ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಾವರಗೇರಾ: ಕಲ್ಲು ಎಳೆಯುವ ಸ್ಪರ್ಧೆ ಸಂಭ್ರಮಿಸಿದ ರೈತರು

Published 19 ಫೆಬ್ರುವರಿ 2024, 4:37 IST
Last Updated 19 ಫೆಬ್ರುವರಿ 2024, 4:37 IST
ಅಕ್ಷರ ಗಾತ್ರ

ತಾವರಗೇರಾ: ವೀರಭದ್ರೇಶ್ವರ ಜಾತ್ರೆ ಪ್ರಯುಕ್ತ ಪಟ್ಟಣದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಆವರಣದಲ್ಲಿ ಶನಿವಾರ ಎತ್ತುಗಳಿಂದ 1.5 ಟನ್ ತೂಕದ ಕಲ್ಲನ್ನು ಎಳೆಯುವ ಸ್ಪರ್ಧೆ ನಡೆಯಿತು.

ಎಂ.ಗುಡದೂರು ನೀಲಕಂಠಯ್ಯ ತಾತ ಸ್ಪರ್ಧೆಗೆ ಚಾಲನೆ ನೀಡಿದರು. 10 ಜೋಡಿ ಎತ್ತುಗಳು ಭಾಗವಹಿಸಿದ್ದವು. 

ಹಿರೇಬರಗೇರಾ ಗ್ರಾಮದ ರೈತ ಮಹಿಳೆಯ ಎತ್ತುಗಳು ಪ್ರಥಮ ಬಹುಮಾನ ಸ್ಥಾನ ಪಡೆದು 5 ಗ್ರಾಂ ಬಂಗಾರ ಪಡೆದುಕೊಂಡಿದ್ದು, ತಾವರಗೇರಾದ ರೈತ ಸತ್ತಾರ್ ಸಾಬ್ ಮುಲ್ಲಾರ್ ಎತ್ತುಗಳು ದ್ವಿತೀಯ ಬಹುಮಾನ ಪಡೆದು 15 ತೊಲ ಬೆಳ್ಳಿ, ಹೊಸೂರು ಗ್ರಾಮದ ಶ್ಯಾಮಣ್ಣ ಮಾಳಗಿಯವರ ಎತ್ತುಗಳು ತೃತೀಯ ಸ್ಥಾನ ಪಡೆದ 11 ತೊಲ ಬೆಳ್ಳಿ ಪಡೆದುಕೊಂಡವು.

ಗ್ರಾ.ಪಂ ಮಾಜಿ ಅಧ್ಯಕ್ಷ ವೀರಭದ್ರಪ್ಪ ನಾಲ್ತವಾಡ, ಪ.ಪಂ ಸದಸ್ಯ ಕರಡೆಪ್ಪ ನಾಲ್ತವಾಡ, ಪ್ರಮುಖರಾದ ಶ್ಯಾಮೀದಸಾಬ್ ನಾಲಬಂದಾ, ವಿರುಪಣ್ಣ ನಾಲ್ತವಾಡ, ಬಸವರಾಜ ಪೂಜಾರ, ಮತ್ತು ವೀರಭದ್ರೇಶ್ವರ ಜಾತ್ರಾ ಸಮಿತಿ ಸದಸ್ಯರು, ರೈತರು ಸ್ಥಳೀಯ ಎಪಿಎಂಸಿ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT