ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮಸಾಗರ: ಖಾಸಗಿ ವಾಹನಗಳಿಂದ ಸಂಚಾರತಡೆ

Last Updated 16 ಅಕ್ಟೋಬರ್ 2012, 5:50 IST
ಅಕ್ಷರ ಗಾತ್ರ

ಹನುಮಸಾಗರ:  ಇಲ್ಲಿನ ಹಳೆ ಬಸ್‌ನಿಲ್ದಾಣದ ಎಡ ಬಲಗಳಲ್ಲಿ ಅವ್ಯವಸ್ಥಿತವಾಗಿ ಖಾಸಗಿ ವಾಹನಗಳು ನಿಲಗಡೆಯಾಗುತ್ತಿರುವುದರಿಂದ ನಾಗರಿಕ ವಾಹನಗಳಿಗೆ ತೀವ್ರ ಅಡತಡೆಯಾಗುತ್ತಿರುವುದು ಸೋಮವಾರ ಸಾಯಂಕಾಲ ಕಂಡು ಬಂದಿತು.

ವಿವಿಧ ಗ್ರಾಮಗಳಿಗೆ ಪ್ರಯಾಣಿಕರನ್ನು ಸಾಗಿಸಲೆಂದು ನಿಲ್ಲಿಸಲಾಗಿರುವ ಜೀಪ್, ಟ್ರ್ಯಾಕ್ಸ್‌ಗಳಿಗೆ ನಿಗದಿತ ಸ್ಥಳವಿಲ್ಲದಿರುವುದರಿಂದ ನೇರವಾಗಿ ಅವುಗಳನ್ನು ರಸ್ತೆಯ ಎಡಬಲಗಳಲ್ಲಿ ನಿಲ್ಲಿಸುವುದರಿಂದ ಅನೇಕ ದಿನಗಳಿಂದ ಈ ರಸ್ತೆಯಲ್ಲಿ ಆಗಾಗ ಸಂಚಾರ ಅಸ್ಯವ್ಯಸ್ಥವಾಗುವುದು ಸಾಮಾನ್ಯವಾಗಿದೆ.

ಸೋಮವಾರ ಇಲ್ಲಿ ಸಂತೆ ದಿನವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿದ್ದ ಖಾಸಗಿ ವಾಹನಗಳು ಎರ‌್ರಾಬಿರ‌್ರಿಯಾಗಿ ರಸ್ತೆಯ ಅಕ್ಕಪಕ್ಕ ನಿಂತಿದ್ದರಿಂದ ಎದಿರುಬದಿರಾಗಿ ಬಂದ ಸಾರಿಗೆ ವಾಹನಗಳಿಗೆ ಸೈಡ್ ತೆಗೆದುಕೊಳ್ಳಲು ಜಾಗೆಯೆ ಇಲ್ಲದಿದ್ದರಿಂದ ಕೆಲ ಕಾಲ ಅಲ್ಲಿಯೇ ನಿಲ್ಲುವಂತಾಯಿತು.
ರಸ್ತೆಯ ಬದಿಯಲ್ಲಿ ನಿಲ್ಲಿಸಿದ ವಾಹನಗಳನ್ನು ತೆರವುಗೊಳಿಸಲೆಂದು ಎರಡೂ ಬಸ್‌ಗಳಲ್ಲಿನ ನಿರ್ವಾಹಕರು ಕೆಳಗಿಳಿದು ಬಂದರೂ ಖಾಸಗಿ ವಾಹನಗಳ ಚಾಲಕರು ಮಾತ್ರ ಪತ್ತೆಯಾಗಲಿಲ್ಲ.

ಇನ್ನು ತನ್ನ ಪಾಳಿ ದೂರ ಇರುವುದರಿಂದ ಸಂಬಂಧಪಟ್ಟ ಜೀಪ್‌ನ ಚಾಲಕ ಸದ್ಯ ಬರುವ ಸಾಧ್ಯತೆ ಇಲ್ಲ ಎಂದು ಸುತ್ತಲಿನ ಸಾರ್ವಜನಿಕರು ಹೇಳಿದಾಗ ಅನಿವಾರ್ಯವಾಗಿ ಸರ್ಕಾರಿ ಬಸ್‌ಗಳ ನಿರ್ವಾಹಕರು ಜೀಪ್‌ಗಳನ್ನು ಮುಂದೆ ತಳ್ಳಿ ತಮ್ಮ ವಾಹನಗಳನ್ನು ಸಾಗಿಸಿಕೊಂಡು ಹೋಗುವಂತಾಯಿತು.

ಹನುಮಸಾಗರ ಹಳೆ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ದರ್ಬಾರು ಹೆಚ್ಚಾಗಿದ್ದು ಇವುಗಳಿಗೆ ಕಡಿವಾಣ ಹಾಕಬೇಕು, ಅಲ್ಲದೆ ನಡೆದಾಡಲು ರಸ್ತೆ ಇಲ್ಲದಂತೆ ತಮ್ಮ ವಾಹನಗಳನ್ನು ನಿಲ್ಲಿಸುವುದರ ಜೊತೆಗೆ ವಾಹನಗಳ ಚಾಲಕರು ಮಾತನಾಡುತ್ತಾ ರಸ್ತೆಯ ಮಧ್ಯೆದಲ್ಲಿಯೇ ನಿಲ್ಲುವುದರಿಂದ ಪಾದಚಾರಿಗಳಿಗೆ ಹಾಗೂ ದ್ವಿಚಕ್ರ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಜನ ದೂರಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT