ಕೊಪ್ಪಳ ತಾಲ್ಲೂಕು ವ್ಯಾಪ್ತಿಯ ಕುಣಿಕೇರಿ ಗ್ರಾಮದಲ್ಲಿ ಬೆಳೆ ಕಾರ್ಖಾನೆಗಳ ದೂಳಿಗೆ ಕಪ್ಪಾಗಿರುವ ಮಣ್ಣು
ಸರ್ಕಾರ ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ಸಮಸ್ಯೆ ಅನುಭವಿಸುತ್ತಿರುವ ಗ್ರಾಮಗಳ ಜನರ ಆರೋಗ್ಯ ಸಮೀಕ್ಷೆ ಮಾಡಬೇಕು. ಜನರ ಆರೋಗ್ಯ ರಕ್ಷಣೆಗೆ ಮುಂದಾಗಬೇಕು.
-ಅಲ್ಲಮಪ್ರಭು ಬೆಟ್ಟದೂರು ಕೊಪ್ಪಳ ಜನಾಂದೋಲನ ಸಮಿತಿ ಪ್ರಧಾನ ಸಂಚಾಲಕ
ಕಾರ್ಖಾನೆಗಳಿಂದ ದೂಳು ಬರುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ತಂಡ ಕೈಗಾರಿಕೆಗಳಿಗೆ ಭೇಟಿ ನೀಡಿ ವರದಿ ಪಡೆದುಕೊಂಡಿದೆ.
-ವೈ.ಎಸ್. ಹರಿಶಂಕರ್ ಕೊಪ್ಪಳ ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ
ಈಗಿರುವ ಕಾರ್ಖಾನೆಗಳಿಂದಲೇ ಕೊಪ್ಪಳ ನಗರಕ್ಕೆ ದೂಳು ಬರುತ್ತಿದೆ. ಬಲ್ಡೋಟಾ ತನ್ನ ಉಕ್ಕಿನ ಕಾರ್ಖಾನೆ ವಿಸ್ತರಣೆ ಮಾಡಿದರೆ ಜಿಲ್ಲಾಕೇಂದ್ರವನ್ನೇ ಸ್ಥಳಾಂತರ ಮಾಡಬೇಕಾಗುತ್ತದೆ.
-ಮಂಜುನಾಥ ಅಂಗಡಿ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಸಂಚಾಲಕ
ಕಾರ್ಖಾನೆಗಳ ವಿಪರೀತ ದೂಳಿನಿಂದಾಗಿ ಕೃಷಿ ಭೂಮಿ ಕಣ್ಣೆದುರೇ ಹಾಳಾಗಿದೆ. ಸ್ವಂತ ಹೊಲವಿದ್ದರೂ ಇನ್ನೊಬ್ಬರ ಹೊಲದಲ್ಲಿ ಬೇರೆ ಊರಿಗೆ ಹೋಗಿ ಕೆಲಸ ಮಾಡುವ ದುಸ್ಥಿತಿ ಬಂದಿದೆ.