ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ | ಬೆಳೆ ಪರಿಹಾರ ಅಸಮರ್ಪಕ‌ ವಿತರಣೆ: ದೂರು

Published 14 ಮೇ 2024, 15:08 IST
Last Updated 14 ಮೇ 2024, 15:08 IST
ಅಕ್ಷರ ಗಾತ್ರ

ಕನಕಗಿರಿ: ಬೆಳೆ ಪರಿಹಾರವನ್ನು ಸರ್ಕಾರ ಸಮರ್ಪಕವಾಗಿ‌ ವಿತರಣೆ ಮಾಡಿಲ್ಲ ಎಂದು ಹಸಿರು ಸೇನೆ ಹಾಗೂ ರೈತ ಸಂಘಟ‌ನೆ‌ ಪದಾಧಿಕಾರಿಗಳು ಮಂಗಳವಾರ ಗ್ರೇಡ್ -2 ತಹಶೀಲ್ದಾರ್ ವಿರೂಪಾಕ್ಷಪ್ಪ ಹೊರಪೇಟೆ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘಟನೆಯ ಹಿರೇಖೇಡ ಘಟಕದ ಅಧ್ಯಕ್ಷ ಹನುಮಂತಪ್ಪ ಬಂಡ್ರಾಳ, ಮಾತನಾಡಿ ಬೆಳೆ ಪರಿಹಾರ ವಿತರಣೆಯಲ್ಲಿ ಸರ್ಕಾರ ತಾರತಮ್ಯ ಮಾಡಿದೆ, ಸಂಕಷ್ಟದಲ್ಲಿರುವ ಎಲ್ಲಾ ರೈತರಿಗೂ ಬೆಳೆ ಪರಿಹಾರ ನೀಡಬೇಕು, ಗ್ರಾಮೀಣ ಭಾಗದಲ್ಲಿ ‌ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಸಮರ್ಪಕವಾಗಿ‌ ನೀರು ಪೊರೈಸಬೇಕೆಂದು ಒತ್ತಾಯಿಸಿದರು.ತಾಲ್ಲೂಕಿನಲ್ಲಿ ಮಳೆ ಬಿದ್ದಿದ್ದು ಬಿತ್ತನೆ‌ ಬೀಜಗಳನ್ನು ರೈತ ಸಂಪರ್ಕ ಕೇಂದ್ರದಿಂದ ವಿತರಣೆ ಮಾಡಿ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಸಂಘಟನೆಯ ಉಪಾಧ್ಯಕ್ಷರಾದ ಜಡಿಯಪ್ಪ ನೀರ್ಲೂಟಿ, ವೆಂಕಟೇಶ, ಮಲ್ಲಿಗೆವಾಡ ಗ್ರಾಮ ಘಟಕದ ಅಧ್ಯಕ್ಷ ತಿಮ್ಮನಗೌಡ, ಗೌರವಾಧ್ಯಕ್ಷ ಯಮನೂರಪ್ಪ ಪ್ರಮುಖರಾದ‌ ಹನುಮಂತಪ್ಪ ಗಾಡಿಬಾಯಿ, ಪ್ಯಾಟ್ಯಾಳ ಬಾರಿಮರ್ದಪ್ಪ ಇತರರು ಇದ್ದರು. ಗ್ರೇಡ್ -2 ತಹಶೀಲ್ದಾರ್ ವಿರೂಪಾಕ್ಷಪ್ಪ ಹೊರಪೇಟೆ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT