ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ: ಮಾಂಡವ್ಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಮಾಂಡವ್ಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
Published : 1 ಅಕ್ಟೋಬರ್ 2024, 11:28 IST
Last Updated : 1 ಅಕ್ಟೋಬರ್ 2024, 11:28 IST
ಫಾಲೋ ಮಾಡಿ
Comments

ಮಂಡ್ಯ: ನಗರದಲ್ಲಿ ಈಚೆಗೆ ನಡೆದ ಕ್ರೀಡಾಕೂಟದಲ್ಲಿ ಮಾಂಡವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆಯಾದರು.

ಬ್ಯಾಸ್ಕೆಟ್‌ಬಾಲ್‌ನಲ್ಲಿ 8ನೇ ತರಗತಿಯ ಎಲ್‌.ಚಿನ್ಮಯ್‌ಗೌಡ, ಎಸ್‌.ಶ್ರೇಯಸ್ ಹಾಗೂ ಈಜು ಸ್ಪರ್ಧೆಯಲ್ಲಿ ಎಂ.ಎಸ್‌.ಶಶಾಂಕ್ ಅವರು ಜಿಲ್ಲಾ ಮಟ್ಟ ಮತ್ತು ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರು.

ಬಾಲ್ ಬ್ಯಾಡ್ಮಿಂಟನ್‌ (ಬಾಲಕಿಯರ ವಿಭಾಗ): ದುರ್ಗಾ, ಹೇಮಲತಾ, ಉಮ್ಮೆ ಐಮನ್, ಸಿಂಧೂ, ಸಿಂಚನಾ, ಹರ್ಷದಾ, ಕೀರ್ತನಾ, ರಕ್ಷಾ, ಪ್ರತಿಕ್ಷ, ಮಹಾಲಕ್ಷ್ಮಿ, ಬಾಲಕರ ವಿಭಾಗ: ಸಿದ್ದಾರ್ಥ್, ಅಯಾನ್, ಕುಶಾಲ್, ರಿಹಾನ್, ಯೂನಸ್, ತೇಜಸ್, ತೋಹಿದ್, ಅವೇಜ್, ಶ್ರೀಧರ, ಮಹಾದೇವ ಪ್ರಸಾದ್, ರೋಹಿತ್, ರವಿ ಅವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಎಸ್‌ಬಿಟಿ ಸಂಸ್ಥೆಯ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಮತ್ತು ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅವರು ವಿಜೇತರನ್ನು ಅಭಿನಂದಿಸಿದರು.

ಮುಖ್ಯ ಶಿಕ್ಷಕ ಮಹದೇವಯ್ಯ, ಶೈಕ್ಷಣಿಕ ಪಾಲುದಾರರಾದ ಅವಿನಾಶ್ ಎಂ.ಮಾರಗೌಡನಹಳ್ಳಿ, ಎಂ.ಪಿ.ಮೋಹನ್, ಡಿ.ಎಸ್‌.ರಾಘವೇಂದ್ರ, ಶಿಕ್ಷಕರಾದ ಸಿದ್ದರಾಜು, ಅಬ್ದುಲ್ ಮುನೀರ್, ಪ್ರೇಮಾ, ಆಶಾ, ಸ್ಮಿತಾ, ರಾಮಕೃಷ್ಣ ಎ.ಸಿ.ರಂಜಿತಾ, ಹಂಸಿಣಿ, ದೈಹಿಕ ಶಿಕ್ಷಣ ಶಿಕ್ಷಕ ಗೌತಮ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT