ಕೊಪ್ಪಳ: ‘ಆಡಳಿತಾತ್ಮಕ ತರಬೇತಿ ಕಾರ್ಯಾಗಾರಗಳು ಸ್ಥಿರ ಆಡಳಿತಕ್ಕೆ ಸಹಕಾರಿಯಾಗುತ್ತವೆ. ಉಪನ್ಯಾಸಕರು, ಪೋಷಕರು ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ವೃದ್ಧಿಸಲು ಮತ್ತು ಮಕ್ಕಳು ಉತ್ತಮ ಫಲಿತಾಂಶ ಗಳಿಸಲು ನೆರವಾಗುತ್ತವೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎಚ್. ಜಗದೀಶ ಹೇಳಿದರು.

ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರಿಗೆ ಶನಿವಾರ ನಡೆದ ಒಂದು ದಿನದ ಆಡಳಿತಾತ್ಮಕ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ‘ಕಾಲೇಜಿನ ಫಲಿತಾಂಶ ಸುಧಾರಣೆಗೆ ಉಪನ್ಯಾಸಕರ ಪರಿಶ್ರಮದ ಜೊತೆಗೆ ಪ್ರಾಚಾರ್ಯರ ಪಾತ್ರವೂ ಬಹಳ ದೊಡ್ಡದಿದೆ. ಕಾಲೇಜಿನ ಆಡಳಿತದ ನಿರ್ವಹಣೆ ಜೊತೆಗೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳನ್ನು ಒಟ್ಟೊಟ್ಟಿಗೆ ಕರೆದುಕೊಂಡು ಹೋಗುವ ಜವಾಬ್ಧಾರಿ ಪ್ರಾಚಾರ್ಯರ ಮೇಲಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಸಪ್ಪ ನಾಗೋಲಿ ಮಾತನಾಡಿ ‘ಪ್ರಾಚಾರ್ಯರು ಸಕಲ ಸಿಬ್ಬಂದಿಯ ನಂಬಿಕೆ, ವಿಶ್ವಾಸ, ಪ್ರೀತಿಯಿಂದ ಕೆಲಸ ನಿರ್ವಹಿಸಬೇಕು. ಆಗ ಮಾತ್ರ ಉತ್ತಮ ಬಾಂಧವ್ಯ ಬೆಳೆಯುತ್ತದೆ’ ಎಂದು ಹೇಳಿದರು.

ಡಯಟ್ನ ನಿವೃತ್ತ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಹಿರಿಯ ಪ್ರಾಚಾರ್ಯರಾದ ಅನಿಲಕುಮಾರ ಜಿ, ರಾಜಶೇಖರ ಪಾಟೀಲ್, ಶಿವಾನಂದ ಎ.ಆರ್, ಸಂಘದ ಕಾರ್ಯದರ್ಶಿ ಬಸವರಾಜ, ಕೋಶಾಧ್ಯಕ್ಷ ಶಾಂತಪ್ಪ ಟಿ.ಸಿ, ಪರೀಕ್ಷಾ ಸಂಚಾಲಕ ರವಿ ಚವ್ಹಾಣ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರಗೌಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ರಾಜ್ಯ ಮಟ್ಟದಲ್ಲಿ ಜಾನಪದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕವಿತಾ ಶಿವಪ್ಪ ಕಾಶಿಯಾರ ಹಾಗೂ ಜಂಪ್ರೋಪ್ ಕ್ರೀಡಾಕೂಟ ಆಯೋಜಿಸಿದ್ದ ಭೀಮಪ್ಪ ಗೊಲ್ಲರ್, ನಿವೃತ್ತ ಪ್ರಾಚಾರ್ಯ ಅನಿಲಕುಮಾರ ಮತ್ತು ಉತ್ತಮ ಕಾರ್ಯ ನಿರ್ವಹಿಸಿದ ಎಸ್.ವಿ.ಮೇಳಿ ಅವರನ್ನು ಸನ್ಮಾನಿಸಲಾಯಿತು.

ಸಂವಾದ ಕಾರ್ಯಕ್ರಮ

ನಂತರ ನಡೆದ ತರಬೇತಿಯಲ್ಲಿ ಕೆಸಿಎಸ್ಆರ್ ನಿಯಮಗಳು ಕುರಿತು ಕೃಷ್ಣಮೂರ್ತಿ ದೇಸಾಯಿ ನಗದು ಪುಸ್ತಕ ಮತ್ತು ವೋಚರ್ ನಿರ್ವಹಣೆ ಕುರಿತು ಶಾಂತಪ್ಪ ಟಿ.ಸಿ. ಪ್ರಾಚಾರ್ಯರ ಸವಾಲು ಮತ್ತು ಸಾಧ್ಯತೆಗಳು ಕುರಿತು ರಾಜಶೇಖರ ಪಾಟೀಲ್ ಇಎಸ್ಆರ್ ಮಾಹಿತಿ ಕುರಿತು ಎಂ.ಎಂ.ಖಾಜಿ ಎಚ್ಆರ್ಎಂಎಸ್ 2 ಒ ಮಾಹಿತಿ ಕುರಿತು ವಿದ್ಯಾಧರ ಮೇಘರಾಜ ಮಾಹಿತಿ ನೀಡಿದರು. ಸಂವಾದದಲ್ಲಿ ರವಿ ಚವ್ಹಾಣ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.