ಮನವಿ ಸಲ್ಲಿಸಿದರೆ ಸಾಲದು. ಒಪ್ಪಿಗೆ, ಮಂಜೂರಾತಿ, ಕಡತ ಅನುಮೋದನೆಗೆ ನಿರಂತರ ಶ್ರಮ ವಹಿಸಬೇಕು’ ಎಂದರು.  ಕೆಎಂಎಫ್ ಮಾಜಿ ಅಧ್ಯಕ್ಷ ಸತ್ಯನಾರಾಯಣ, ಬಿಜೆಪಿ ಮುಖಂಡರಾದ ಬಸವರಾಜ ಹೇರೂರು, ಶರಣಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !