ಸೋಮವಾರ, ಜೂನ್ 14, 2021
22 °C

ಕೆಆರ್‌ಎಸ್‌ ಜಲಾಶಯಕ್ಕೆ ಒಳಹರಿವು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಬುಧವಾರ ಸಂಜೆಯ ವೇಳೆಗೆ ಒಳಹರಿವು 29,955 ಕ್ಯುಸೆಕ್‌ ದಾಖಲಾಗಿತ್ತು.

ಒಳಹರಿವು ಹೆಚ್ಚಾಗಿರುವ ಕಾರಣ 24 ಗಂಟೆಯ ಅವಧಿಯಲ್ಲಿ ಜಲಾಶಯಕ್ಕೆ 2.30 ಅಡಿ ನೀರು ಹರಿದು ಬಂದಿದೆ. ಆ.4ರಂದು ಸಂಜೆ 106.10 ಅಡಿ ಇದ್ದ ಜಲಾಶಯದ ನೀರಿನ ಮಟ್ಟದ ಬುಧವಾರ ಸಂಜೆಯ ವೇಳೆಗೆ 108.40 ಅಡಿಗೆ ತಲುಪಿದೆ. 4,715 ಕ್ಯುಸೆಕ್‌ ಹೊರಹರಿವು ಇದೆ. ಜಲಾಶಯದಲ್ಲಿ 30.144 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು