ಅಕ್ರಮ ಆಸ್ತಿ: ಬಸವರಾಜೇಗೌಡ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

7

ಅಕ್ರಮ ಆಸ್ತಿ: ಬಸವರಾಜೇಗೌಡ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

Published:
Updated:
Deccan Herald

ಮಂಡ್ಯ: ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಬಸವರಾಜೇಗೌಡ ಅವರ ಮನೆ ಹಾಗೂ ಕಚೇರಿಯ ಮೇಲೆ ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬಸವರಾಜೇಗೌಡ ಅವರಿಗೆ ಸೇರಿದ ಬೆಂಗಳೂರಿನ ನಿವಾಸ, ಕೆಆರ್‌ಎಸ್‌ನಲ್ಲಿರುವ ಕಾವೇರಿ ನೀರಾವರಿ ನಿಗಮದ ಕಚೇರಿ ಹಾಗೂ ಅವರ ವಸತಿ ಗೃಹದ ಮೇಲೆ ಎಸಿಬಿ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದರು. ಬೆಳಿಗ್ಗೆ 6ಕ್ಕೆ ಆರಂಭವಾದ ಪರಿಶೀಲನಾ ಕಾರ್ಯ ರಾತ್ರಿ 8 ಆದರೂ ಮುಂದುವರಿದಿತ್ತು.

‘ಬಸವರಾಜೇಗೌಡರ ವಿರುದ್ಧ ದಾಖಲಾಗಿದ್ದ ಹಲವು ದೂರುಗಳ ಕಾರಣ ದಾಳಿ ನಡೆಸಲಾಗಿದೆ. ಬೆಂಗಳೂರಿನ ಪಾಪರೆಡ್ಡಿ ಪಾಳ್ಯದಲ್ಲಿ ಒಂದು ಮನೆ ಇದೆ. ಮೈಸೂರಿನಲ್ಲಿ ಎರಡು ನಿವೇಶನಗಳಿವೆ. ಅವರ ಹೆಸರಿನಲ್ಲಿ ಎರಡು ಕಾರುಗಳಿವೆ. ಮದ್ದೂರು ತಾಲ್ಲೂಕಿನ ಎಸ್‌.ಹಾಗಲಹಳ್ಳಿ ಗ್ರಾಮದಲ್ಲಿ ಜಮೀನು ಖರೀದಿ ಮಾಡಿರುವ ಮಾಹಿತಿ ಸಿಕ್ಕಿದೆ. ಪರಿಶೀಲನಾ ಕಾರ್ಯ ಮುಂದುವರಿದಿದೆ’ ಎಂದು ಎಸಿಬಿ ಡಿಎಸ್‌ಪಿ ಶೈಲೇಂದ್ರ ಕುಮಾರ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !