ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ.3ಕ್ಕೆ ಸಮ್ಮೇಳನ ಮುಂದೂಡಿಕೆ

ತಾಲ್ಲೂಕು ಕಸಾಪದ ತರಾತುರಿ ನಿರ್ಧಾರಕ್ಕೆ ಗ್ರಾಮಸ್ಥರ ಆಕ್ರೋಶ
Last Updated 27 ಫೆಬ್ರುವರಿ 2021, 3:05 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ಗುಮಗೇರಾ ಗ್ರಾಮದಲ್ಲಿ ಇಂದು (ಫೆ.27) ನಡೆಯಬೇಕಿದ್ದ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೊನೆಗಳಿಗೆಯಲ್ಲಿ ಮಾ.3ಕ್ಕೆ ಮುಂದೂಡಿರುವುದು ಅಚ್ಚರಿಗೆ ಕಾರಣವಾಗಿದೆ.

ಈ ಕುರಿತು ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ ಹಿರೇಮಠ ಮಾಹಿತಿ ನೀಡಿದ್ದಾರೆ.

‘ಪೂರ್ವಸಿದ್ಧತೆ ಮಾಡಿಕೊಳ್ಳಲು ಸಮಯ ಇರಲಿಲ್ಲ. ಹಾಗಾಗಿ ಅಚ್ಚುಕಟ್ಟಾಗಿ ಸಮ್ಮೇಳನ ನಡೆಸುವ ಉದ್ದೇಶದಿಂದ ಮುಂದೂಡಲಾಗಿದೆ’ ಎಂದು ತಿಳಿಸಿದ್ದಾರೆ.

ಸಮ್ಮೇಳನದ ಸರ್ವಾಧ್ಯಕ್ಷರು ಕೆಲ ದಿನಗಳವರೆಗೆ ಸಮ್ಮೇಳನ ಮುಂದೂಡುವಂತೆ ಮನವಿ ಮಾಡಿದ್ದರು. ಪಟ್ಟಣದಲ್ಲಿ ಬುತ್ತಿಬಸವೇಶ್ವರ ಜಾತ್ರೆ ಇದೆ. ಅದೇ ರೀತಿ ತಾವರಗೇರಾದಲ್ಲಿಯೂ ಜಾತ್ರೆ ಇದೆ. ಈ ಕಾರಣಕ್ಕೆ ಸಮ್ಮೇಳನ ಮುಂದೂಡುವ ಬಗ್ಗೆ ಪ್ರಕಟಣೆ ನೀಡುವುದಾಗಿ ಒಂದು ವಾರದ ಹಿಂದೆಯೇ ಜಿಲ್ಲಾ ಅಧ್ಯಕ್ಷ ರಾಜಶೇಖರ ಅಂಗಡಿ ಅವರಿಗೆ ತಿಳಿಸಿದ್ದೆವು. ಆದರೆ ಪ್ರಕಟಣೆಗೆ ಜಿಲ್ಲಾ ಅಧ್ಯಕ್ಷರು ಅವಕಾಶ ನೀಡಲಿಲ್ಲ. ಆಮಂತ್ರಣ ಪತ್ರಿಕೆಗಳ ಮುದ್ರಣವೂ ಪೂರ್ಣಗೊಂಡಿಲ್ಲ. ಯಾವ ಸಿದ್ಧತೆಯೂ ನಡೆದಿಲ್ಲ ಎಂಬುದನ್ನು ಗಮನಕ್ಕೆ ತಂದ ನಂತರ ದಿನ ಮುಂದೂಡುವಂತೆ ಜಿಲ್ಲಾ ಘಟಕ ಸೂಚಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT