ಹೊಸಹಳ್ಳಿ: ಶಾಸಕ ಅನ್ನದಾನಿ ವಾಸ್ತವ್ಯ

7

ಹೊಸಹಳ್ಳಿ: ಶಾಸಕ ಅನ್ನದಾನಿ ವಾಸ್ತವ್ಯ

Published:
Updated:
Deccan Herald

ಮಳವಳ್ಳಿ: ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ತಿಳಿದು ಅವುಗಳನ್ನು ಪರಿಹರಿಸುವುದಕ್ಕಾಗಿ ಗ್ರಾಮಗಳಲ್ಲಿ ಜನಸಂಪರ್ಕ ಸಭೆ ಹಾಗೂ ಗ್ರಾಮ ವಾಸ್ತವ್ಯ ಮಾಡುತ್ತಿದ್ದು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.

ತಾಲ್ಲೂಕಿನ ಬಿ.ಜಿ.ಪುರ, ಬೆಳಕವಾಡಿ ಹಾಗೂ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ತಾಲ್ಲೂಕುಮಟ್ಟದ ಅಧಿಕಾರಿಗಳೊಡನೆ ಸಭೆ ನಡೆಸಿ ನಂತರ ಹೊಸಹಳ್ಳಿ ಗ್ರಾಮದ ಜಯಣ್ಣ ಅವರ ಮನೆಯಲ್ಲಿ ವಾಸ್ತವ್ಯ ಮಾಡಿ ಅವರು ಮಾತನಾಡಿದರು.

ಈ ವ್ಯಾಪ್ತಿಗೆ ಮಾಧವಮಂತ್ರಿ ನಾಲೆಯಿಂದ ನೀರು ತಲುಪುತ್ತಿಲ್ಲ, ನಾಲೆ ಹೂಳು ತೆಗೆಸಬೇಕು, ಕೆಂಪೇಗೌಡರ ಭವನ ನಿರ್ಮಾಣ ಮಾಡಬೇಕು, ಅಂಬೇಡ್ಕರ್ ಭವನ ದುರಸ್ತಿಗೊಳಿಸಬೇಕು, ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಎರಡು ಗ್ರಾಮಗಳ ಪರಿಮಿತಿ ರಸ್ತೆ ಸರಿಪಡಿಸಬೇಕು, ಮಳವಳ್ಳಿಯಿಂದ ಕೊಳ್ಳೆಗಾಲ, ಕೊಳ್ಳೇಗಾಲದಿಂದ ಮಳವಳ್ಳಿಗೆ ಸಾರಿಗೆ ಬಸ್‌ಗಳು ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗುತ್ತಿದ್ದು ಅವುಗಳನ್ನು ಹೊಸಹಳ್ಳಿ, ಬೆಳಕವಾಡಿ ಮೂಲಕ ಸಂಚರಿಸಲು ಕ್ರಮ ತೆಗೆದುಕೊಳ್ಳಬೇಕು ಎಂಬ ಬೇಡಿಕೆ ಸೇರಿದಂತೆ 15ಕ್ಕೂ ಹೆಚ್ಚಿನ ಬೇಡಿಕೆಯುಳ್ಳ ಮನವಿಪತ್ರವನ್ನು ಹೊಸಹಳ್ಳಿ ಗ್ರಾಮಸ್ಥರು ಸಲ್ಲಿಸಿದರು.

ನಾಲೆ ಹೂಳು ತೆಗೆಸಲು ಎಂಜಿನಿಯರ್ ಸ್ಥಳದಲ್ಲೇ ಇದ್ದು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ತಹಶೀಲ್ದಾರ್ ದಿನೇಶ್‌ಚಂದ್ರ, ಇಒ ಸತೀಶ್, ಸಾರಿಗೆ ಡಿಪೊ ವ್ಯವಸ್ಥಾಪಕ ಶಾಂತಕುಮಾರ್, ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರೇಂಕುಮಾರ್, ಪರಮೇಶ್ವರಪ್ಪ, ಕಾವೇರಿ ನೀರಾವರಿ ನಿಗಮದ ಬನ್ನೂರು ವಿಭಾಗದ ಸಹಾಯಕ ಎಂಜಿನಿಯರ್ ಸತೀಶ್, ಮುಖಂಡರಾದ ಮಲ್ಲೇಗೌಡ, ಅಶ್ವತ್ಥ್‌, ಶಿವಶಂಕರ್ ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !