ಮದ್ದೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶಗಳನ್ನು ಹಾಕುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ.
ತಾಲ್ಲೂಕಿನ ವೈದ್ಯನಾಥಪುರ ಗ್ರಾಮದ ಸಿದ್ದಪ್ಪಾಜಿ ಹಲವಾರು ಬಾರಿ ಮುಖ್ಯಮಂತ್ರಿ ವಿರುದ್ಧ ನಿಂದನಾ ಸಂದೇಶಗಳು ಹಾಗೂ ವಿಡಿಯೊಗಳನ್ನು ಹರಿಯಬಿಡುತ್ತಿದ್ದರು ಎಂದು ದೂರಿ ಅದೇ ಗ್ರಾಮದ ಗೋವಿಂದರಾಜು ಎಂಬುವರು ಪಟ್ಟಣದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಗೋವಿಂದರಾಜು ನ್ಯಾಯಾಲಯದ ಮೊರೆಹೋಗಿದ್ದರು, ಪಟ್ಟಣದ 2 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೋನಪ್ಪ ವಿಚಾರಣೆ ನಡೆಸಿ, ಭಾರತೀಯ ನ್ಯಾಯ ಸಂಹಿತೆ 352ರ ಅನ್ವಯ ಪ್ರಕರಣ ದಾಖಲಿಸುವಂತೆ ಅದೇಶಿಸಿದ್ದಾರೆ.