ಕನಕಗಿರಿ: ಪಟ್ಟಣದಲ್ಲಿರುವ ತಂದೆ-ತಾಯಿಯ ಯೋಗಕ್ಷೇಮ ವಿಚಾರಿಸಲು ಬರುತ್ತಿದ್ದ ಗೃಹಣಿಯೊಬ್ಬರು ದ್ವಿಚಕ್ರ ವಾಹನದ ಮೇಲಿಂದ ಬಿದ್ದು ಮೃತಪಟ್ಟ ಘಟನೆ ತಾಲ್ಲೂಕಿನ ವಡಕಿ ಗ್ರಾಮದ ಕ್ರಾಸ್ನಲ್ಲಿ ಶನಿವಾರ ನಡೆದಿದೆ.

ಕಾರಟಗಿ ಪಟ್ಟಣದ ಇಂದಿರಾನಗರ ಕಾಲೊನಿಯ ಬಿ.ಕೆ.ವಿಜಯಲಕ್ಷ್ಮೀ (51) ಮೃತರು.

ತಮ್ಮ ಸಹೋದರಿಯ ಮನೆಯಲ್ಲಿರುವ ತಂದೆ ವೀರಣ್ಣ ಶೆಟ್ಟಿ ಹಾಗೂ ತಾಯಿಯನ್ನು ಮಾತನಾಡಿಸಲು ವಿಜಯಲಕ್ಷ್ಮೀ ಅವರು ಕಾರಟಗಿಯಿಂದ ರಾಘವೇಂದ್ರ ಎಂಬುವವರೊಂದಿಗೆ ದ್ವಿ–ಚಕ್ರ ವಾಹನದಲ್ಲಿ ಬರುತ್ತಿದ್ದಾಗ ಬೈಕ್ ಸ್ಕಿಡ್ ಆಗಿದೆ. ಹಿಂಬದಿಯಲ್ಲಿ ಕುಳಿತಿದ್ದ ವಿಜಯಲಕ್ಷ್ಮೀ ಅವರ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹನುಮೇಶ ಯಲಬುರ್ಗಿ ಅವರು ನೀಡಿದ ದೂರಿನ ಅನ್ವಯ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.