ಚೊಚ್ಚಲ ಪಂದ್ಯದಲ್ಲಿ ಮೈಸೂರು ತಂಡದ ಎದುರು ಗೆಲುವು ಪಡೆದವು. ಮೊದಲ ಬಾರಿಗೆ ನಮ್ಮ ಜಿಲ್ಲೆಯಲ್ಲಿ ನೆಟ್‌ಬಾಲ್ ಟೂರ್ನಿ ಆಯೋಜನೆಯಾಗಿದ್ದು ಖುಷಿ ನೀಡಿದೆ. ಇದೇ ರೀತಿ ರಾಜ್ಯಮಟ್ಟದ ಬೇರೆ ಕ್ರೀಡೆಗಳೂ ನಡೆಯಬೇಕು.
ಸೌಜನ್ಯ ಜಿ., ಕೊಪ್ಪಳ ಜಿಲ್ಲಾ ತಂಡದ ಆಟಗಾರ್ತಿ
ಕ್ರೀಡಾಕೂಟದ ನೆಪದಲ್ಲಿ ಮೊದಲ ಬಾರಿಗೆ ಕೊಪ್ಪಳಕ್ಕೆ ಬಂದಿದ್ದೇನೆ. ವ್ಯವಸ್ಥೆ ಚೆನ್ನಾಗಿ ಮಾಡಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೋಗಿ ಆಡುವುದು ಹೊಸ ಅನುಭವ ನೀಡುತ್ತದೆ.
ಭಾರ್ಗವ್ ಎಲ್. , ಕೋಲಾರ ತಂಡದ ಆಟಗಾರ
ಕೊಪ್ಪಳ ಜಿಲ್ಲೆ ಮೊದಲ ಬಾರಿಗೆ ನೆಟ್‌ಬಾಲ್ ಟೂರ್ನಿಗೆ ಆತಿಥ್ಯ ವಹಿಸಿದ್ದೇವೆ. ಎಲ್ಲರಿಗೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ಇದು ಜಿಲ್ಲೆಯಲ್ಲಿ ಕ್ರೀಡೆ ಬೆಳವಣಿಗೆಗೆ ಸಹಕಾರಿಯಾಗಲಿದೆ.
ಜಗದೀಶ್ ಜಿ.ಎಚ್., ಡಿಡಿಪಿಯು ಕೊಪ್ಪಳ
ಕೊಪ್ಪಳದ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ನೆಟ್‌ಬಾಲ್ ಟೂರ್ನಿಯಲ್ಲಿ ತಂಡಗಳ ಪೈಪೋಟಿಯ ಚಿತ್ರಣ –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ