ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತದಿನಗಳತ್ತ ಕೆಆರ್‌ಎಸ್ ಜಲಾಶಯದ ನೀರಿನ ಗರಿಷ್ಠ ಮಟ್ಟ

Last Updated 20 ನವೆಂಬರ್ 2019, 17:29 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯವು 97 ದಿನಗಳಿಂದ ಸತತವಾಗಿ ತನ್ನ ಗರಿಷ್ಠ ಮಟ್ಟ (124.80 ಅಡಿ) ಕಾಯ್ದುಕೊಂಡಿದ್ದು, ದಾಖಲೆಯ ಶತದಿನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಆಗಸ್ಟ್‌ 15ರಂದು ಗರಿಷ್ಠ ಮಟ್ಟ ತಲುಪಿದ್ದ ಈ ಜಲಾಶಯದಲ್ಲಿ ನ. 19ರ ಸಂಜೆಯವರೆಗೇ ಅಷ್ಟೇ ಪ್ರಮಾಣದ ನೀರಿನ ಸಂಗ್ರಹವಿತ್ತು. ಬುಧವಾರ ಬೆಳಿಗ್ಗೆ ಜಲಾಶಯದ ನೀರಿನ ಮಟ್ಟದಲ್ಲಿ (124.77 ಅಡಿ) ತುಸು ಇಳಿಕೆಯಾಗಿದೆ.

‘2007ರಲ್ಲಿ ಜಲಾಶಯದಲ್ಲಿ ಸತತವಾಗಿ 62 ದಿನ ಜಲಾಶಯದಲ್ಲಿ ಗರಿಷ್ಠ ಮಟ್ಟದ ನೀರು ಸಂಗ್ರಹವಾಗಿತ್ತು. ಕೆಲದಿನ ಏರಿಳಿತ ಉಂಟಾಗಿ 99ನೇ ದಿನದವರೆಗೆ ಗರಿಷ್ಠ ಮಟ್ಟದಲ್ಲಿ ನೀರು ತುಂಬಿತ್ತು’ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್‌ ವಾಸುದೇವ್‌ ತಿಳಿಸಿದರು.

ಜಲಾಶಯ ನಿರ್ಮಾಣಗೊಂಡು 87 ವರ್ಷ (1932ರಲ್ಲಿ ಕಾಮಗಾರಿ ಪೂರ್ಣ) ಕಳೆದಿವೆ. ಒಟ್ಟು 49.452 ಟಿ.ಎಂ.ಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ಈ ಬಾರಿ ಕೇವಲ ನಾಲ್ಕು ದಿನಗಳಲ್ಲಿ ಭರ್ತಿಯಾಯಿತು. ಇದೊಂದು ದಾಖಲೆ ಕೂಡ.

ಸದ್ಯ 5,083 ಕ್ಯುಸೆಕ್‌ ಒಳಹರಿವು ಇದೆ. 4,873 ಕ್ಯುಸೆಕ್‌ ನೀರನ್ನು ಹೊರ ಹರಿಸಲಾಗುತ್ತಿದೆ. ಕಳೆದ ವರ್ಷ ಈ ಅವಧಿಯಲ್ಲಿ 119.05 ಅಡಿ ನೀರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT