ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಗಳು ಬದುಕಿನ ಪದ್ಧತಿಯಾಗಲಿ

ಸ್ವಾತಂತ್ರ್ಯ ಸೇನಾನಿ ಮುರುಡಿ ಭೀಮಜ್ಜ ಪುಣ್ಯತಿಥಿಯಲ್ಲಿ ಸಿಂಧ್ಯಾ ಅಭಿಮತ
Last Updated 13 ಜುಲೈ 2017, 7:01 IST
ಅಕ್ಷರ ಗಾತ್ರ

ಕುಷ್ಟಗಿ: ನಮ್ಮ ಸಂಸ್ಕೃತಿ, ಪರಂಪರೆ, ಮೌಲ್ಯಗಳನ್ನು ನಾವು ಮರೆಯುತ್ತಿದ್ದೇವೆ ಎಂದು ಮಾಜಿ ಸಚಿವ ಪಿಜಿಆರ್‌ ಸಿಂಧ್ಯಾ ಹೇಳಿದರು. ಇಲ್ಲಿಯ ಮುರುಡಿ ಭೀಮಜ್ಜ ಪ್ರತಿಷ್ಠಾನದ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭೀಮಜ್ಜ ಅವರ 61ನೆ ಪುಣ್ಯತಿಥಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಪುಂಡಲೀಕಪ್ಪ ಜ್ಞಾನಮೋಟೆ ಅವರ 4ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭೀಮಜ್ಜ ಅವರ  ಕುರಿತ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಗುರುಗಳು, ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿಯಾಗಿದೆ. ಮೌಲ್ಯಗಳು ಕೇವಲ ಮಾತಿಗೆ ಸೀಮಿತವಾಗದೆ ಅವು ಜೀವನದ ಪದ್ಧತಿಯಾಗಬೇಕು’ ಎಂದರು.

‘ಜಾತಿಮತ ಭೇದವಿಲ್ಲದೆ ಅದ್ವೈತ ಸಿದ್ಧಾಂತದ ಮಾದರಿಯಲ್ಲಿ ಸ್ವಾತಂತ್ರ್ಯ ಹೋರಾಟ ಸೇನಾನಿಗಳಿಗೆ ಮತ್ತು ಜನಾಂದೋಲನಕ್ಕೆ ಆಧ್ಯಾತ್ಮಿಕ ಪ್ರೇರಣೆ ನೀಡಿದ್ದ ಭೀಮಜ್ಜನವರದು ಜಾತ್ಯತೀತ ಮನೋಭಾವ.

ಭೀಮಜ್ಜ ಅವರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯ  ಚಳವಳಿಯ ಮುಂದಾಳತ್ವ ವಹಿಸಿ, ಎರಡು ಬಾರಿ ಶಾಸಕರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಪುಂಡಲೀಕಪ್ಪ ಜ್ಞಾನಮೋಟೆ ಮನಸ್ಸು ಮಾಡಿದ್ದರೆ ಅಧಿಕಾರದಲ್ಲಿದ್ದಾಗ ಏನನ್ನಾದರೂ ಗಳಿಸಬಹುದಿತ್ತು. ಆದರೆ, ಅವರು ಸರಳತೆ,  ಪ್ರಾಮಾಣಿಕತೆಯಿಂದ ನಡೆದುಕೊಂಡರು. ಇಂಥವರು ಇನ್ನೂ ಇದ್ದು, ಅವರನ್ನು ಗುರುತಿಸಿ ಆಯ್ಕೆ ಮಾಡುವುದು ಜನರ  ಧರ್ಮ’ ಎಂದು ಅಭಿಪ್ರಾಯಪಟ್ಟರು.

ಸಾನ್ನಿಧ್ಯ ವಹಿಸಿದ್ದ ನಾಮದೇವಾನಂದ ಭಾರತಿ ಸ್ವಾಮೀಜಿ,  ‘ಪುಂಡಲೀಕಪ್ಪ ಜ್ಞಾನಮೋಟೆ ಅವರ ಜೀವನ, ಯಶೋಗಾಥೆಯನ್ನು ಭವಿಷ್ಯದ ಪೀಳಿಗೆಗೆ ತಿಳಿಸುವ ಪ್ರಯತ್ನ ನಡೆಯಬೇಕು. ಆದರೆ, ಅವರ ಹೆಸರಿನಲ್ಲಿ ಒಂದು ವೃತ್ತವೂ ಪಟ್ಟಣದಲ್ಲಿ ಇಲ್ಲ. ಈ ಬಗ್ಗೆ ಅನೇಕ ವರ್ಷಗಳಿಂದ ಹೇಳುತ್ತಾ ಬಂದರೂ ಯಾರೂ ಗಮನಹರಿಸುತ್ತಿಲ್ಲ’ ಎಂದರು.
ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ‘ಪುಂಡಲೀಕಪ್ಪ ಅವರ ಜೀವನ, ಸಾಧನೆ ಕುರಿತ ಪುಸ್ತಕ ಪ್ರಕಟಿಸಿ ವಿಧಾನಸಭೆ  ಗ್ರಂಥಾಲಯದಲ್ಲಿರಿಸಲು ಪ್ರಯತ್ನಿಸುವುದಾಗಿ’ ಹೇಳಿದರು.

ಅಮೃತರಾಜ್ ಜ್ಞಾನಮೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಂಡುರಂಗ ಜ್ಞಾನಮೋಟೆ ಅವರ ಸ್ಮರಣಾರ್ಥ  ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.

ಇಳಕಲ್‌ನ ಡಾ.ವಿಜಯಮಹಾಂತ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಕೆ.ಶರಣಪ್ಪ,  ಸ್ವಾತಂತ್ರ್ಯ ಹೋರಾಟಗಾರ ಬಿ.ಕಿಶನ್‌ರಾವ್‌, ‘ಕ್ರಾಂತದರ್ಶಿ ಪರಮ ತಪಸ್ವಿ ಮುರುಡಿ ಭೀಮಜ್ಜ’ ಕೃತಿ ಲೇಖಕ ರಾಮಣ್ಣ ಹವಳೆ, ಸ್ವಾತಂತ್ರ್ಯ ಹೋರಾಟಗಾರ ಎನ್‌.ನರಸಿಂಗರಾವ್‌, ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಶಿವಪ್ಪ ನೀರಾವರಿ, ಪುಸ್ತಕ ಪ್ರಕಟಣೆ ದಾನಿ ದೇವೇಂದ್ರಪ್ಪ ಬಳೂಟಗಿ  ಇದ್ದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಟರಾಜ ಸೋನಾರ ಸ್ವಾಗತಿಸಿ, ಎ.ವೈ.ಲೋಕರೆ ನಿರೂಪಿಸಿದರು.

ಮೆರವಣಿಗೆ:  ಬೆಳಿಗ್ಗೆ ಜ್ಞಾನಮೋಟೆ ಅವರ ನಿವಾಸದಲ್ಲಿ ಬಳ್ಳಾರಿಯ ಪಾಂಡುರಂಗ ಭಜನಾ ಮಂಡಳಿ ಸದಸ್ಯರಿಂದ ಭಜನೆ, ಎಸ್‌.ಎಸ್‌.ಹಿರೇಮಠ ಅವರಿಂದ ಸಂಗೀತ ಸೇವೆ ನಡೆಯಿತು. ಪ್ರಮುಖ ಬೀದಿಗಳಲ್ಲಿ  ಮುರುಡಿ ಭೀಮಜ್ಜ ಅವರ ಭಾವಚಿತ್ರ ಮೆರವಣಿಗೆ ನಡೆಯಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT