ಬುಧವಾರ, ಅಕ್ಟೋಬರ್ 23, 2019
21 °C

ಈಗಲೂ ನಾನೇ ಶಾಸಕ: ನಾರಾಯಣಗೌಡ

Published:
Updated:
Prajavani

ಕೆ.ಆರ್‌.ಪೇಟೆ: ‘ಸುಪ್ರೀಂಕೋರ್ಟ್ ಉಪ ಚುನಾವಣೆಯನ್ನು ಮುಂದೂಡಿ ರುವುದು ಸಂತಸ ತಂದಿದೆ. ಇದು ನಮ್ಮ ಗೆಲುವು’ ಎಂದು ಅನರ್ಹ ಶಾಸಕ ನಾರಾಯಣಗೌಡ ಹೇಳಿದರು.

ತಮ್ಮ ನಿವಾಸದಲ್ಲಿ ಸಂಭ್ರಮಾಚರಣೆ ಮಾಡಿದ ಅವರು, ‘ನಾವು ತಪ್ಪು ಮಾಡಿಲ್ಲ. ನಮ್ಮ ಸ್ವಾತಂತ್ರ್ಯವನ್ನು ಹರಣ ಮಾಡಿ ಗುಲಾಮರನ್ನಾಗಿಸಿದ್ದ ಪಕ್ಷ ನಮಗೆ ಬೇಕಿರಲಿಲ್ಲ. ಹಾಗಾಗಿ ಹೊರಬಂದು ರಾಜೀನಾಮೆ ನೀಡಿದ್ದೆವು. ಸ್ಪೀಕರ್ ನಿಸ್ಪಕ್ಷಪಾತವಾಗಿ ನಡೆದುಕೊಳ್ಳದೆ ನಮ್ಮನ್ನು ದುರುದ್ದೇಶದಿಂದ ಅನರ್ಹ ಗೊಳಿಸಿದ್ದಾರೆ. ಸ್ಪೀಕರ್ ಒತ್ತಡಕ್ಕೆ ಒಳಗಾಗಿ ತಪ್ಪು ನಿರ್ಧಾರ ಮಾಡಿದ್ದಾರೆ. ನಾವು ಇವತ್ತಿಗೂ ಶಾಸಕರೇ ಆಗಿದ್ದೇವೆ. ನಾವು ರಾಜೀನಾಮೆ ನೀಡಿರುವುದು ನಮಗಾದ ತೊಂದರೆಯಿಂದ ಮಾತ್ರ’ ಎಂದು ತಿಳಿಸಿದರು.

‘ನಮ್ಮ ವಾದವನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿ, ಚುನಾವಣೆ ಯನ್ನು ಮುಂದೂಡಿದೆ’ ಎಂದು ಹೇಳಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)