ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸುವಿನಹಳ್ಳಿ: ಸಿಡಿಲು ಬಡಿದು ವೃದ್ಧೆ ಸಾವು

Last Updated 16 ಅಕ್ಟೋಬರ್ 2019, 9:18 IST
ಅಕ್ಷರ ಗಾತ್ರ

ನಾಗಮಂಗಲ:‌ ತಾಲ್ಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ಪುಟ್ಟತಾಯಮ್ಮ (62) ಮೃತಪಟ್ಟಿದ್ದಾರೆ.

ಸಂಜೆ 4.30 ಸುಮಾರಿಗೆ ಹೊಲದಲ್ಲಿ ಪುಟ್ಟತಾಯಮ್ಮಕೆಲಸ ಮಾಡುತ್ತಿದ್ದರು. ಈ ವೇಳೆ, ಜೋರು ಮಳೆ ಬಿದ್ದಿದ್ದು, ಮರದ ಕೆಳಗೆ ನಿಂತಿದ್ದಾರೆ. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಅಸುನೀಗಿದ್ದಾರೆ.

ಸ್ಥಳಕ್ಕೆ ಗ್ರಾಮ ಲೆಕ್ಕಿಗರಾದ ಕುಮಾರ್, ಅನಿಲ್ ಕುಮಾರ್ ಮತ್ತು ರಾಜಸ್ವನಿರೀಕ್ಷ ಮಲ್ಲಿಕಾರ್ಜುನ್ ಭೇಟಿ ನೀಡಿ ಪರಿಶೀಲಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆಸ್ಪತ್ರೆಗೆ ಉಪವಿಭಾಗಾಧಿಕಾರಿ ಶೈಲಜಾ, ತಹಶೀಲ್ದಾರ್ ರೂಪಾ ಭೇಟಿ ನೀಡಿ ಪರಿಶೀಲಿಸಿದರು.

ಮೃತರ ಕುಟುಂಬಸ್ಥರಿಗೆ ₹5 ಲಕ್ಷ ಪರಿಹಾರದ ಚೆಕ್‌ ವಿತರಿಸಲಾಯಿತು.

ವಿವಿಧೆಡೆ ಮಳೆ

ನಾಗಮಂಗಲ ಪಟ್ಟಣ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಮಂಗಳವಾರ ಮಳೆ ಸುರಿಯಿತು.

ಸಂಜೆ 4 ಗಂಟೆಗೆ ಪ್ರಾರಂಭವಾದ ಮಳೆ 6.30ರವರೆಗೆ ಸುರಿಯಿತು. ಪಟ್ಟಣ ಸೇರಿದಂತೆ ಬಸವೇಶ್ವರ ನಗರ, ಬ್ರಹ್ಮದೇವರಹಳ್ಳಿ, ಉಪ್ಪಾರಹಳ್ಳಿ, ಮುಳಕಟ್ಟೆ, ಕೊಣನೂರು, ಹೊಸೂರು, ಕಲ್ಲುದೇವನಹಳ್ಳಿ, ಮದಲಹಳ್ಳಿ, ಕೋಟೆಬೆಟ್ಟ, ಪಾಲಾಗ್ರಹಾರ ಭಾಗದಲ್ಲಿ ಉತ್ತಮ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT