ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ರಾಷ್ಟ್ರ ಭಾಷೆ ಅಲ್ಲ: ಬೆಟ್ಟದೂರು

Last Updated 17 ಜುಲೈ 2017, 5:38 IST
ಅಕ್ಷರ ಗಾತ್ರ

ಹನುಮಸಾಗರ: ‘ನಮ್ಮದು ಬಹುಭಾಷೆ ಮತ್ತು ಬಹು ಸಂಸ್ಕೃತಿಗಳ ದೇಶ ವಾಗಿದ್ದು, ಕನ್ನಡದಂತೆ ಹಿಂದಿಯೂ ಒಂದು ಭಾಷೆಯಾಗಿದೆ. ಹಿಂದಿ ರಾಷ್ಟ್ರ ಭಾಷೆಯಲ್ಲ. ಅದು ಸಂಪರ್ಕ ಭಾಷೆ ಮಾತ್ರ’ ಎಂದು ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟರು.

ಭಾನುವಾರ ಇಲ್ಲಿನ ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿ ತಿರುಳ್ಗನ್ನಡ ಸಾಹಿತಿಗಳ ಸಹಕಾರಿ ಸಂಘ ಹಾಗೂ ಚಿಗಿ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜನರಿಗಾಗಿ ಸಾಹಿತ್ಯದ ಮುಖಾಮುಖಿ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂಗ್ಲಿಷ್ ಕಲಿತರೆ ಮಾತ್ರ ನೌಕರಿ ಸಿಗುತ್ತದೆ ಎಂಬ ಭಾವನೆ ಬಿಡಬೇಕು. ಇಂಗ್ಲಿಷ್ ಒಂದು ವಿಷಯವನ್ನಾಗಿ ಕಲಿ ಯಬೇಕು. ಕನ್ನಡದಿಂದ ಸೃಜನಶೀಲತೆ ಹೆಚ್ಚುತ್ತದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರ ಸ್ಥಾನ ಸಿಗಬೇಕು’ ಎಂದು ಹೇಳೀದರು.

ಗಂಗಾವತಿಯ ಪ್ರಾಧ್ಯಾಪಕ ಡಾ.ಜಾಜಿ ದೇವೇಂದ್ರಪ್ಪ ಮಾತನಾಡಿ, ‘ಮೊಬೈಲ್, ಟಿ.ವಿ, ಕಂಪ್ಯೂಟರ್‌ಗಳ ಭರಾಟೆಯಲ್ಲಿ ಮಕ್ಕಳು ಪುಸ್ತಕಗಳನ್ನು ಓದುತ್ತಿಲ್ಲ.  ಮಕ್ಕಳಲ್ಲಿ ಸಾಹಿತ್ಯದ ಅಭಿ ರುಚಿ  ಕಡಿಮೆಯಾಗುತ್ತಿದೆ’ ಎಂದು ವಿಷಾದಿಸಿದರು.

ನಿವೃತ್ತ ಪ್ರಾಚಾರ್ಯ ಎಚ್.ಎಂ. ಭೂತನಾಳ ಮಾತನಾಡಿ, ‘ಸದ್ಯ ಮಕ್ಕ ಳಿಗೆ ಬೇಕುಗಳು ಕಡಿಮೆಯಾಗಿ ಬೇಡಾದ ವುಗಳೇ ಜಾಸ್ತಿಯಾಗಿವೆ. ಮಕ್ಕಳಿಗಾಗಿ ಹಿರಿಯರು ಮಕ್ಕಳ ಸಾಹಿತ್ಯ ರಚಿಸುತ್ತಾರೆ. ಮುಂದಿನ ದಿನಮಾನಗಳಲ್ಲಿ ಮಕ್ಕಳೇ ಮಕ್ಕಳ ಸಾಹಿತ್ಯವನ್ನು ರಚಿಸುವಂತಾ ಗಬೇಕು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಹಕಾರ ಇಲಾಖೆಯ ನಿವೃತ್ತ ನಿರ್ದೇಶಕಿ ಹನುಮಾಕ್ಷಿ ಗೋಗಿ ಮತ್ತು ಸಾಹಿತಿ ಡಾ.ಕೆ.ಬಿ.ಬ್ಯಾಳಿ ಮಾತನಾಡಿದರು. ಮಹಾಂತೇಶ ಚೌಡಾಪೂರ ಮಕ್ಕಳಿಗಾಗಿ ಬರೆದ ‘ನಾ ಸಣ್ಣಾವ ನಾ’ ಕವನ ಸಂಕಲನದ ವಿಮರ್ಶೆ ನಡೆಯಿತು.

ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಕಾರ್ಯದರ್ಶಿ ವೈ.ಬಿ.ಜೂಡಿ, ನಿಸರ್ಗ ಸಂಗೀತ ಶಾಲೆಯ ಮುಖ್ಯಸ್ಥ ಮಲ್ಲಯ್ಯ ಕೋಮಾರಿ, ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಜಹಗೀರದಾರ ಹಾಗೂ ಅಧ್ಯಕ್ಷ ಚಂದಪ್ಪ ಹಕ್ಕಿ, ಲಂಕೇಶ ವಾಲೀಕಾರ, ಗ್ರಾಮ ಪಂಚಾಯಿತಿ ಸದಸ್ಯೆ ಸುನಂದಾ ಶಿನ್ನೂರ, ವೆಂಕಪ್ಪ ಗಂಜಿಹಾಳ, ಮುಖ್ಯ ಶಿಕ್ಷಕಿ ಭಾರತಿ ದೇಸಾಯಿ, ಭೂದಾನಿ ಚಂದಪ್ಪ ಗುರಿಕಾರ, ಮಹಾಂತೇಶ ಚೌಡಾಪೂರ, ಬಸವರಾಜ ಚೌಡಾಪುರ, ಪಿ.ವೈ. ಮಾಲಿಪಾಟೀಲ, ಶರಣಪ್ಪ ದಮ್ಮೂರ, ಹನುಮಂತಪ್ಪ ಬೋದೂರ, ಖಾಜಾ ಹುಸೇನ ವಂಟೆಳಿ ಇದ್ದರು. ಲೆಂಕಪ್ಪ ವಾಲೀಕಾರ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಚೌಡಾಪುರ ವಂದಿಸಿದರು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT