ಮಂಗಳವಾರ, ನವೆಂಬರ್ 12, 2019
27 °C

ಕುವೆಂಪು ವಿವಿ ಪರೀಕ್ಷೆ ಮುಂದೂಡಿಕೆ

Published:
Updated:

ಶಂಕರಘಟ್ಟ: ನ. 9ರಂದು ನಿಗದಿಯಾಗಿದ್ದ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಎಲ್ಲಾ ಪದವಿ ಪರೀಕ್ಷೆಗಳನ್ನು (ಬಿ.ಇಡಿ ಸೇರಿ) ಅಯೋಧ್ಯೆ ಕುರಿತ ತೀರ್ಪು ಹೊರಬರುವ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

ಶನಿವಾರ ನಡೆಯಬೇಕಿದ್ದ ಪರೀಕ್ಷೆಗಳ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಕುಲಸಚಿವ (ಪರೀಕ್ಷಾಂಗ) ಪ್ರೊ. ಎಂ ವೆಂಕಟೇಶ್ವರುಲು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)